ವಿವಾದಿತ ದತ್ತಪೀಠದಲ್ಲಿ ಜಿಲ್ಲಾಡಳಿತದಿಂದ ಉರುಸ್ ಆಚರಣೆಗೆ ಮುಸ್ಲಿಂ ಮುಖಂಡರ ವಿರೋಧ

By Suvarna News  |  First Published Mar 8, 2023, 8:54 PM IST

ಮುಸ್ಲಿಂ ಮುಖಂಡರ ವಿರೋಧ ನಡುವೆಯೂ ವಿವಾದಿತ ದತ್ತಪೀಠದಲ್ಲಿ ಜಿಲ್ಲಾಡಳಿತದಿಂದ ಉರುಸ್ ಗೆ ಚಾಲನೆ ದೊರೆತಿದೆ. ಮೂರು ದಿನಗಳ ಕಾಲ ನಡೆಯುವ ಆಚರಣೆಗೆ ಮುಸ್ಲಿಂ ಸಮುದಾಯ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.8): ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಇಂದಿನಿಂದ ಆರಂಭವಾಗುವ ಮೂರು ದಿನಗಳ ಉರುಸ್ ಆಚರಣೆಗೆ ಮುಸ್ಲಿಂ ಸಮುದಾಯ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದೆ. ದತ್ತಪೀಠದ ಆಡಳಿತಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ದತ್ತಪೀಠ ವ್ಯವಸ್ಥಾಪನ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿರುವ ಕೆಲ ಮುಸ್ಲಿಂ ಸಮುದಾಯ ಮುಖಂಡರು  ಉರುಸ್ನಿಂದ ದೂರ ಉಳಿದ್ದಾರೆ. ವ್ಯವಸ್ಥಾಪನ ಮಂಡಳಿ ಹಾಗೂ ಜಿಲ್ಲಾಡಳಿದ ಮುಂದಾಳತ್ವದಲ್ಲಿ ಉರುಸ್ ಆಚರಣೆಯನ್ನ ತಿರಸ್ಕಿರಿಸಿರುವ ಮುಸ್ಲಿಂ ಸಮುದಾಯ ಮುಖಂಡರು ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದೆ. ಇದರ ನಡುವೆಯೂ ಜಿಲ್ಲಾಡಳಿತ ಕೋರ್ಟ್ ನ ಆದೇಶದಂತೆ  ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ 3 ದಿನಗಳ ಕಾಲ ನಡೆಯುವ ಉರುಸ್ ಗೆ ಚಾಲನೆ ನೀಡಿದರು. 

Latest Videos

undefined

ವಿರೋಧ ನಡುವೆಯೂ ಉರುಸ್ ಗೆ ಚಾಲನೆ:
ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ದತ್ತಾತ್ರೇಯ ಹಾಗೂ ಸೂಫಿ-ಸಂತರು ತಪಸ್ಸು ಮಾಡಿದ್ದ ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಉಮೇದುವಾರಿಕೆ ವಿವಾದಕ್ಕೆ 3 ದಶಕಗಳ ಇತಿಹಾಸವಿದೆ. ಆ ವಿವಾದಕ್ಕೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಆದ್ರೀಗ, ಆ ವಿವಾದ ಸರ್ಕಾರ ಕೋರ್ಟ್ ನ ನಿದೇರ್ಶನದಂತೆ ದತ್ತಪೀಠಕ್ಕೆ ಆಡಳಿತ ಮಂಡಳಿಯನ್ನ ನೇಮಿಸಿದ ಬಳಿಕ ಮತ್ತಷ್ಟು ಉಲ್ಬಣಗೊಂಡಿದೆ. ಯಾಕಂದ್ರೆ, ವ್ಯವಸ್ಥಾಪನ ಮಂಡಳಿ ಹಾಗೂ ಜಿಲ್ಲಾಡಳಿದ ಮುಂದಾಳತ್ವದಲ್ಲಿ ಉರುಸ್ ಆಚರಣೆಯನ್ನ ತಿರಸ್ಕಿರಿಸಿರುವ ಮುಸ್ಲಿಂ ಸಮುದಾಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.  ಸರ್ಕಾರ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಿಸಿದ ಬಳಿಕ ದತ್ತಪೀಠದಲ್ಲಿ ದತ್ತ ಜಯಂತಿಯಂದು ಹೋಮ-ಹವನ, ಪೂಜೆ-ಪುನಸ್ಕಾರಗಳ ಮೂಲಕ ಅದ್ಧೂರಿ ದತ್ತಜಯಂತಿ ನಡೆದಿತ್ತು.

ಇದೀಗ, ಮುಸ್ಲಿಮರು ನಮಗೂ ನಮ್ಮ ಪದ್ಧತಿಯಂತೆ ಪೂಜೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ  ಉರುಸ್ ಆಚರಣೆಗೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಉರುಸ್ ಆಚರಣೆ ಮಾಡುವ ಉರುಸ್ ಗೆ ನಮ್ಮ ದಿಕ್ಕಾರವಿದೆ ಎಂದು ದೂರ ಉಳಿದರು. ಅಲ್ಲದೆ ವ್ಯವಸ್ಥಾಪನ ಮಂಡಳಿ ನೇತ್ರತ್ವದ ನಡೆಯುತ್ತಿರುವ ಉರುಸ್ ಆಚರಣೆಗೆ ಶಾಖಾದ್ರಿ ನೇತೃತ್ವದಲ್ಲಿ ಕೆಲ ಮುಸ್ಲಿಂ ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿದರು. ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮುಂಭಾಗದಲ್ಲಿ ಕೆಲ ಕಾಲ  ಪ್ರತಿಭಟನೆ ನಡೆಸಿದರು. ಕಪ್ಪು ಪಟ್ಟಿ ಧರಿಸಿ ನೂರಾರು ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಉರುಸ್ ನಿಂದ ದೂರ ಉಳಿದ ಶಾಖಾದ್ರಿ ನೇತೃತ್ವ ಮುಸ್ಲಿಂ ಮುಖಂಡರು:
ನಮ್ಮ ಪದ್ಧತಿಯಂತೆ ಉರುಸ್ ನಡೆಯುತ್ತಿಲ್ಲ ಎಂದು ಆರೋಪಿಸಿ ಶಾಖಾದ್ರಿ ನೇತೃತ್ವ ಮುಸ್ಲಿಂ ಮುಖಂಡರು ಉರುಸ್ ನಿಂದ ದೂರ ಉಳಿದರು. ರಾಜ್ಯ ಸರ್ಕಾರಕ್ಕೆ ನಾಲ್ಕು ಬೇಡಿಕೆ ಇಟ್ಟಿರುವ ಮುಸ್ಲಿಂ ಸಮುದಾಯ, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ರದ್ದಾಗಬೇಕು. ಈಗಿರುವ ವ್ಯವಸ್ಥಾಪನ ಮಂಡಳಿಯನ್ನ ರದ್ದು ಮಾಡ, ಎಂಟು ಜನರ ವ್ಯವಸ್ಥಾಪನಾ ಮಂಡಳಿಯಲ್ಲಿ ನಾಲ್ಕು ಜನ ಹಿಂದೂ, ನಾಲ್ಕು ಜನ ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದರು.

ದತ್ತಪೀಠದಲ್ಲಿ ವಿವಾದದ ಬಿರುಗಾಳಿ: ಉರುಸ್‌ ವಿಚಾರ ಮುಸ್ಲಿಮರ ಆಕ್ರೋಶ

ಗುಹೆಯೊಳಗಿರುವ ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆಗೆ ಅವಕಾಶ ನೀಡಬೇಕು. ದತ್ತಪೀಠದ ಪಕ್ಕದಲ್ಲಿರುವ ಮಸೀದಿ ಓಪನ್ ಮಾಡಿ ನಮಾಜ್ ಮಾಡಲು ಅವಕಾಶ ನೀಡಬೇಕೆಂದು ಆಗ್ರಹವನ್ನು ಮಾಡಿದರು. ಸರ್ಕಾರ ದತ್ತಪೀಠ ಆಡಳಿತ ಮಂಡಳಿ ರಚಿಸಿ, ಹಿಂದೂ ಅರ್ಚಕರ ನೇಮಕಾತಿ ಮಾಡಿ ದತ್ತಪೀಠದಲ್ಲಿ ಹೋಮ-ಹವನ ನಡೆಸಿದಂತೆ ನಮಗೂ ನಮ್ಮ ಸಂಪ್ರದಾಯದಂತೆ ಉರುಸ್ ಆಚರಣೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.ಶಾಖಾದ್ರಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ವಿರೋಧದ ನಡುವೆಯೂ  ಜಿಲ್ಲಾಡಳಿತ ವ್ಯವಸ್ಥಾಪನಾ ಮಂಡಳಿ ಸಮ್ಮುಖದಲ್ಲಿ  ಉರುಸ್ ಆಚರಣೆ ಮಾಡಲಾಯಿತು.

ಚಿಕ್ಕಮಗಳೂರು: ದತ್ತಪೀಠ ವ್ಯವಸ್ಥಾಪನಾ ಸಮಿತಿ ಎತ್ತಿ ಹಿಡಿದ ಕೋರ್ಟ್

ಗೋರಿಗಳಿಗೆ ಗಂಧ ಲೇಪಿಸಿ ನಮಾಜ್ ಸಲ್ಲಿಸಿದರು.ಸಾವಿರಾರು ಭಕ್ತಾಧಿಗಳ ಉತ್ಸಾಹ ಹಾಗೂ ಹರ್ಷೋದ್ಘಾರಗಳ ನಡುವೆ ಆರಂಭಗೊಂಡ ಉರುಸ್ ಎರಡು ದಿನಗಳ ಕಾಲ ನಡೆಯಲಿದೆ. ಈ ಉರುಸ್ನಲ್ಲಿ ಸಂಪ್ರದಾಯದಂತೆ ದರ್ಬಾರ್ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.ದೂರದೂರಿಂದ ಆಗಮಿಸಿರುವ ಭಕ್ತಾದಿಗಳಿಗೆ ಅಗತ್ಯ ಊಟ-ವಸತಿ ಕಲ್ಪಿಸುವ ಕೆಲಸವನ್ನು ಸಂಘಟಕರು ಅಚ್ಚುಕಟ್ಟಾಗಿ ನೆರವೇರಿಸಿದ್ದರು.ಯಾವುದೇ ಅಹಿತಕರ ಘಟನೆ ನಡೆಯದಿರುವಂತೆ ಮುಂಜಾಗ್ರತಾಕ್ರಮವಾಗಿ ಬಿಗಿಬಂದೋಬಸ್ತ್ ಮಾಡಲಾಗಿತ್ತು.

click me!