ಸಮಸ್ಯೆ ಅರಿಯಲು ಸಂಸದ ತೇಜಸ್ವಿ ಸೂರ್ಯ ದಿಢೀರ್ ಭೇಟಿ

Published : Aug 26, 2019, 08:15 AM IST
ಸಮಸ್ಯೆ ಅರಿಯಲು ಸಂಸದ ತೇಜಸ್ವಿ ಸೂರ್ಯ ದಿಢೀರ್ ಭೇಟಿ

ಸಾರಾಂಶ

 ಬನ್ನೇರುಘಟ್ಟಮುಖ್ಯ ರಸ್ತೆಗೆ ದೀಢೀರ್‌ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ‍್ಯ, ಟ್ರಾಫಿಕ್‌ ಸಮಸ್ಯೆಗಳು, ಅರಕೆರೆ ಮತ್ತು ಹುಳಿಮಾವು ಕೆರೆ ಸ್ವಚ್ಛತೆ, ಮೆಟ್ರೋ ಕಾಮಗಾರಿಯಿಂದಾಗುತ್ತಿರುವ ಹಲವಾರು ತೊಂದರೆಗಳ ಅಧಿಕಾರಿಗಳ ಜೊತೆಗೆ ಚರ್ಚಿಸಿದರು. 

ಬೊಮ್ಮನಹಳ್ಳಿ [ಆ.26]: ಬನ್ನೇರುಘಟ್ಟಮುಖ್ಯ ರಸ್ತೆಗೆ ದೀಢೀರ್‌ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ‍್ಯ, ಟ್ರಾಫಿಕ್‌ ಸಮಸ್ಯೆಗಳು, ಅರಕೆರೆ ಮತ್ತು ಹುಳಿಮಾವು ಕೆರೆ ಸ್ವಚ್ಛತೆ, ಮೆಟ್ರೋ ಕಾಮಗಾರಿಯಿಂದಾಗುತ್ತಿರುವ ಹಲವಾರು ತೊಂದರೆಗಳ ಬಗ್ಗೆ ಅಧಿಕಾರಿಗಳು, ಪಾಲಿಕೆ ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.

ಜೆಡಿ ಮರ ಜಂಕ್ಷನ್‌, ಬ್ರಾಂಡ್‌ ಫ್ಯಾಕ್ಟರಿ ಬಳಿ ಇರುವ ರಾಜಕಾಲುವೆ, ಬಿಳೇಕಹಳ್ಳಿ ಸಿಗ್ನಲ್‌ ಬಳಿಯ ಹಳ್ಳ ಬಿದ್ದಿರುವ ರಸ್ತೆ, ಚರಂಡಿ ನೀರು ಕೆರೆಗೆ ಹರಿಯುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನಲ್ಲಿರುವ ನುಸುಳುಕೋರರನ್ನು ವಾಪಸ್ ಕಳಿಸಿ : ತೇಜಸ್ವಿ ಸೂರ್ಯ

ಈ ಸಂದರ್ಭದಲ್ಲಿ ಶಾಸಕ ಎಂ.ಸತೀಶ್‌ ರೆಡ್ಡಿ, ರಸ್ತೆಗಳನ್ನು ವೀಕ್ಷಿಸಿ ಹತ್ತು ದಿನಗಳೊಳಗಾಗಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಸ್ಥಳೀಯ ಪಾಲಿಕೆ ಸದಸ್ಯರಾದ ಭಾಗ್ಯಲಕ್ಷ್ಮೇ ಮುರಳಿ, ಪ್ರಭಾವತಿ ರಮೇಶ್‌, ಬಿಜೆಪಿ ಮುಖಂಡರಾದ ಮುರಳೀಧರ್‌, ರಮೇಶ್‌ (ಜಲ್ಲಿ) ಸಂಸದರಿಗೆ ಸಾಥ್‌ ನೀಡಿದರು.

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!