
ಮಂಡ್ಯ(ಫೆ.27): ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಶಕ್ತಿ ದೇವಿಯ ಶುಭ ಸೂಚನೆ ನೀಡಿದ್ದಾಳೆ. ಹೌದು, ಬಲಗಡೆಯಿಂದ ಹೂ ನೀಡುವ ಮೂಲಕ ಶ್ರೀ ನಿಮಿಷಾಂಭ ದೇವಿ ಸುಮಲತಾಗೆ ಶುಭ ಸೂಚನೆ ನೀಡಿದ್ದಾಳೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಭ ದೇಗುಲ ಆಗಮಿಸಿದ ಸಂಸದೆ ಸುಮಲತಾ ಅಂಬರೀಷ್ ದೇವಿಯ ದರ್ಶನ ವಿಶೇಷ ಪೂಜೆ ಸಲ್ಲಿಸಿದ್ದರು. ಚುನಾವಣೆ ಹೊಸ್ತಿಲಲ್ಲಿ ದೇವಿಗೆ ಪೂಜೆ ಸಲ್ಲಿಸಲು ಸಂಸದೆ ಸುಮಲತಾ ಅಂಬರೀಷ್ ತೆರಳಿದ್ದರು. ಪೂಜೆ ಸಲ್ಲಿಸುವ ವೇಳೆ ಬಲಭಾಗದಿಂದ ದೇವಿ ಹೂ ನೀಡಿದ್ದಾಳೆ. ದೇವಿ ಬಲಗಡೆ ಹೂ ನೀಡಿದ್ರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ. ಇದ್ರಿಂದ MP ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ಶುರುವಾಗಿದೆ. ದೇವಿಯ ಶುಭು ಸೂಚನೆಯಿಂದ ಸುಮಲತಾ ಸಂತಸಗೊಂಡಿದ್ದಾರೆ.
ಏನಿಲ್ಲ ಏನಿಲ್ಲ ನಮ್ಮ ನಡುವೆ ವೈಷಮ್ಯವಿಲ್ಲ, ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ
ಇದೇ ವೇಳೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್ ಅವರು, ನಿಮಿಷಾಂಭ ದೇಗುಲಕ್ಕೆ ಬಂದ್ರೆ ಒಂದು ವೈಬ್ರೇಷನ್ ಬರುತ್ತದೆ. ನನಗೋಸ್ಕರ ಅಂತ ನಾನು ಯಾವತ್ತೂ ಕೇಳಿಕೊಳ್ಳಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತೇನೆ. ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಇವತ್ತು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.