ಕಳೆದ 11 ದಿನಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವಿನ ರಹಸ್ಯ ಕಡೆಗೂ ಬಯಲಾಗಿದೆ. ದಾವಣಗೆರೆ ಬಡಾವಣೆ ಪೊಲೀಸರಿಗೆ ಸಿಕ್ಕಿರುವ ಸಾಂದರ್ಭಿಕ ಸಾಕ್ಷ್ಯಗಳ ಪ್ರಕಾರ ವಿದ್ಯಾರ್ಥಿ ಸುಸೈಡ್ ಮಾಡಿಕೊಂಡಿದ್ದಾನೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮೇ4): ಕಳೆದ 11 ದಿನಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವಿನ ರಹಸ್ಯ ಕಡೆಗೂ ಬಯಲಾಗಿದೆ. ದಾವಣಗೆರೆ ಬಡಾವಣೆ ಪೊಲೀಸರಿಗೆ ಸಿಕ್ಕಿರುವ ಸಾಂದರ್ಭಿಕ ಸಾಕ್ಷ್ಯಗಳ ಪ್ರಕಾರ ವಿದ್ಯಾರ್ಥಿ ಸುಸೈಡ್ ಮಾಡಿಕೊಂಡಿದ್ದಾನೆ.
undefined
11 ದಿನಗಳ ಹಿಂದೆ ನಡೆದ ಘಟನೆ: ಆತ ತಂದೆ ತಾಯಿಗೆ ಮುದ್ದಿನ ಮಗ, ಕೆಲವೇ ದಿನಗಳಲ್ಲಿ ಪಿಯುಸಿ ಮುಗಿಸಿ ಬೇರೆ ಕೋರ್ಸ್ ಗೆ ಸೇರಿಸಬೇಕು ಎಂದು ತಂದೆ ಯೋಚನೆ ಮಾಡುತ್ತಿದ್ದರು, ಆದರೆ ಅದೇನಾಯಿತೋ ಗೊತ್ತಿಲ್ಲ, ಏಪ್ರೀಲ್ 23 ದಿನದ ಬೆಳಗ್ಗೆ ರಕ್ತದ ಮಡುವಿನಲ್ಲಿ ಮಗ ಬಿದ್ದಿದ್ದು ನೋಡಿ ಪೋಷಕರು ಆಘಾತಕ್ಕೆ ಒಳಗಾಗಿದ್ದರು. ಅದೊಂದು ನಿಗೂಡ ಸಾವು ಎಂದು ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಕೇಸ್ ನಲ್ಲಿ ಬಗೆದಷ್ಟು ಟ್ವಿಸ್ಟ್ ಸಿಕ್ಕಿದೆ.
ಎಪ್ರೀಲ್ 23 ದ್ವೀತಿಯ ಪಿಯುಸಿಯ ಗಣಿತ ಪರೀಕ್ಷೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ರೆಡಿಯಾಗುತ್ತಿದ್ದರೆ, ದಾವಣಗೆರೆಯ ಪೀಸಾಳೆ ಕಾಂಪೌಡ್ ನಲ್ಲಿಎರಡನೇ ಮಹಡಿ ಮೇಲಿಂದ ಬಾಲಕ ಮಿಥುನ್ ನಿಗೂಢವಾಗಿ ಸಾವನ್ನಪ್ಪಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿ ಮೃತದೇಹ ನೋಡಿ ಎಲ್ಲರೂ ಬೆಚ್ವಿಬಿದ್ದಿದ್ದರು. ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ. ಅಥವಾ ಯಾರೋ ಕೊಲೆ ಮಾಡಿದ್ದಾರಾ ಎಂಬ ಸಾಕಷ್ಟು ಅನುಮಾನಗಳು ಹುಟ್ಟುಹಾಕಿತ್ತು.
ಕೋಲಾರ ಮಾವು ಬೆಳಗಾರರ ಬೇಡಿಕೆಗೆ ಕ್ಯಾರೇ ಎನ್ನದ ಸರಕಾರ!
ಸಾವಿಗೂ ಮುನ್ನ ಆತ್ಮಹತ್ಯಾ ವಿಡಿಯೋ ನೋಡಿದ್ದ ವಿದ್ಯಾರ್ಥಿ: ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ನೀಡಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿಸಿದ್ದಾರೆ. ಬ್ಲೂ ವೆಲ್ ಗೇಮ್ ಮಾದರಿಯಾ ಅನಿಮೇಷನ್ ವೀಡಿಯೋ ನೋಡಿ ಮೊದಲು ಕೈ ಕೊಯ್ದುಕೊಂಡು ನಂತರ ರೂಂ ತುಂಬಾ ಓಡಾಡಿ, ಅನಂತರ ಎರಡನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಮಿಥುನ್ ಆತ್ಮಹತ್ಯೆ ಶರಣಾಗಿದ್ದಾನೆಂದು ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಆಘಾತಕಾರಿ ಮಾಹಿತಿಯ ಬಹಿರಂಗ ಪಡಿಸಿದ್ದಾರೆ. ಸಾವನಪ್ಪುವ ಮುನ್ನ ಗೂಗಲ್ ನಲ್ಲಿ ಬ್ಲೂ ವೆಲ್ ಗೇಮ್ ಮಾದರಿಯಾ ಅನಿಮೇಷನ್ ಹುಡುಕಿ ಬಳಿಕ ವೀಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡನೇ ಮಹಡಿಯಲ್ಲಿದ್ದ ರೂಮಿನಲ್ಲಿ ಮಿಥುನ್ ಓದುಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು, ಅಲ್ಲದೆ ತಂದೆ ಮೊಬೈಲ್ ಕೂಡ ಕೊಡಿಸಿದ್ದರಂತೆ.. ದ್ವಿತೀಯ ಪಿಯುಸಿ ಹಿನ್ನಲೆ ರಾತ್ರಿ ಹಗಲು ಮಿಥುನ್ ಓದುತ್ತಿದ್ದ, ಅದರೆ ಈಗ ಈ ಬ್ಲೂ ವೆಲ್ ಗೇಮ್ ಮಾದರಿಯ ಅನಿಮೇಷನ್ ವೀಡಿಯೋ ನೋಡಿ ಅತ್ಮಹತ್ಯೆ ಮಾಡಿಕೊಂಡಿದ್ದನೆ ಎನ್ನುವ ಮಾಹಿತಿ ಎಲ್ಲಾರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ.
ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಬರೆದ ವಿದ್ಯಾರ್ಥಿ: ಇನ್ನು ಮೃತ ವಿದ್ಯಾರ್ಥಿ ಮಿಥುನ್ ನನ್ನ ಸಾವಿಗೆ ನಾನೇ ಕಾರಣ ಎಂದು ತನ್ನ ನೋಟ್ ಬುಕ್ ನ ಕೊನೆಯಲ್ಲಿ ಬರೆದು ಅತ್ಮಹತ್ಯೆ ಮಾಡಿಕೊಂಡಿದ್ದನು. ಡೆತ್ ನೋಟ್‌ನಲ್ಲು ಅವನ ಹ್ಯಾಂಡ್ ರೈಟಿಂಗ್ ಎಂದು ತನಿಖೆಯಿಂದ ಖಾತ್ರಿಯಾಗಿದೆ. ಸಾಯುವ ಮುನ್ನ ಅತ್ಮಹತ್ಯೆ ಮಾಡಿಕೊಳ್ಳಲು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಮಿಥುನ್ ಬಳಿಸುತಿದ್ದ ಮೊಬೈಲ್ ನ್ನು ಪೋಲಿಸರು ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿದ್ದು, ಅಲ್ಲಿಂದ ಮಾಹಿತಿ ಬಂದ ಬಳಿಕ ಯುವಕನ ಸಾವಿನ ನಿಗೂಡತೆ ಇನ್ನಷ್ಟು ಖಚಿತವಾಗಲಿದೆ.
ಡಿಸಿಎಂ ಹುದ್ದೆ ಆಸೆ ಕಮರಿಲ್ಲ ಅನ್ನೋ ಸಂದೇಶ ನೀಡಿದ ಸಚಿವ ಬಿ ಶ್ರೀರಾಮುಲು!
ದ್ವಿತೀಯ ಪಿಯು ಪರೀಕ್ಷಗೆ ಹೆದರಿದಾನಾ ವಿದ್ಯಾರ್ಥಿ: ದ್ವಿತೀಯ ಪಿ ಯು ವಿದ್ಯಾರ್ಥಿ ಮಿಥುನ್ ಅಂದು ರಾತ್ರಿ 12.30 ರ ವರೆಗು ವ್ಯಾಸಂಗ ಮಾಡಿದ್ದಾನೆ. ನಂತರ ಬೆಳಿಗ್ಗೆ ಪರೀಕ್ಷೆ ಎದುರಿಸಬೇಕಿತ್ತು. ಒಟ್ಟಾರೆಯಾಗಿ ಮಿಥುನ್ ಸಾವಿಗೆ ಕಾರಣ ಏನು ಎನ್ನುವುದು ತಿಳಿದುಬಂದಿದ್ದು ಇತ್ತಿಚಿನ ವಿಧ್ಯಾರ್ಥಿಗಳಿಗೆ ಪೋಷಕರು ಸ್ಮಾರ್ಟ್ ಪೋನ್ ಕೊಡಿಸಿದ್ರೆ ಮಕ್ಕಳು ಚನ್ನಾಗಿ ಓದುತ್ತಾರೆ ಎಂದುಕೊಂಡಿರುತ್ತಾರೆ.. ಆದರೆ ಈ ರೀತಿಯ ಮಾರ್ಗ ಹಿಡಿದರೆ ಪೋಷಕರು ಏನು ಮಾಡಲು ಸಾದ್ಯ ಇನ್ನಾದರೂ ಪೋಷಕರು ಮಕ್ಕಳ ಚಟುವಟಿಕೆ ಮೇಲೆ ನಿಗಾ ಇರಿಸಿದರೆ ಈ ರೀತಿಯ ಪ್ರಕರಣಗಳು ಮರುಕಳಿಸುವುದನ್ನು ತಡೆಗಟ್ಟಬಹುದು