ರಾಯಚೂರು ಜಿಲ್ಲೆಯ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿಗಳಿಂದ ಆದೇಶ

Published : Jun 18, 2026, 09:22 AM IST
Moharram

ಸಾರಾಂಶ

ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯ  29 ಗ್ರಾಮಗಳಲ್ಲಿ ಮೊಹರಂ ಹಬ್ಬದ ಸಾರ್ವಜನಿಕ ಆಚರಣೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿಗಳು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದಾರೆ.

ರಾಯಚೂರು: ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ, ದೇವದುರ್ಗ ಹಾಗೂ ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಕಲಂ 35ರನ್ವಯ ನಿಷೇಧಿಸಲಾಗಿದೆ.

ಯಾವ ಗ್ರಾಮಗಳಲ್ಲಿ ನಿಷೇಧ?

ಜಿಲ್ಲೆಯ ಸಿಂಧನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗಿಣಿವಾರ, ಉಪ್ಪಳ, ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಿಗೊಳ-ತಿಡಿಗೋಳ, ಹತ್ತಿಗುಡ್ಡ, ಕುರಕುಂದಾ, ಚಿಕ್ಕಬೇರ್ಗಿ, ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಬಳ್ (ಯು), ರಾಗಲಪರ್ವಿ, ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಹಾಳ, ಜಾನೇಕಲ್, ಮದ್ಲಾಪೂರು, ಜಾಗೀರ ಪನ್ನೂರು, ಮಲ್ಲಿನ ಮಡಗು, ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರವಾರ ಪಟ್ಟಣ, ಕಡದಿನ್ನಿ, ಬೊಮ್ಮನಾಳ, ಕವಿತಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕವಿತಾಳ ಪಟ್ಟಣ, ಹಿರೆಬಾದರದಿನ್ನಿ, ಬಾಗಲವಾಡ, ಅಮೀನಗಡ, ಗೂಗೆಬಾಳ, ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ತಲೇಖಾನ್, ಸಂತೆಕಲ್ಲೂರು, ಮುಸಲಿ ಕಾರಲಕುಂಟೆ, ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಚೋಡಿ, ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪೂರು, ಬುದ್ದಿನ್ನಿ, ರಾಮದುರ್ಗ, ಹಿರೇಬೂದೂರು ಸೇರಿದಂತೆ ಒಟ್ಟು 29 ಗ್ರಾಮಗಳು

ಇದನ್ನೂ ಓದಿ: Kartavya App: ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡದ 2.13 ಲಕ್ಷ ನೌಕರರು! ಸಿಎಂ ಸೂಚನೆಗೂ ಬೆಲೆ ಇಲ್ಲವೇ?

ಜಿಲ್ಲಾಧಿಕಾರಿಗಳಿಂದ ಆದೇಶ

ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬುಧವಾರದಿಂದ ಜೂ.26 ರವರೆಗೆ ಆಚರಿಸಲಿರುವ ಮೋಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಈ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆಯನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಪೂವಿತಾ ಎಸ್. ಅವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ; ರಾಜರ ಬೇಟೆಯ ಪರಾಕ್ರಮ ಅನಾವರಣ

PREV
Read more Articles on
click me!

Recommended Stories

ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ; ರಾಜರ ಬೇಟೆಯ ಪರಾಕ್ರಮ ಅನಾವರಣ
ಹಾಸನ ನಗರದ ರೈಲ್ವೆ ಸೇತುವೆ ಎರಡೂ ಬದಿ ಸಂಚಾರ ಯಾವಾಗ? ಸಂಸದ ಶ್ರೇಯಸ್ ಪಟೇಲ್ ಮಹತ್ವದ ಘೋಷಣೆ