Vijayapura: ಮುದ್ದೇಬಿಹಾಳ ಮಾಜಿ ಶಾಸಕ ಎಂ.ಎಂ. ಸಜ್ಜನ ಇನ್ನಿಲ್ಲ

Suvarna News   | Asianet News
Published : Feb 01, 2022, 09:46 AM IST
Vijayapura: ಮುದ್ದೇಬಿಹಾಳ ಮಾಜಿ ಶಾಸಕ ಎಂ.ಎಂ. ಸಜ್ಜನ ಇನ್ನಿಲ್ಲ

ಸಾರಾಂಶ

*  ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಎಂ.ಎಂ. ಸಜ್ಜನ *  1972-78 ರವರೆಗೆ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದ ಸಜ್ಜನ *  ಸಜ್ಜನ ನಿಧನಕ್ಕೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ರಾಜಕಾರಣಿಗಳ ಸಂತಾಪ

ವಿಜಯಪುರ(ಫೆ.01):  ವಿಜಯಪುರ(Vijayapura) ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಎಂ. ಸಜ್ಜನ (95) ಇಂದು(ಮಂಗಳವಾರ) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಶಾಸಕರು ಇಂದು‌‌ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. 

ಮಲ್ಲಪ್ಪ ಮುರಿಗೆಪ್ಪ ಸಜ್ಜನ(MM Sajjan) ಅವರು 1972-78 ರವರೆಗೆ ಮುದ್ದೇಬಿಹಾಳ(Muddebihal) ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇಂದು ಸಾಯಂಕಾಲ 4 ಗಂಟೆಗೆ ಮುದ್ದೇಬಿಹಾಳ ಪಟ್ಟಣದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ(Funeral) ನಡೆಯಲಿದೆ ಎಂಬ ಮಾಹಿತಿ ಕುಟುಂಬಸ್ಥರಿಂದ ತಿಳಿದು ಬಂದಿದೆ.

Kolar: ಶ್ರೀಪಾದರಾಜ ಮಠದ ಕೇಶವನಿಧಿ ಶ್ರೀ ವಿಧಿವಶ

ಮಾಜಿ ಶಾಸಕ ಎಂ.ಎಂ. ಸಜ್ಜನ ನಿಧನಕ್ಕೆ ನಾಡಿನ ವಿವಿಧ ಮಠಾಧೀಶರು, ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ(Condolences) ವ್ಯಕ್ತಪಡಿಸಿದ್ದಾರೆ. 
 

PREV
Read more Articles on
click me!

Recommended Stories

ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ!
ವನ್ಯಪ್ರಾಣಿಗಳಿಗಲ್ಲ, ಕುಟುಂಬ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಸಂತಾನಹರಣ ಮಾಡಿ: ಸರ್ಕಾರಕ್ಕೆ ಭಾಗ್ಯರಾಜ್ ತಿರುಗೇಟು