ರಾಜ್ಯಾದ್ಯಂತ ಬಳ್ಳಾರಿ ಮಹಿಳಾ ಬೈಕರ್‌ಗಳ ಮಹಿಳಾ ಭಯಮುಕ್ತ ಅಭಿಯಾನ

By Suvarna News  |  First Published May 5, 2022, 2:03 PM IST
  • ಮಹಿಳಾ ಭಯಮುಕ್ತ ಕರ್ನಾಟಕಕ್ಕಾಗಿ ಅಭಿಯಾನ
  • ಬೈಕ್ ಮೇಲೆ ಪ್ರವಾಸಕ್ಕೆ ಹೊರಿಟಿರೋ ನಾಲ್ವರು ಯುವತಿಯರು
  • ಸಮಾಜಕ್ಕೆ ಕೊಡುಗೆ ನೀಡೋ ಉದ್ದೇಶದಿಂದ 3500 ಕಿ.ಮಿ. ಪ್ರವಾಸ
  • ಮಹಿಳೆಯರಿಗಾಗಿ ಇರೋ ಕಾನೂನಿನ ವಿವರ ನೀಡಲಿರೋ ತಂಡ
     

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಮೇ.5): ಅವರು ನಾಲ್ವರು ಆಪ್ತ ಸ್ನೇಹಿತೆಯರು. ಒಬ್ಬೊಬ್ಬರದ್ದು ಒಂದೊಂದು ಊರು. ಅನಿವಾರ್ಯ ಮತ್ತು ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸವನ್ನು ಮಾಡುತ್ತಾ ವಾಸ ಮಾಡುತ್ತಿದ್ದಾರೆ. ಆದ್ರೇ, ಅವರಿಗೆ ಪ್ರತಿ ಬಾರಿಯೂ ಸಮಾಜಕ್ಕೆ  ತಮ್ಮದೆಯ ಆದ ಕೊಡುಗೆಯೊಂದನ್ನು ನೀಡಬೇಕೆನ್ನುವ ತುಡಿತ. ಆ ಕೊಡುಗೆ ಮಹಿಳೆಯರ ಸಬಲೀಕರಣದ ಜೊತೆ ಮುಂದಿನ ಮಹಳೆಯರ ಭವಿಷ್ಯದ ಭದ್ರ ಬುನಾದಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ವಿನೂತನ ಯೋಚನೆಯಿಂದ ನಾಲ್ವರು ಯುತಿಯರು ಬೈಕ್ ಮೇಲೆ ಇಡೀ ರಾಜ್ಯವನ್ನು ಸುತ್ತಾಟ ಮಾಡುತ್ತಿದ್ದಾರೆ.

Tap to resize

Latest Videos

undefined

ದೌರ್ಜನ್ಯದ ವಿರುದ್ಧ ಸಿಡಿದೆದ್ದ ಮಹಿಳೆಯರು ಜನಜಾಗೃತಿ ಮೂಡಿಸಲು ಬೈಕ್ ಮೇಲೆ ರಾಜ್ಯದ 31 ಜಿಲ್ಲೆಯ ಪ್ರವಾಸ: ಹೌದು, ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರೋ ದೌರ್ಜನ್ಯ ಮತ್ತು ಅತ್ಯಚಾರದಂತ ಘಟನೆ ವೇಳೆ ಮಹಿಳೆಯರೇ ಪರಿಸ್ಥಿತಿಯನ್ನು ಗಟ್ಟಿಯಾಗಿ ಎದುರಿಸಬೇಕು. ಮಹಿಳೆಯರು ಭಯಮುಕ್ತರಾಗಿರಬೇಕು ದೈಹಿಕ ಮತ್ತು ಮಾನಸಿಕ ಸ್ಥೈರ್ಯದಿಂದ ಬದುಕಬೇಕು. ಸರ್ಕಾರ ಸೇರಿದಂತೆ ಖಾಸಗಿಯಾಗಿ ಮಹಿಳೆಯರಿಗೆ ಸಿಗೋ ಸೌಲಭ್ಯಗಳನ್ನು  ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬಿಯಾಗಿ ಪುರುಷರಿಗೆ ಸರಿಸಮಾನವಾಗಿ ಜೀವನ ಸಾಗಿಸಬೇಕು.

ಹೀಗೆ ಹತ್ತು ಹಲವು ಮಹಿಳಾ ಸಬಲೀಕರಣದ (Women Empowerment) ಕಲ್ಪನೆಗಳನ್ನಿಟ್ಟು ಕೊಂಡು ರಾಜ್ಯಾದ್ಯಾಂತ ಈ ನಾಲ್ವರು ಯುವತಿಯರು ಬೈಕ್  ಪ್ರವಾಸ ನಡೆಸುತ್ತಿದ್ದಾರೆ.  ಬೆಂಗಳೂರಿನ ಖಾಸಗಿ ಕಂಪನಿಗಳ  ಉದ್ಯೋಗದಲ್ಲಿರುವ ಸ್ವಾತಿ, ರಾಜಲಕ್ಷ್ಮಿ, ಅನಿತಾ ಮತ್ತು ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಕೀರ್ತಿನಿ ಎನ್ನುವ  ಈ ನಾಲ್ವರು ಯುವತಿಯರು  ವಿ.ಸಖಿ ಸಂಸ್ಥೆಯ ಸಹಯೋಗದೊಂದಿಗೆ ಏ.17ರಂದು ಬೆಂಗಳೂರಿನಿಂದ ಬೈಕ್ ಪ್ರವಾಸವನ್ನು ಆರಂಭಿಸಿದ್ದಾರೆ.

TUMAKURU ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ವಾಸನೆ

ರಾಜ್ಯದ 31 ಜಿಲ್ಲೆಗಳಲ್ಲಿ  3500 ಕಿ.ಮೀ ಸಂಚರಿಸಿ ಮೇ.17ರಂದು ರ್‍ಯಾಲಿ ಅಂತ್ಯಗೊಳಿಸಲಿದ್ದಾರೆ.  ಪ್ರವಾಸದ ವೇಳೆ  ನಗರ ಮತ್ತು ಹಳ್ಳಿಗಳಲ್ಲಿರುವ ವಿವಿಧ ಮಹಿಳಾ ಸಂಘ-ಸಂಸ್ಥೆಗಳ ನೆರವಿನಿಂದ ಮಹಿಳೆಯರ ಗುಂಪುಗಳೊಂದಿಗೆ ಸಭೆ ನಡೆಸಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.  ತಮ್ಮ ಬದುಕಿನ ಯಾವುದೇ ಹಂತದಲ್ಲಿ ಅಂದ್ರೇ, ಉದಾಹರಣೆಗೆ  ಕೆಲಸಕ್ಕೆ ಹೋದಾಗ, ಮಾರುಕಟ್ಟಗೆ ಹೋದಾಗ, ಒಬ್ಬರೇ ಮನೆಯಲ್ಲಿದ್ದಾಗ ನಡೆಯುವ ದೌರ್ಜನ್ಯಕ್ಕೆ ಯಾವುದೇ ರೀತಿಯಲ್ಲಿ  ಅಂಜಿಕೆ ಅಳುಕಿಲ್ಲದೇ ಸಮಸ್ಯೆಗಳನ್ನು ದೈರ್ಯದಿಂದ ಎದುರಿಸಿ ಭಯಮುಕ್ತರಾಗಿ ಬದುಕಬೇಕು ಎಂದು ಸಲಹೆ ನಿಡುತ್ತಿದೆ ಎಂದು ತಂಡದ ಸದಸ್ಯ ರಾಜಲಕ್ಷ್ಮೀ  ಹೇಳುತ್ತಾರೆ.

ಪ್ರವಾಸದ ಅನುಭವ ಕೂಡ ಒಂದು ಪಾಠ: ಇನ್ನೂ ತಮ್ಮ ಪ್ರವಾಸದೂದ್ದಕ್ಕೂ ತಾವುಗಳು ಕೂಡ ಅನುಭವಿಸಿದ ಕೆಲಸವೊಂದಿಷ್ಟು ಸಮಸ್ಯೆಗಳನ್ನು ಕೂಡ ವಿವರವಾಗಿ ಹೇಳೋ ಮೂಲಕ  ಮಹಿಳೆಯರ ರಕ್ಷಣೆಗಾಗಿ ಕಾನೂನಿನಲ್ಲಿರುವ ಅವಕಾಶಗಳನ್ನು ಸವಿವರವಾಗಿ ತಿಳಿಸುತ್ತಾರೆ. ಉತ್ತಮ ಆರೋಗ್ಯ, ಮಹಿಳೆಯರ ದೇಹದಲ್ಲಾಗುವ ಚಟುವಟಿಕೆಗಳಿಂದ ಸ್ವರಕ್ಷಣೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಮುಕ್ತವಾಗಿ ಈ ತಂಡ‌‌ ಮಹಿಳಾ  ಸಭೆಯಲ್ಲಿ ತಿಳಿಸುತ್ತಿದೆ.  ಇನ್ನೂ ಈ ತಂಡ ಮಾಡುತ್ತಿರೋ ಈ ಕೆಲಸಕ್ಕೆ ಎಲ್ಲ ಕಡೆಗಳಲ್ಲೆಲ್ಲ ಜನತೆ ಪ್ರೀತಿಯಿಂದ  ಸ್ವಾಗತಿಸುತ್ತಿರೋದಕ್ಕೆ ವಿಶೇಷವಾಗಿದೆ. ಎಮ್ನುತ್ತಾರೆ ಬಳ್ಳಾರಿ ಮೂಲದ ರೈಡರ್ ಕೀರ್ತಿನ.

Davanagere ಬ್ಲೂವೇಲ್‌ ಗೇಮ್ ವಿದ್ಯಾರ್ಥಿಯ ಜೀವನಕ್ಕೆ ಮುಳುವಾಯ್ತಾ?

ಎಲ್ಲ ರಂಗದಲ್ಲಿ ಹೋರಾಟ ಮಾಡೋ ಮಹಿಳೆ: ತಾಯಿ, ಮಗಳು, ಹೆಂಡತಿಯಾಗಿ ಮನೆ ಮತ್ತು ಹೊರಗಡೆ ನಿತ್ಯ ದುಡಿಯುವ ಮಹಿಳೆಗೆ ಇಂದಿನ ಸಮಾಜದಲ್ಲಿ ಹತ್ತು ಹಲವು ಸಮಸ್ಯೆಗಳು ಇವೆ. ಅದೆಲ್ಲವನ್ನು ಮೆಟ್ಟಿ ನಿಲ್ಲೋ ಮೂಲಕ ಸಾಧನೆಯ ಶಿಖರವನ್ನೇರ ಬೇಕಿದೆ. ಅದಕ್ಕೆ ಈ ತಂಡ  ನೀಡೋ ಹತ್ತುಹಲವು ಸಲಹೆಗಳು ಪೂರಕವಾಗಿರೋದಂತೂ ಸುಳ್ಳಲ್ಲ. ಅದೇನೇ ಇರಲಿ ನಾವಷ್ಟೇ ಅಲ್ಲದೇ ನಮ್ಮ ಸುತ್ತಲಿನ ಪರಿಹಾರವೂ ಸ್ವವಲಮಂಬಿಯಾಗಿ ಬದುಕಬೇಕೆನ್ನುವ ಉದ್ದೇಶವನ್ನುಟ್ಟಿಕೊಂಡು ಹೊರಟಿರೋ ಈ ಯುವತಿಯರ ಪ್ರವಾಸ ಯಶಸ್ವಿಯಾಗಲಿ ಎಂದು ಪ್ರತಿಯೊಬ್ಬರು ಹಾರೈಸಬೇಕಿದೆ.     

click me!