ಎಂಟಿಆರ್‌ನಿಂದ ಪ್ಯಾಕೇಜ್ಡ್‌ ಗೊಜ್ಜು ಮಸಾಲ ಮಾರುಕಟ್ಟೆಗೆ

Published : Feb 01, 2020, 09:41 AM IST
ಎಂಟಿಆರ್‌ನಿಂದ ಪ್ಯಾಕೇಜ್ಡ್‌ ಗೊಜ್ಜು ಮಸಾಲ ಮಾರುಕಟ್ಟೆಗೆ

ಸಾರಾಂಶ

ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಇದೀಗ ಪ್ಯಾಕೇಜ್ಡ್‌ ಗೊಜ್ಜು ಮಸಾಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೆಂಗಳೂರು(ಫೆ.01): ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಇದೀಗ ಪ್ಯಾಕೇಜ್ಡ್‌ ಗೊಜ್ಜು ಮಸಾಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವೈವಿಧ್ಯಮಯ ಮಸಾಲೆಯ ಸಂಯೋಜನೆಯಾಗಿರುವ ಈ ಗೊಜ್ಜು ಮಸಾಲ ಕನ್ನಡಿಗರ ಭೋಜನದಲ್ಲಿ ದೊಡ್ಡ ಪಾಲು ಪಡೆಯಲಿದೆ. ಗೊಜ್ಜನ್ನು ಸಾಮಾನ್ಯವಾಗಿ ಸಸ್ಸಿಮೆ, ಕೈ ರಸ, ಮೆಣಸಿನಕಾಯಿ, ಹುಳಿ ಮೆಣಸು ಎಂದು ಗುರುತಿಸಲಾಗುತ್ತದೆ.

ಶಾಸಕ ಹ್ಯಾರಿಸ್‌ ಪುತ್ರನ ಹುಟ್ಟುಹಬ್ಬಕ್ಕೆ ನಿಯಮ ಉಲ್ಲಂಘಿಸಿ ಫ್ಲೆಕ್ಸ್‌!

ಈ ಪ್ಯಾಕೇಜ್ಡ್‌ ಗೊಜ್ಜು ಮಸಾಲ ಹಲವು ಮಸಾಲೆಗಳ ಸಂಯೋಜನೆಯಾಗಿದ್ದು, ಹಲವು ತಿನಿಸುಗಳ ಜತೆ ಬಳಸಬಹುದು. ಅಂದರೆ ‘ಒಂದು ಮಸಾಲ, ಹಲವು ಗೊಜ್ಜುಗಳು’ ಎಂಬಂತೆ ಉದ್ದಿನ ಬೇಳೆ, ಎಳ್ಳು, ದನಿಯಾಗಳ ಪರಿಪೂರ್ಣ ಸಂಯೋಜನೆಯೊಂದಿಗೆ ಸಿದ್ಧಪಡಿಸಲಾಗಿದೆ. ವ್ಯಾಪಾರ ಮಳಿಗೆಗಳಲ್ಲಿ ಈ ಗೊಜ್ಜು ಮಸಾಲ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

PREV
click me!

Recommended Stories

'ಪ್ರೇಮದ ಊರಲ್ಲಿ' ಸಿನಿಮಾದಿಂದ ಫೇಮಸ್ ಆದ ಸಿಗೇಗುಡ್ಡಕ್ಕೆ ಕಸದ ಕಾಟ! ಪ್ರಕೃತಿ ಸೌಂದರ್ಯಕ್ಕೆ ಕಂಟಕವಾದ ಪ್ಲಾಸ್ಟಿಕ್ ರಾಶಿ
ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್‌ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ, 160 ಎಕರೆ, 729 ಕೋಟಿ ವೆಚ್ಚ!