ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ತನ್ನ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಬೇಕಂತ ಕೆಲವು ಗುಂಪು ರೆಡಿ ಮಾಡಿ ಸಂಚು ಮಾಡಿದ್ರು, ರಾಜಕೀಯವಾಗಿ ಚುನಾವಣೆಗೆ ನಿಲ್ಲಬಾರದು ಅಂತ ಇದೊಂದು ವ್ಯವಸ್ಥಿತ ಹಲ್ಲೆ ಎಂದಿದ್ದಾರೆ.
ಮೂಡಿಗೆರೆ (ನ.21): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ತನ್ನ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಬೇಕಂತ ಕೆಲವು ಗುಂಪು ರೆಡಿ ಮಾಡಿ ಸಂಚು ಮಾಡಿದ್ರು, ಶಾಸಕರೇ ಆನೆ ಸಾಕಿದ್ದಾರೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ರು, ನನಗೆ ಚಪ್ಪಲಿಯಲ್ಲಿ ಹೊಡೆದರು. ಎಲ್ಲರ ಕೈನಲ್ಲೂ ದೊಣ್ಣೆ ಇತ್ತು. ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನ ಅಟ್ಟಾಡಿಸಿದರು. ನಾನೇ ಓಡಿ ಬಂದು ಕಾರಲ್ಲಿ ಕೂತೆ, ಜೀಪಿನ ಮೇಲೆ ತುಂಬಾ ಕಲ್ಲು ಹೊಡೆದರು. ಇದು ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿ. ಬನಿಯನ್ ಇತ್ತು ಬಟ್ಟೆ ಹರಿದದ್ದು ಕಾಣಲಿಲ್ಲ, ಬನಿಯನ್ ತೆಗೆದರೆ ಹರಿದದ್ದು ಕಾಣುತ್ತೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ರೆ ಏನು ಮಾಡೋದು. ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯವಾಗಿ ಚುನಾವಣೆಗೆ ನಿಲ್ಲಬಾರದು ಅಂತ ಇದೊಂದು ವ್ಯವಸ್ಥಿತ ಹಲ್ಲೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ನಾನು ಒಂದೇ ಒಂದು ಮಾತನಾಡಿಲ್ಲ, ಬಹಳ ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ನನ್ನ ಮೂಲಕ ಎಲ್ಲಾ ಶಾಸಕರಿಗೂ ಸರ್ಕಾರ ಭದ್ರತೆ ನೀಡಬೇಕು. ನಾನು ಕಾಡು ಕಾಯಲ್ಲ, ಆನೆ ಸಾಕಿಲ್ಲ, ಸರ್ಕಾರಕ್ಕೆ ದೂರು ನೀಡಬಹುದು, ನೀಡುತ್ತೇನೆ. ನಾನು ಕೋರ್ಟ್ ಅಲ್ಲ, ಕ್ಷೇತ್ರಕ್ಕೆ ಸಾಕಷ್ಟು ಹಣ ತಂದಿದ್ದೇನೆ. ಇಂದು ಹೋಗಿ ಎಲ್ಲರಿಗೂ ಸಾಂತ್ವನ ಹೇಳಿದ್ದೇನೆ. ಆನೆ ಸ್ಥಳಾಂತಕ್ಕೆ ನಾಳೆಯೇ ಕ್ರಮ ಕೈಗೊಳ್ಳುತ್ತೇವೆ, ಬೆಂಗಳೂರಿಗೆ ಹೋಗುತ್ತೇನೆ. ಈ ಬಗ್ಗೆ ವರಿಷ್ಟರು, ಸಿಎಂ, ಗೃಹ ಮಂತ್ರಿ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ, ಭುಗಿಲೆದ್ದ ಜನರ ಆಕ್ರೋಶ
ಕುಂದೂರು ಹುಲ್ಲೇಮನೆಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿರುವ ಪೋಟೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನ್ಯಾಯಾಲಯ, ಸರ್ಕಾರ ಆನೆಗಳ ಬಗ್ಗೆ ಏನು ಹೇಳುತ್ತದೆ ಎಂದು ಇಡೀ ದೇಶಕ್ಕೆ, ರಾಜ್ಯಕ್ಕೆ ಗೊತ್ತಿದೆ. ಸಂಚು ಮಾಡಿ ನನ್ನ ಮೇಲೆ ಹಲ್ಲೆ ನಡೆಸಿದ್ರು ಎಂದಿದ್ದಾರೆ.
Chikkamagaluru: ಆನೆ ದಾಳಿಗೆ 3 ತಿಂಗಳಲ್ಲಿ 3 ಬಲಿ: ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಮೇಲೆ ಹಲ್ಲೆ?
ಪೊಲೀಸ್ ವೈಫಲ್ಯ ಇದರಲ್ಲಿ ಇದೆ. ಕೇವಲ 10 ಜನ ಪೊಲೀಸರು ಮಾತ್ರ ಇದ್ರು, ಪೊಲೀಸರು ಮಿಸ್‌ಗೈಡ್ ಮಾಡಿ ನನ್ನನ್ನು ಅಲ್ಲಿಂದ ಕಳುಹಿಸಿದ್ರು, ನಾನು ಅಲ್ಲೇ ಇರುತ್ತಿದ್ದೆ. ಯಾವುದೇ ಕಾರಣಕ್ಕೂ ಆ ಜಾಗವನ್ನು ಬಿಟ್ಟು ನಾನು ಬರುತ್ತಿರಲಿಲ್ಲ. ಸಾರ್ವಜನಿಕ ಸೇವೆಯಲ್ಲಿರುವ ನಾನು ಎಲ್ಲ ತ್ಯಾಗಕ್ಕೂ ಸಿದ್ಧ ಇದ್ದೇನೆ. ಪೊಲೀಸರಿಂದ ಆಗಿರುವ ತಪ್ಪಿನಿಂದ ನನಗೆ ಹೀಗೆಲ್ಲಾ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಎಂಟು ಜನರ ಮೇಲೆ ಪ್ರಕರಣ ದಾಖಲು: ಕುಂದೂರು ಗ್ರಾಮದಲ್ಲಿ ಕೇವಲ ಶಾಸಕರ ಮೇಲೆ ಮಾತ್ರ ಹಲ್ಲೆ ನಡೆದಿಲ್ಲ. ಪೊಲೀಸರ ಮೇಲೂ ಹಲ್ಲೆಯಾಗಿದೆ. ಉದ್ರಿಕ್ತರು ಪೊಲೀಸರ ಮೇಲೂ ಕಲ್ಲು ತೋರಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಟಿ ಚಾರ್ಜ್ ಕೂಡ ಮಾಡಿದ್ದಾರೆ. ಪ್ರಕರಣ ಸಂಬಂಧ ಎಂಟು ಜನರ ಮೇಲೆ ಪ್ರಕರಣ ಕೂಡ ದಾಖಲಿಸಿದ್ದಾರೆ. ಆದರೆ, ಓರ್ವ ಶಾಸಕನಿಗೆ ಈ ರೀತಿ ಹಲ್ಲೆಯಾಗಿದೆ. ಸರ್ಕಾರ ರಾಜ್ಯದ ಎಲ್ಲಾ ಶಾಸಕರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದೂರು ನೀಡಲು ಮುಂದಾಗಿದ್ದಾರೆ. ಇಷ್ಟೆಲ್ಲಾ ಸಾಹಸ-ಹರಸಾಹಸದ ಮಧ್ಯೆಯೂ ನನ್ನೆಯಿಂದ ಅಂತ್ಯ ಸಂಸ್ಕಾರವಾಗದೆ ಉಳಿದಿದ್ದ ಮೃತ ಶೋಭಾಳ ಅಂತ್ಯಕ್ರಿಯೆ ಇಂದು ಮುಗಿದಿದೆ.ಒಟ್ಟಾರೆ, ಬಹುಶಃ ರಾಜ್ಯದ ಇತಿಹಾಸದಲ್ಲಿ ಈ ರೀತಿ ಓರ್ವ ಶಾಸಕನ ಮೇಲೆ ಹಲ್ಲೆಯಾಗಿರುವುದು ಇದೇ ಮೊದಲು ಅನ್ಸತ್ತೆ. ಆದ್ರೆ,ಇಲ್ಲಿ ಶಾಸಕರ ಮೇಲೆ ನಿಜಕ್ಕೂ ಹಲ್ಲೆಯಾಯ್ತಾ. ಜನ ಪೊಲೀಸರಿಗೂ ಹೊಡೆದರಾ. ಜನರೇ ಹೊಡೆದರಾ ಅಥವ ಜನರ ಹೆಸರಲ್ಲಿ ರಾಜಕೀಯ ದಾಳಿಯಾಯ್ತಾ ಎಂಬೆಲ್ಲಾ ಪ್ರಶ್ನೆ ಮೂಡೋದು ಸಹಜ. ಪೊಲೀಸರ ನಿಷ್ಪಕ್ಷಪಾತವಾದ ತನಿಖೆಯಿಂದ ಘಟನೆಯ ಪೂರ್ವಾಪರ ಬೆಳಕಿಗೆ ಬರಬೇಕಿದೆ