ಕೃಷ್ಣಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ಅರಸರು, ಮಿಥುನ್ ರೈ ಹೇಳಿಕೆಗೆ ಸಿಡಿದೆದ್ದ ಕರಾವಳಿ

By Suvarna News  |  First Published Mar 8, 2023, 4:46 PM IST

ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷ ಹೊಸತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ. ಕರಾವಳಿ ಕಾಂಗ್ರೆಸ್ ನ ಯುವ ನಾಯಕ ಮಿಥನ್ ರೈ ಉಡುಪಿ ಶ್ರೀ ಕೃಷ್ಣ ಮಠ ಮುಸ್ಲಿಂ ರಾಜನ ಕೊಡುಗೆಯಾಗಿ ನೀಡಿದ ಜಾಗದಲ್ಲಿದೆ ಎನ್ನುವ ಹೇಳಿಕೆ ಬಾರಿ ಸಂಚಲನ ಮೂಡಿಸಿದೆ.


ಮಂಗಳೂರು (ಮಾ.8): ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷ ಹೊಸತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ. ಕರಾವಳಿ ಕಾಂಗ್ರೆಸ್ ನ ಯುವ ನಾಯಕ ಮಿಥನ್ ರೈ ಶ್ರೀ ಕೃಷ್ಣ ಮಠದ ಕುರಿತಾಗಿ ಆಡಿದ ಮಾತುಗಳು ಈಗ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ಕರಾವಳಿಯ ಅವಳಿ ಜಿಲ್ಲೆಗಳಾದ ಉಡುಪಿ ಮಂಗಳೂರು ನ ಒಂದು ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದಲ್ಲ ಕ್ಷೇತ್ರವನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಇದಕ್ಕೆ ಕರಾವಳಿಯಲ್ಲಿರುವ ಹಿಂದುತ್ವ ಅಜೆಂಡ ಕಾರಣ. ಈ ಬಗ್ಗೆ ಕಾಂಗ್ರೆಸ್ ನ ತಳಮಟ್ಟದ ನಾಯಕರಿಂದ ಹಿಡಿದು ರಾಜ್ಯ ರಾಜಕೀಯ ಮಟ್ಟದ ನಾಯಕರಿಗೂ ಕೂಡ ಅರಿವಿದೆ. ಆದರೂ ಚುನಾವಣೆ ಬಂದಾಗ ಬಹು ಸಂಖ್ಯಾತ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಎಡವಟ್ಟಿನ ಮೇಲೆ ಎಡವಟ್ಟುಗಳನ್ನ ಮಾಡುತ್ತಿದೆ. 

ಸದ್ಯ ಕರಾವಳಿ ಕಾಂಗ್ರೆಸ್ ನ ಯುವ ಮುಖಂಡ ಮಿಥುನ್ ರೈ ಹೇಳಿರುವ ಮಾತು ಕರಾವಳಿಯಲ್ಲಿ‌ ವೈರಲ್ ಆಗಿ ವಿರೊಧ ವ್ಯಕ್ತವಾಗಿದೆ. ಅಲ್ಪಸಂಖ್ಯಾತರ ವೋಟುಗಳನ್ನು ಗಮನದಲ್ಲಿರಿಸಿ ಉಡುಪಿ ಶ್ರೀ ಕೃಷ್ಣ ಮಠ ಮುಸ್ಲಿಂ ರಾಜನ ಕೊಡುಗೆಯಾಗಿ ನೀಡಿದ ಜಾಗದಲ್ಲಿದೆ ಎನ್ನುವ ಹೇಳಿಕೆ ಬಾರಿ ಸಂಚಲನ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಮಿಥುನ್ ರೈ ಈ ಹೇಳಿಕೆ ನೀಡಿದ್ದರು. 

Tap to resize

Latest Videos

undefined

ಆದರೆ ಯಾವ ಆಧಾರ ಇಟ್ಟುಕೊಂಡಿದ್ದಾರೆ ಮಿಥುನ್ ರೈ ಈ ಹೇಳಿಜೆ ನೀಡಿದ್ದಾರೆ ಎಂದು ಉಡುಪಿಯಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.ಸದ್ಯ ಮಿಥುನ್ ರೈ ಹೇಳಿಕೆಗೆ ಉಡುಪಿಯ ಶಾಸಕರಾದ ರಘುಪತಿ ಭಟ್ ಉತ್ತರ ನೀಡಿದ್ದಾರೆ. ರಾಮಭೋಜ ಅರಸರು ಉಡುಪಿಯ ಅನಂತೇಶ್ವರ ದೇವಸ್ಥಾನಕ್ಕೆ ನೀಡಿದ ಜಾಗವನ್ನು ದೇವಳದವರು ಶ್ರೀ ಕೃಷ್ಣ ಮಠಕ್ಕೆ ನೀಡಿದ್ದಾರೆ ಎನ್ನುವ ದಾಖಲೆಗಳಿದೆ. 
ಯಾವುದೇ ಮುಸ್ಲಿಂ ಅರಸ ಕೃಷ್ಣ ಮಠಕ್ಕೆ ಜಾಗ ನೀಡಿದ ದಾಖಲೆಗಳು ಎಲ್ಲಿಯೂ ಇಲ್ಲ ಏನು ಅಂತ ಹೇಳಿಕೆಯನ್ನು ನೀಡಿದ್ದಾರೆ. 

ಉಡುಪಿಯಲ್ಲಿ ಸಾಮರಸ್ಯ, ಸೌಹಾರ್ದತೆ ಇದೆ. ಇಂತಹ ಸುಳ್ಳು ಹೇಳಿಕೆಗಳ ಮೂಲಕ ಓಟು ಗಳಿಸಲು ಸಾಧ್ಯವಿಲ್ಲ, ಓಟು ಕಳೆದುಕೊಳ್ಳಬಹುದು ಎಂದಿದ್ದಾರೆ. 

ಸದ್ಯ ಇರುವ ಜಾಮಿಯಾ ಮಸೀದಿ ಕೂಡ ಜಂಗಮರ ಮಠದ ಜಾಗದಲ್ಲಿತ್ತು ಎಂದು ಹೇಳಲಾಗುತ್ತೆ. ಶೋಕಮಾತಾ ಚರ್ಚ್ ಕೃಷ್ಣ ಮಠದವರು ಕೊಟ್ಟ ಲೀಸ್ ಭೂಮಿಯಲ್ಲಿದೆ.ಉಡುಪಿ ಸೌಹಾರ್ದತೆಗೆ ಹೆಸರಾದ ಕ್ಷೇತ್ರ.ಮುಸಲ್ಮಾನರಿಗೂ ಮಸೀದಿ ಕಟ್ಟಲು ಜಂಗಮರ ಮಠ ಜಾಗ ಕೊಟ್ಟಿದೆ.ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ಕಟ್ಟಲು ಕೃಷ್ಣಾಪುರ ಮಠ ಭೂಮಿ ಕೊಟ್ಟಿದೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಾಂಬ್ ಇಟ್ಟ ಪ್ರಕರಣ, ಬಂಟ್ವಾಳದ ನಾಲ್ವರ ಮನೆ ಮೇ

ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ ಉಲ್ಲೇಖವಿದೆ.ಮಿಥುನ್ ರೈಗಳು ಯಾವ ಮುಸಲ್ಮಾನ ರಾಜನ ಬಗ್ಗೆ ಮಾತನಾಡುತ್ತಾರೋ ಗೊತ್ತಿಲ್ಲ.ಮಧ್ವಾಚಾರ್ಯರು 850 ವರ್ಷಗಳ ಹಿಂದೆ ಕೃಷ್ಣಮಠ ಸ್ಥಾಪಿಸಿದರು.ಮಿಥುನ್ ರೈ ಅಯೋಧ್ಯೆಯ ಪರಿಸ್ಥಿತಿ ಬಗ್ಗೆ ಚಿಂತನೆ ಮಾಡಲಿ.ಮಥುರದಲ್ಲಿ ಕೃಷ್ಣ ಮಂದಿರ, ಕಾಶಿ ಬಗ್ಗೆ ದೇಶದ ಜನತೆಗೆ ಗೊತ್ತಿದೆ.ಈಗ ಒಂದೊಂದೇ ಕ್ಷೇತ್ರಗಳು ಮುಕ್ತವಾಗುತ್ತಿದೆ‌ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.

ಬುಡಕಟ್ಟು ಕೊರಗರಲ್ಲಿ ಹೀಗೊಂದು ಆಂತರಿಕ ಕೌಟುಂಬಿಕ ನ್ಯಾಯಾಲಯ!

ಒಟ್ಟಾರೆಯಾಗಿ ಮಿಥುನ್ ರೈ ಬಿಜೆಪಿ ಪಾಲಿಗೆ ಪ್ರಮುಖ ಅಸ್ತ್ರವನ್ನೇ ನೀಡಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರ ಓಲೈಕೆ ವಿಚಾರದಲ್ಲಿ ಬಹುಸಂಖ್ಯಾತ ಹಿಂದೂ ಸಮಾಜದ ವಿರೋಧ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಿಥುನ್ ರೈ ಹೇಳಿಕೆ ನಷ್ಟವನ್ನು ಮಾಡುವುದಂತೂ ಖಂಡಿತ. ಈ ವಿವಾದ ಚುನಾವಣೆ ಮುಗಿಯುವುದರೊಳಗೆ ಯಾವ ಹಂತಕ್ಕೆ ತಲುಪುತ್ತದೆಯೋ ಕಾದು ನೋಡಬೇಕಿದೆ.

click me!