Chikkamagaluru: ಆನೆ ದಾಳಿಗೆ 3 ತಿಂಗಳಲ್ಲಿ 3 ಬಲಿ: ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಮೇಲೆ ಹಲ್ಲೆ?

By Govindaraj S  |  First Published Nov 21, 2022, 12:35 PM IST

ಆನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದ ಸ್ಥಳಕ್ಕೆ ಭೇಟಿ ನೀಡಿದ  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ತಾಲೂಕಿನ ಹುಲ್ಲೆಹಳ್ಳಿ-ಕುಂದೂರು ಭಾಗದ ರೈತರು ಹಲ್ಲೇ ಮಾಡಿ ಶಾಸಕ ಕುಮಾರಸ್ವಾಮಿಯ ಶರ್ಟ್ ಹರಿದರಾ ಎಂಬ ಪ್ರಶ್ನೆ ಮೂಡಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.21): ಆನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದ ಸ್ಥಳಕ್ಕೆ ಭೇಟಿ ನೀಡಿದ  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ತಾಲೂಕಿನ ಹುಲ್ಲೆಹಳ್ಳಿ-ಕುಂದೂರು ಭಾಗದ ರೈತರು ಹಲ್ಲೇ ಮಾಡಿ ಶಾಸಕ ಕುಮಾರಸ್ವಾಮಿಯ ಶರ್ಟ್ ಹರಿದರಾ ಎಂಬ ಪ್ರಶ್ನೆ ಮೂಡಿದೆ. ಮೂಡಿಗೆರೆ ತಾಲೂಕಿನ ಹುಲ್ಲೆಹಳ್ಳಿ-ಕುಂದೂರು ಗ್ರಾಮದಲ್ಲಿ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ 35 ವರ್ಷದ ಶೋಭಾ ಎಂಬ ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಮಹಿಳೆಯನ್ನ ಸ್ಥಳದಲ್ಲೇ ಕೊಂದಿತ್ತು. ಸ್ಥಳಿಯರು ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. 

Latest Videos

undefined

ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಬಂದ ಶಾಸಕ ಕುಮಾರಸ್ವಾಮಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಡಿ.ಎಫ್.ಓ ಬರುವವರೆಗೆ ಮೃತದೇಹವನ್ನ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದ ಮೇಲೆ ಹಿರಿಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಬಳಿಕ ಮಧ್ಯಾಹ್ನ ಮೂರು ಗಂಟೆ ಬಳಿಕ ಬಂದ ಶಾಸಕರ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಗುಂಪನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು. 

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ, ಭುಗಿಲೆದ್ದ ಜನರ ಆಕ್ರೋಶ

ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸಪಟ್ಟು ಕುಮಾರಸ್ವಾಮಿಯನ್ನ ರಕ್ಷಿಸಿದ್ದಾರೆ. ಪೊಲೀಸರು ಸುತ್ತುವರಿದು ಕುಮಾರಸ್ವಾಮಿಯನ್ನ ಸೇಫಾಗಿ ತಂದು ಜೀಪಿನಲ್ಲಿ ಕೂರಿಸಿ ಸುರಕ್ಷಿತವಾಗಿ ವಾಪಸ್ ಕಳುಹಿಸಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹಾಕಿ ಸ್ಪಷ್ಟನೆ ನೀಡಿರುವ ಶಾಸಕ ಕುಮಾರಸ್ವಾಮಿ ಜನರ ಸಮಸ್ಯೆ ಕೇಳಲು ಹೋಗಿದೆ. ಕೆಲವರು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದು ಇದಕ್ಕೆ ಪೊಲೀಸ್ ವೈಫಲ್ಯ ಕಾರಣವೆಂದು ಕಿಡಿಕಾರಿದ್ದಾರೆ.

ಆನೆ ಕಂಡ ಕೂಡಲೇ ಪತ್ನಿಯನ್ನ ಓಡಿಸಿದ್ದ ಪತಿ: ರಸ್ತೆ ಬದಿಯ ತೋಟದಲ್ಲಿ ಹುಲ್ಲು ಕೊಯ್ಯುವಾಗ ಮೃತ ಶೋಭಾಳ ಪತಿ ಸತೀಶ್ ಕೂಡ ಜೊತೆಗಿದ್ದರು. ಆನೆ ಘೀಳಿಟ್ಟ ಕೂಡಲೇ ಪತಿ ಸತೀಶ್ ಪತ್ನಿ ಶೋಭಾಳನ್ನ ಓಡು ಎಂದು ಓಡಿಸಿದ್ದಾರೆ. ಆದರೆ, ಸುಮಾರು ಎರಡು ಫರ್‍ಲಾಂಗ್ ದೂರವಿದ್ದು ಆನೆ ಶೋಭಾ 15-20 ಮೀಟರ್ ದೂರಕ್ಕೆ ಓಡುವಷ್ಟರಲ್ಲಿ ಶೋಭಾ ಮೇಲೆ ದಾಳಿ ಮಾಡಿದೆ. ಅಷ್ಟು ವೇಗವಾಗಿ ಓಡಿ ಬಂದು ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಶೋಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು: ಶಾಲೆಗೆ ಹೊಸ ರೂಪ ನೀಡಿದ ಮಹಿಳೆಯರು, ನವವಧುವಿನಂತೆ ಸಿಂಗಾರಗೊಂಡ ಸ್ಕೂಲ್‌..!

ಅರಣ್ಯ ಇಲಾಖೆಗೆ ಸ್ಥಳಿಯರು ಪ್ರಶ್ನೆ: ಕಳೆದ ಮೂರು ತಿಂಗಳಲ್ಲಿ ತಿಂಗಳಿಗೆ ಒಬ್ಬರಂತೆ ರೈತರು ಆನೆ ದಾಳಿಗೆ ಬಲಿಯಾಗಿದ್ದಾರೆ. ಈ ತಿಂಗಳು ನಾನು ಬದುಕಿದೆ. ಮುಂದಿನ ತಿಂಗಳು ಏನೋ ಎಂದು ರೈತರು ದಿನ ಎಣಿಸಿಕೊಂಡು ಬದುಕುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಷ್ಟು ದಿನ ಆನೆ ದಾಳಿಯಾದಾಗ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಅವರಿಗೇನು ಕೆಲಸ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ, ಇಂದು ಆನೆ ದಾಳಿ ಮಾಡಿರುವುದು ಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ. ಇಡುವಳಿ ಜಮೀನಿನಲ್ಲಿ. ಈಗ ಸ್ಥಳಿಯರು ಅಧಿಕಾರಿಗಳು ಇದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆನೆ ಇಲ್ಲಿಗೆ ಏಕೆ-ಹೇಗೆ ಬಂತು. ಇದಕ್ಕೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸಿದ್ದಾರೆ.

click me!