ಮುಸ್ಲಿಂ ಲಾ ಬೋರ್ಡ್‌ನಿಂದ ಅಹಿಷ್ಣುತೆಯ ಸಂದೇಶ: ರಾಮ್‌ದೇವ್

By Kannadaprabha News  |  First Published Nov 19, 2019, 2:35 PM IST

ಆಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಮುಸ್ಲೀಂ ಪರ್ಸನಲ್ ಲಾ ಬೋರ್ಡ್ ನಾಯಕರು ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳುವವ ಮೂಲಕ ನಮ್ಮ ದೇಶದಲ್ಲಿ ಮುಸ್ಲಿಮರಿಗೆ ಹಿಂದುಗಳ ಬಗ್ಗೆ ಅಸಹಿಷ್ಣುತೆ ಇದೆ ಎಂಬ ತಪ್ಪು ಸಂದೇಶ ನೀಡಿದೆ ಎಂದು ಅಂತರಾಷ್ಟ್ರೀಯ ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.


ಉಡುಪಿ(ನ.19): ಆಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಮುಸ್ಲೀಂ ಪರ್ಸನಲ್ ಲಾ ಬೋರ್ಡ್ ನಾಯಕರು ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳುವವ ಮೂಲಕ ನಮ್ಮ ದೇಶದಲ್ಲಿ ಮುಸ್ಲಿಮರಿಗೆ ಹಿಂದುಗಳ ಬಗ್ಗೆ ಅಸಹಿಷ್ಣುತೆ ಇದೆ ಎಂಬ ತಪ್ಪು ಸಂದೇಶ ನೀಡಿದೆ ಎಂದು ಅಂತರಾಷ್ಟ್ರೀಯ ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಸೋಮವಾರ ಕೃಷ್ಣಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರಿಂ ಕೋರ್ಟಿನ ಎಲ್ಲಾ 5 ಮಂದಿ ನ್ಯಾಯಾಧೀಶರು ಒಮ್ಮತದಿಂದ ಈ ತೀರ್ಪನ್ನು ನೀಡಿದ್ದಾರೆ. ದೇಶದ ಜನತೆ ಇದನ್ನು ಸ್ವೀಕರಿಸಿದ್ದಾರೆ. ಇದನ್ನು ಪ್ರಶ್ನಿಸಲು ಮುಸ್ಲೀಂ ಲಾ ಬೋರ್ಡ್ ಸ್ವತಂತ್ರವಾಗಿದೆ. ಆದರೇ ಅದು ಸುಪ್ರೀಂ ಕೋರ್ಟ್ ನ ಆದೇಶವನ್ನು ಒಪ್ಪುತ್ತಿಲ್ಲ ಎಂಬುದು ಸಾಬೀತಾಗಿದೆ. ಆದರೂ ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತದೆ ಎಂದಿದ್ದಾರೆ.

Latest Videos

undefined

JDS ಹೊರಗಿನಿಂದ ಜನ ಕರೆಸಿ ಚಪ್ಪಲಿ ಎಸೆದಿದ್ದಾರೆ: ನಾರಾಯಣ ಗೌಡ

ಮುಸ್ಲೀಂ ಪರ್ಸನಲ್ ಲಾ ಬೋರ್ಡ್ ನಿಂದ ಸಲ್ಲಿಕೆಯಾಗುವ ಅರ್ಜಿ ಕೂಡ ಶೀಘ್ರವೇ ಇತ್ಯರ್ತ ಆಗುತ್ತದೆ ಮತ್ತು ರಾಮಮಂದಿರವೂ ನಿರ್ಮಾಣವಾಗುತ್ತದೆ ಎಂದರು.  ಮೊಬೈಲ್ ನಲ್ಲಿ ತುಳಸಿ ದಳ ಇಟ್ಟರೇ ವಿಕಿರಣ (ರೇಡಿಯೇಶನ್) ಕಡಿಮೆಯಾಗುತ್ತದೆ ಎನ್ನುವ ತಮ್ಮ ಹೇಳಿಕೆಯನ್ನು ಟೀಕಿಸಿರುವ ವಿಚಾರವಾದಿಗಳಿಗೆ ಪ್ರತಿಕ್ರಿಯಿಸಿದ ಬಾಬಾ ರಾಮ್ ದೇವ್, ತುಳಸೀ, ಗೋ, ವೇದ, ಸನಾತನ ಜ್ಞಾನ ಪರಂಪರೆ ಬಗ್ಗೆ ಮಾತನಾಡಿದರೆ ಇಷ್ಟವಾಗುವುದಿಲ್ಲ. ಆದರೇ ತುಳಸಿಯಲ್ಲಿ ರೋಗನಿರೋಧಕ ಶಕ್ತಿಯೂ ಇದೆ, ರೇಡಿಯೇಶನ್ ನಿರೋಧಕ ಶಕ್ತಿಯೂ ಇದೆ ಎಂಬುದು ಸಾಬೀತಾಗಿದೆ, ವಿಚಾರವಾದಿಗಳು ಬೇಕಿದ್ದರೇ ಸಾಬೀತು ಮಾಡಿಕೊಳ್ಳಲಿ ಎಂದಿದ್ದಾರೆ.

ಕನ್ನಡದಲ್ಲಿ ಪ್ರಮಾಣ ಪತ್ರ ಓದಲು ತಡವರಿಸಿದ BJP ಅಭ್ಯರ್ಥಿ

ದಲಿತರು, ಆದಿವಾಸಿಗಳಲ್ಲದೆ ಇಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲರೂ ಭಾರತೀಯರು ಹಾಗೂ ಭಾರತದ ಮೂಲ ನಿವಾಸಿಗಳು. ಅಂಬೇಡ್ಕರ್, ಜ್ಯೋತಿ ಬಾಪುಲೆ ಸಹಿತ ದಲಿತ ಮಹಾಪುರುಷರನ್ನು ನಾವು ಗೌರವಿಸುತ್ತೇವೆ. ಜಾತಿ ಮುಕ್ತ ಭಾರತವನ್ನು ಸಮರ್ಥಿಸುತ್ತೇವೆ. ಮೂಲನಿವಾಸಿಗಳು ಪ್ರತೇಯಕ ಎಂಬ ಚಿಂತನೆ ಇಂಟೆಲೆಕ್ಚ್ಯುವಲ್ ಟೆರರಿಸಂನ ಭಾಗವಾಹಿದೆ ಎಂದವರು ಆರೋಪಿಸಿದ್ದಾರೆ.

ಮಹಿ​ಳೆ​, ಮಕ್ಕಳಿಗಾಗಿ ರಾಮ್‌ ದೇವ್‌ ವಿಶೇಷ ಯೋಗ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪತಂಜಲಿ ಸಂಸ್ಥೆಯ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಬಂಡವಾಳ ಹೂಡುವುದಿಲ್ಲ. ಬದಲಾಗಿ ವಿದೇಶಗಳಲ್ಲಿಯೂ ಪತಂಜಲಿ ಸಂಸ್ಥೆಯನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

click me!