ಕರಾವಳಿಯಲ್ಲಿ ಪಾಕ್ ಉಗ್ರನಿಗಾಗಿ ತೀವ್ರ ಶೋಧ

By Web Desk  |  First Published Aug 26, 2019, 7:42 AM IST

 6 ಮಂದಿ ಲಷ್ಕರ್ ಉಗ್ರರು ದಕ್ಷಿಣ ಭಾರತ ಪ್ರವೇಶಿಸಿದ್ದು ಇವರಲ್ಲಿ ಒಬ್ಬ ಪಾಕಿಸ್ತಾನ ಉಗ್ರನೂ ಇದ್ದಾನೆ. ಈ ಬಗ್ಗೆ ಎಚ್ಚರದಿಂದ ಇರುವಂತೆ ಕರಾವಳಿ ಕಾವಲು ಪೊಲೀಸರು ತಿಳಿಸಿದ್ದಾರೆ. 


ಉಡುಪಿ [ಆ.26]: 6 ಮಂದಿ ಲಷ್ಕರ್ ಉಗ್ರರು ದಕ್ಷಿಣ ಭಾರತ ಪ್ರವೇಶಿಸಿದ್ದು ಇವರಲ್ಲಿ ಒಬ್ಬ ಪಾಕಿಸ್ತಾನ ಉಗ್ರನೂ ಇದ್ದಾನೆ. ಈ ಬಗ್ಗೆ ಎಚ್ಚರದಿಂದ ಇರುವಂತೆ ಕರಾವಳಿ ಕಾವಲು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪರಿಸರದಲ್ಲಿ ಕರಪತ್ರ ಹೊರಡಿಸಿದ್ದು ಇದರಲ್ಲಿ ಉಗ್ರನ ಭಾವಚಿತ್ರ ಹಾಕಲಾಗಿದೆ. ಈ ಚಹರೆಯ ಅಥವಾ ಸಂಶಯಾಸ್ಪದ ಚಲನವಲನ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ. 

ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ 6 ಮಂದಿ ಉಗ್ರರು ದಕ್ಷಿಣ ಭಾರತ ಪ್ರವೇಶಿಸಿರುವ ಬಗ್ಗೆ ಮಾಹಿತಿ ಲಭಿಸಿರುವು ದಾಗಿ ತಿಳಿಸಿರುವ ಕರಾವಳಿ ಕಾವಲು ಪೊಲೀಸ್, ಕರ್ನಾ ಟಕದ ಕರಾವಳಿ ತೀರದಲ್ಲಿ ನಿಗಾ ವಹಿಸಲು ಪ್ರಕಟಣೆ ಹೊರಡಿಸಿದೆ. ಭಾರತ ಪ್ರವೇಶಿಸಿದ್ದಾರೆ ಎನ್ನಲಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆಯೂ ಇದ್ದಾನೆ ಎಂದು ಹೇಳಲಾಗಿದೆ. ಆತನ ಭಾವಚಿತ್ರ ಬಿಡುಗಡೆ ಮಾಡಿರುವ ಪೊಲೀ ಸರು, ಫೋಟೋದಲ್ಲಿರು ವಂತಹ ಚಹರೆಯ ಅಥವಾ ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳು ಕಂಡು ಬಂದಲ್ಲಿ ಕರಾವಳಿ ಮಾಹಿತಿ ಈ ಬಗ್ಗೆ ಉಡುಪಿ ಜಿಲ್ಲೆಯ ಮಲ್ಪೆ ಪರಿಸರದಲ್ಲಿ  ಭಿತ್ತಿಪತ್ರಗಳನ್ನು ಅಂಟಿಸ ಲಾಗಿದೆ. ಈ ಆರು ಮಂದಿ ಉಗ್ರರ ತಂಡ ವಾರದ ಹಿಂದೆ ತಮಿಳುನಾಡು ಪ್ರವೇಶಿಸಿದ್ದು, ದೇಶ ದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest Videos

ಪೊಲೀಸ್ ಸ್ಪಷ್ಟನೆ: ಈ  ನಡುವೆ ಮಲ್ಪೆಗೆ ಉಗ್ರರು ಬಂದಿದ್ದಾರೆ ಎಂದು ಸಾಮಾ ಜಿಕ ಜಾಲತಾಣ ಗಳಲ್ಲಿ ತಪ್ಪು ಸಂದೇಶಗಳು ಹರಿ ದಾಡುತ್ತಿದ್ದು ಆತಂಕಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕರಾವಳಿ ಕಾವಲು ಪೊಲೀಸರು, ತಮಿಳುನಾಡಿಗೆ ಉಗ್ರರು ಬಂದಿರುವ ಮಾಹಿತಿ ಇದೆ. ಈ ಬಗ್ಗೆ ರಾಜ್ಯದ ಕರಾವಳಿಯ ಎಲ್ಲ ಪೊಲೀಸ್ ಠಾಣೆಗಳಿಗೆ ನಿಗಾ ವಹಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ನೋಟಿಸು ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. 

click me!