ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ದಂಡೆಯ ಸಹಸ್ರಲಿಂಗ ಕ್ಷೇತ್ರದಲ್ಲಿ ನಡೆದ ಘಟನೆ.
ಕಾರವಾರ(ಜ.06): ಪ್ರವಾಸಕ್ಕೆ ಬಂದಿದ್ದ ಮುಸ್ಲಿಂ ದಂಪತಿಯಿಂದ ಶಿವ ಲಿಂಗಗಳಿರುವ ಪಕ್ಕದ ಕಲ್ಲಿನಲ್ಲಿ ಕುಳಿತು ಬಿರಿಯಾನಿ ಸೇವನೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ದಂಡೆಯ ಸಹಸ್ರಲಿಂಗ ಕ್ಷೇತ್ರದಲ್ಲಿ ನಡೆದಿದೆ ಅಂತ ಹೇಳಲಾಗುತ್ತಿದೆ.
ಮುಸ್ಲಿಂ ದಂಪತಿ ಬಿರಿಯಾನಿ ತಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ನಡೆದಿರುವ ಈ ಘಟನೆಯ ವಿಡಿಯೋ ನೋಡಿ ಜಿಲ್ಲೆಯ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
undefined
ಹೊಸ ವರ್ಷಕ್ಕೆ ಬಾಂಬ್ ಬ್ಲಾಸ್ಟ್ ಬೆದರಿಕೆ ಪತ್ರ: 15 ದಿನದ ಬಳಿಕ ಆರೋಪಿ ಪತ್ತೆ
ಮುಸ್ಲಿಂ ದಂಪತಿ ಕ್ಷೇತ್ರದಲ್ಲಿ ಬಿರಿಯಾನಿ ಸೇವಿಸಿದ್ದನ್ನು ಮಹಿಳೆಯೊಬ್ಬರು ವಿಡಿಯೋ ಮಾಡಿ ಪ್ರಶ್ನಿಸಿದ್ದರು. ಮಹಿಳೆಯೊಬ್ಬರು ನೀವಿಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ? ಎಂದು ಪ್ರಶ್ನಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮುಸ್ಲಿಂ ದಂಪತಿಯ ನಡೆಗೆ ನೆಟ್ಟಿಗರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ. ಹಿಂದೂಗಳ ಧಾರ್ಮಿಕ ತಾಣವಾಗಿರುವ ಸಹಸ್ರಲಿಂಗದಲ್ಲಿ ಸಾವಿರಾರು ಲಿಂಗಗಳಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳಿಂದಲೇ ಕ್ಷೇತ್ರದ ಪಾವಿತ್ರ್ಯತೆ ಹಾಳಾಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.