ಬಾಗಲಕೋಟೆ: ಪೈಗಂಬರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ, ಸ್ವಾಮೀಜಿ ಬಂಧಿಸುವಂತೆ ಮುಸ್ಲಿಂ ಸಮುದಾಯ ಒತ್ತಾಯ

By Girish Goudar  |  First Published Aug 30, 2024, 11:23 PM IST

ಮಹಾರಾಷ್ಟ್ರದ ರಾಮಗಿರಿ ಗುರು ನಾರಾಯಣ ಗಿರಿಹಾರಾಜ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಜಿಲ್ಲಾಡಳಿತ ಭವನದ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿದೆ. ಸ್ವಾಮೀಜಿಯನ್ನ ಬಂಧಿಸುವಂತೆ ಒತ್ತಾಯಿಸಿ, ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಾಗಲಕೋಟೆ(ಆ.30):  ಪ್ರವಾದಿ ಮಹಮ್ಮದ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಹಾರಾಷ್ಟ್ರ ಮೂಲದ‌ ಸ್ವಾಮೀಜಿ ಹೇಳಿಕೆಯನ್ನ ಖಂಡಿಸಿ ಇಂದು(ಶುಕ್ರವಾರ) ನಗರದಲ್ಲಿ  ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ. 

ಮಹಾರಾಷ್ಟ್ರದ ರಾಮಗಿರಿ ಗುರು ನಾರಾಯಣ ಗಿರಿಹಾರಾಜ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಜಿಲ್ಲಾಡಳಿತ ಭವನದ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿದೆ. ಸ್ವಾಮೀಜಿಯನ್ನ ಬಂಧಿಸುವಂತೆ ಒತ್ತಾಯಿಸಿ, ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

ಬಾಗಲಕೋಟೆ: ಐತಿಹಾಸಿಕ ಐಹೊಳೆ ಸ್ಮಾರಕಗಳಲ್ಲಿನ ಬಿರುಕು ಸರಿಪಡಿಸುವಂತೆ ನಟ ಅನಿರುದ್ಧ ಮನವಿ

ಸ್ವಾಮೀಜಿಯನ್ನ ಬಂಧಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಮೂಲಕ‌ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದೆ. ಕಳೆದ ಆ. 15.ರಂದು ಮಹಾರಾಷ್ಟ್ರದ ನಾಸಿಕಕ್‌ ಜಿಲ್ಲೆಯ‌ ಶಾಹ ಪಂಚಾಲೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾದಿ ಮಹಮ್ಮದ ಪೈಗಂಬರ್ ಅವರ ಬಗ್ಗೆ ಸ್ವಾಮೀಜಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. 

click me!