
ದಾವಣಗೆರೆ (ಸೆ.08): ಈ ಹಿಂದೆ ಬಸ್ ಹಾಗೂ ಲಾರಿಗಳನ್ನು ಚಲಾಯಿಸಿ ಸುದ್ದಿಯಾಗಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮುಕ್ತಿ ವಾಹನಕ್ಕೆ ಚಾಲನೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪಂಚಾಯಿತಿ ಆವರಣದಲ್ಲಿ ಸೋಮವಾರ ನೂತನ ಮುಕ್ತಿವಾಹನ ಸಾರ್ವಜನಿಕ ಸೇವೆಗೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಂಡಿದ್ದರು.
ಖಾಕಿ ಅಂಗಿ ಧರಿಸಿ ಬಸ್ ಬಾರದ ಗ್ರಾಮಕ್ಕೆ ಬಸ್ ಓಡಿಸ್ಕೊಂಡು ಬಂದ ಹೊನ್ನಾಳಿ ಶಾಸಕ! .
ಸಿಎಂ ರಾಜಕೀಯ ಕಾರ‍್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮುಕ್ತಿವಾಹನ ಚಾಲನೆ ಮಾಡಿ ಗಮನ ಸೆಳೆದರು.
ಬಸ್ ಚಲಾಯಿಸಿ ಹೊನ್ನಾಳಿ ಶಾಸಕನ ಹೀರೋಯಿಸಂ: ಅಧಿಕಾರಿಗಳಿಗೆ ಸಂಕಷ್ಟ! ..
ತಾವೇ ಸ್ವತಃ ಮುಕ್ತಿ ವಾಹನ ಚಲಾಯಿಸುವ ಮೂಲಕ ಶಾಸಕರು ಚಾಲನೆ ನೀಡಿದರು.
ಈ ಹಿಂದೆ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಬಸ್ ಹಾಗೂ ಲಾರಿ ಓಡಿಸಿ ಸುದ್ದಿಯಾಗಿದ್ದರು. ಭಾರಿ ವಾಹನಗಳನ್ನು ಚಲಾಯಿಸಲು ಲೈಸೆನ್ಸ್ ಅಗತ್ಯವಿದ್ದು, ವಿವಾದಕ್ಕೆ ಈಡಾಗಿತ್ತು.