ಅಪಘಾತದಲ್ಲಿ ವೆಂಕಟೇಶ ಎಂಬ ಯುವಕ ಮೃತಪಟ್ಟಿದ್ದ. ಯುವಕನ ಶವ ಮಸ್ಕಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬೆಳಗ್ಗೆಯಿಂದ ಮರಣೋತ್ತರ ಮಾಡುವಂತೆ ಸಂಬಂಧಿಕರು ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಸಂಬಂಧಿಕರ ಮನವಿಗೆ ಕೇರ್ ಮಾಡದೇ ಕರೆಂಟ್ ಇಲ್ಲವೆಂದು ಮರಣೋತ್ತರ ಪರೀಕ್ಷೆಗೆ ವೈದ್ಯರು ಹಿಂದೇಟು ಹಾಕಿದ್ದಾರೆ.
ರಾಯಚೂರು(ಆ.30): ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಹೀಗಾಗಿ ಕತ್ತಲಿನಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ಹಿಂದೇಟು ಹಾಕುವಂತ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಅಪಘಾತದಲ್ಲಿ ವೆಂಕಟೇಶ (26) ಎಂಬ ಯುವಕ ಮೃತಪಟ್ಟಿದ್ದ. ಯುವಕನ ಶವ ಮಸ್ಕಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬೆಳಗ್ಗೆಯಿಂದ ಮರಣೋತ್ತರ ಮಾಡುವಂತೆ ಸಂಬಂಧಿಕರು ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಸಂಬಂಧಿಕರ ಮನವಿಗೆ ಕೇರ್ ಮಾಡದೇ ಕರೆಂಟ್ ಇಲ್ಲವೆಂದು ಮರಣೋತ್ತರ ಪರೀಕ್ಷೆಗೆ ವೈದ್ಯರು ಹಿಂದೇಟು ಹಾಕಿದ್ದಾರೆ.
ರಾತ್ರಿ ಹೊತ್ತು ಪೋಸ್ಟ್‌ಮಾರ್ಟಂ ಮಾಡದೇ ಇರೋದಕ್ಕೆ ಇದೇ ಕಾರಣ !
ಕಳೆದ 8 ದಿನಗಳ ಹಿಂದೆ ಕಾರು ಅಪಘಾತಕ್ಕೆ ಒಳಗಾಗಿದ್ದ ವೆಂಕಟೇಶ. ಮಸ್ಕಿ ಹೊರವಲಯದಲ್ಲಿ ಮುದುಬಾಳ ಬಳಿ ಅಪಘಾತ ನಡೆದಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ ಮೃತಪಟ್ಟಿದ್ದನು. ವೆಂಕಟೇಶ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಮಸ್ಕಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಕಳೆದ ಒಂದು ವರ್ಷದಿಂದ ಶವಾಗಾರಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲವಂತೆ. ಮಸ್ಕಿ ಆಸ್ಪತ್ರೆಯ ದುಸ್ಥಿತಿ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.