PM Modi: ನ.13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ಪಿಂಕ್ ಲೈನ್ ಉದ್ಘಾಟನೆ, ಶೀಘ್ರದಲ್ಲೇ ಹುಬ್ಬಳ್ಳಿಗೆ ಮತ್ತೊಂದು ವಂದೇ ಭಾರತ್ ರೈಲು!

Published : Nov 03, 2026, 09:54 PM IST
Tejasvi surya at hubballi

ಸಾರಾಂಶ

ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ನಮ್ಮ ಮೆಟ್ರೋದ ಪಿಂಕ್ ಲೈನ್ ಉದ್ಘಾಟಿಸಲಿದ್ದಾರೆ. ಇದೇ ವೇಳೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಹುಬ್ಬಳ್ಳಿಯಲ್ಲಿಂದ ಸಂಸದ ತೇಜಸ್ವಿ ಸೂರ್ಯ ತಿಳಿಸಿದದರು.

ಹುಬ್ಬಳ್ಳಿ (ನ.3): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಬೆಂಗಳೂರಿಗೆ ಆಗಮಿಸಲಿದ್ದು, ಬೆಂಗಳೂರು ಮೆಟ್ರೋಲ್ ಪಿಂಕ್ ಲೈನ್ ಉದ್ಘಾಟಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸದರು, ನವೆಂಬರ್ 13, ಬೆಳಗ್ಗೆ 11.30 ರಿಂದ 12 ಗಂಟೆ ಸುಮಾರಿಗೆ ತಾವರೆಕೆರೆ-ಐಐಎಂಬಿ ಮೆಟ್ರೋವರೆಗೂ ಪ್ರಯಾಣಿಸಲಿದ್ದಾರೆ ಎಂದರು.

ಪ್ರಧಾನಿ ಮೋದಿಯವರಿಂದ ಆರು ನಿಲ್ದಾಣಗಳು ಉದ್ಘಾಟನೆ

ಪಿಂಕ್ ಲೈನ್‌ನ 7.5 ಕಿ.ಮೀ. ಮಾರ್ಗ ಹಾಗೂ ಆರು ನಿಲ್ದಾಣಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಪಿಂಕ್ ಲೈನ್‌ನ ಬಹುತೇಕ ನಿಲ್ದಾಣಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದೆ.ಇದರೊಂದಿಗೆ ಬೆಂಗಳೂರು ಮೆಟ್ರೋ ನೆಟ್ವರ್ಕ್ 103 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ದೆಹಲಿ ನಂತರ ಅತಿ ದೊಡ್ಡ ಮೆಟ್ರೋ ಜಾಲವಾಗಿ ಬೆಂಗಳೂರು ಹೊರಹೊಮ್ಮಲಿದೆ ಎಂದರು. ಅಲ್ಲದೆ ಬೆಂಗಳೂರು-ಮುಂಬೈ ನಡುವೆ ಯಾದಗಿರಿ ಕಲಬುರಗಿ ಮಾರ್ಗವಾಗಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕೂಡ ಇದೇ ವೇಳೆ ಘೋಷಣೆಯಾಗಲಿದೆ ಎಂದರು.

ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು-ಮುಂಬೈ ಮತ್ತೊಂದು ವಂದೇ ಭಾರತ್ ರೈಲು ಆರಂಭಿಸುವ ಬಗ್ಗೆ ಸಂಸದ ಸುಳಿವು ನೀಡಿದರು. ಬೆಂಗಳೂರು-ಪುಣೆ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಬುಲೆಟ್ ಟ್ರೈನ್ ಕಾರಿಡಾರ್ ಕಲ್ಪಿಸುವ ಕುರಿತು ಸಂಸದರು ಭರವಸೆ ನೀಡಿದರು.

ಮೆಟ್ರೋ ಕಾಮಗಾರಿ ವಿಳಂಬ; ರಾಜ್ಯ ಸರ್ಕಾರದ ವಿರುದ್ಧ ಸಂಸದ ವಾಗ್ದಾಳಿ

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದರು. ರಾಜ್ಯ ಸರ್ಕಾರ ಮೆಟ್ರೋ ಕಾಮಗಾರಿ ವಿಳಂಬ, ನಿರ್ವಹಣೆ ಹಾಗೂ ಟಿಕೆಟ್ ದರ ಏರಿಕೆ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಗರಂ ಆದ ಸಂಸದರು ಕಿಡಿಕಾರಿದರು.

ಮೆಟ್ರೋ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ತಿರುಗೇಟು ನೀಡಿದರು.

PREV
Read more Articles on
click me!

Recommended Stories

ಕೇವಲ ₹15 ಬಸ್ ಟಿಕೆಟ್‌ಗಾಗಿ 14 ತಿಂಗಳ ಹೋರಾಟ, ಕೊನೆಗೂ ಪ್ರಯಾಣಿಕನಿಗೆ ₹11,485 ಪರಿಹಾರ ನೀಡಿದ KSRTC!
ಕಾರ್ಯಕರ್ತರಿಗಾಗಿ ₹5 ಲಕ್ಷ ಕೊಟ್ಟು 'ಹಾಸನಾಂಬೆಯ ಟಿಕೆಟ್' ಖರೀದಿಸಿದ ಶಿವಲಿಂಗೇಗೌಡ, ಆಮೇಲೆ ಅದನ್ನು ಯಾರಿಗೆ ಕೊಟ್ರು?