ಮಂಗಳೂರಿನಲ್ಲಿ ಬುರ್ಖಾಧಾರಿಗಳ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಕಣ್ಣು!

By Suvarna NewsFirst Published May 5, 2022, 3:10 PM IST
Highlights

ಮಂಗಳೂರಿನಲ್ಲಿ  ಮುಸ್ಲಿಂ ಸಂಘಟನೆಯೊಂದು ಸಾಮಾಜಿಕ ತಾಣಗಳಲ್ಲಿ  ನೈತಿಕ ಪೊಲೀಸ್ ಗಿರಿಯ ಬೆದರಿಕೆ ಒಡ್ಡಿದೆ.  ಹಿಜಾಬ್, ಬುರ್ಖಾ ಧರಿಸಿ ಹೊರಬರುವ ಯುವತಿಯರ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ಈ ಸಂಘಟನೆ ನಿಗೂಢವಾಗಿ ಕಾರ್ಯಾಚರಿಸುತ್ತಿದೆ.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಮೇ.5): ಮಂಗಳೂರಿನಲ್ಲಿ  ಮುಸ್ಲಿಂ ಸಂಘಟನೆಯೊಂದು ಸಾಮಾಜಿಕ ತಾಣಗಳಲ್ಲಿ  ನೈತಿಕ ಪೊಲೀಸ್ ಗಿರಿಯ ಬೆದರಿಕೆ ಒಡ್ಡಿದೆ. ಹಿಜಾಬ್, ಬುರ್ಖಾ ಧರಿಸಿ ಹೊರಬರುವ ಯುವತಿಯರ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ಈ ಸಂಘಟನೆ ನಿಗೂಢವಾಗಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. 

ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿರುವ ಸಂಘಟನೆ, ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿಯರನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ಹರಿಬಿಡುತ್ತಿರುವ ಮುಸ್ಲಿಂ ಡಿಫೆನ್ಸ್ ಫೋರ್ಸ್, ಹಿಜಾಬ್ , ಬುರ್ಖಾ ಧರಿಸಿ ಮನೆಯಿಂದ ಹೊರಬರುವ ಯುವತಿಯರ ಮೇಲೆ ಕಣ್ಣಿಡುವಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ. ಬುರ್ಖಾ ಧರಿಸಿ ಯುವಕರೊಂದಿಗೆ ಪಾರ್ಕ್ , ಮಾಲ್ , ಥಿಯೇಟರ್ ಸುತ್ತುವ ಯುವತಿಯರನ್ನು ಟಾರ್ಗೆಟ್ ಮಾಡುವ ಬೆದರಿಕೆ ಹಾಕಲಾಗಿದೆ. 

ಬುರ್ಖಾ , ಹಿಜಾಬ್ ಧರಿಸಿ ಮಾಲ್, ಹೋಟೆಲ್ ಹಾಗೂ ಸಾರ್ವಜನಿಕ ಜಾಗದಲ್ಲಿ ಹುಡುಗರೊಂದಿಗೆ ಓಡಾಡುವಂತಿಲ್ಲ ಎಂದು ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದು ಫತ್ವಾ ಹೊರಡಿಸಿದೆ. ಸದ್ಯ ಮುಸ್ಲಿಮ್ ಡಿಫೆನ್ಸ್ ಫೋರ್ಸ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲು ಪ್ರತ್ಯೇಕ ತಂಡ ರಚಿಸಿದ್ದಾರೆ‌. 

ರಾಜ್ಯಾದ್ಯಂತ ಬಳ್ಳಾರಿ ಮಹಿಳಾ ಬೈಕರ್‌ಗಳ ಮಹಿಳಾ ಭಯಮುಕ್ತ ಅಭಿಯಾನ

ಡಿಸಿಪಿ ಹರಿರಾಂ ಶಂಕರ್ ನೇತತ್ವದಲ್ಲಿ 6 ಪೊಲೀಸ್ ಅಧಿಕಾರಿಗಳ ತಂಡ ರಚಿಸಿರುವ  ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ , ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. 

ಲೈಕ್, ಶೇರ್ ಮಾಡಿದ್ರೂ ಕೇಸ್!: ಇನ್ನು ಸಿಕ್ಕಸಿಕ್ಕ ಪೋಸ್ಟ್ ಗಳಿಗೆ ಲೈಕ್, ಕಮೆಂಟ್, ಶೇರ್ ಮಾಡಿದ್ರೂ ಮಂಗಳೂರು ಪೊಲೀಸರು ಮನೆಗೆ ಬರಬಹುದು. ವಿವಾದಿತ ಪೋಸ್ಟ್ ಲೈಕ್, ಕಮೆಂಟ್, ಶೇರ್ ಮಾಡಿದ್ರೆ ಜೈಲು ಫಿಕ್ಸ್ ಆಗೋ ಸಾಧ್ಯತೆ ಇದೆ. ಮಂಗಳೂರಿನ‌ 100ಕ್ಕೂ ಅಧಿಕ ಸಂಘಟನೆ, 1064 ವಿವಿಧ ವ್ಯಕ್ತಿ, ಗುಂಪುಗಳ ಮೇಲೆ ನಿಗಾ ಇಡಲಾಗಿದೆ. 

Tumakuru ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ವಾಸನೆ

ಮಂಗಳೂರು ಮುಸ್ಲಿಂ, ಮುಸ್ಲಿಂ ಡಿಫೈನ್ಸ್ ಫೋರ್ಸ್ ಸೇರಿ ಹಲವು ಪೇಜ್ ಗಳಿಂದ ಕೋಮು ಕಿಡಿ ಹಚ್ಚುವ ಯತ್ನ ನಡೆದಿದ್ದು, ಪೇಜ್ ಐಕಾನ್, ಪೋಸ್ಟ್ ಲೈಕ್, ಶೇರ್ ಮತ್ತು‌ ಕಮೆಂಟ್ ಮಾಡಿದವರಿಗೆ ಪೊಲೀಸ್ ಶಾಕ್ ನೀಡಲಿದ್ದಾರೆ. ದಿನದ 24 ಗಂಟೆಯೂ ಮಂಗಳೂರು ಕಮಿಷನರ್ ಕಚೇರಿಯಲ್ಲಿ‌ ಮಾನಿಟರ್ ನಡೆಯಲಿದೆ. ಈ ತಂಡದ ವರದಿ ಆಧಾರದಲ್ಲಿ ಹಲವರನ್ನ ವಶಕ್ಕೆ ಪಡೆದಿರೋ ಮಂಗಳೂರು ಪೊಲೀಸರು, ವಿವಾದಿತ ಪೋಸ್ಟ್, ಲೈಕ್, ಕಮೆಂಟ್, ಶೇರ್ ಮಾಡಿದವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌. ಎಲ್ಲಾ ಧರ್ಮಗಳ ಪೇಜ್, ಧಾರ್ಮಿಕ ನಾಯಕರ ಖಾತೆಗಳು, ವಿವಾದಿತ ಖಾತೆಗಳ ಮೇಲೆ‌ ನಿಗಾ ಇಡಲಾಗಿದ್ದು, ವಿವಾದಿತ ಪೋಸ್ಟ್ ಮಾಡಿದವರ ಜೊತೆಗೆ ಲೈಕ್, ಕಮೆಂಟ್, ಶೇರ್ ಮಾಡಿದವರೂ ಅರೆಸ್ಟ್ ಆಗಬಹುದು.

 

click me!