ನೀಲಾಂಬೂರು– ನಂಜನಗೂಡು ರೈಲ್ವೆ ಮಾರ್ಗಕ್ಕೆ ಪ್ರತಾಪ್ ಸಿಂಹ ವಿರೋಧ

By Suvarna NewsFirst Published Feb 5, 2024, 5:45 PM IST
Highlights

ಕೇರಳ ಸರ್ಕಾರವು ನೀಲಾಂಬೂರು– ನಂಜನಗೂಡು ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆಗೆ ಮುಂದಾಗಿದ್ದು, ಸರ್ಕಾರ ಅವಕಾಶವನ್ನೂ ನೀಡಿದೆ. ಅದಕ್ಕೆ ವಿರೋಧವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು (ಫೆ.5): ಕೇರಳ ಸರ್ಕಾರವು ನೀಲಾಂಬೂರು– ನಂಜನಗೂಡು ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆಗೆ ಮುಂದಾಗಿದ್ದು, ಸರ್ಕಾರ ಅವಕಾಶವನ್ನೂ ನೀಡಿದೆ. ಅದಕ್ಕೆ ವಿರೋಧವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಸಂಪರ್ಕ ಕಲ್ಪಿಸುವುದರಿಂದ ಯಾವುದೇ ಲಾಭವೂ ಇಲ್ಲ. ಅವರಿಂದ 5 ರೂ. ಸಿಗುವುದೂ ಇಲ್ಲ. ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಿರುವುದರಿಂದ ಅವಕಾಶ ನೀಡಬಾರದು. ವಾಹನಗಳ ರಾತ್ರಿ ಓಡಾಟಕ್ಕೆ ಅನುಮತಿಯನ್ನೂ ನೀಡಬಾರದು ಎಂದರು.

ನಾಲ್ಕು ಹಳಿಗೇರಿಸಲು ಸಮೀಕ್ಷೆ

ಮೈಸೂರು– ಬೆಂಗಳೂರು ರೈಲ್ವೆ ಮಾರ್ಗ ಚತುಷ್ಪಥವಾಗಲಿದೆ. ತಿರುವುಗಳಿರುವ ಭಾಗದಲ್ಲಿ ಭೂಸ್ವಾಧೀನ ಮಾಡಿ, ನೇರ ಮಾರ್ಗವನ್ನು ನಿರ್ಮಿಸಲು ರೈಲ್ವೆ ಮಂಡಳಿಯ ಕಾರ್ಯಾದೇಶವಾಗಿದೆ. ಸಮೀಕ್ಷಾ ಕಾರ್ಯವು ಮೊದಲು ನಡೆಯಲಿದ್ದು, ನಂತರ ಉಳಿದ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ನನ್ನ ಅವಧಿಯಲ್ಲಿಯೇ ಜೋಡಿ ಮಾರ್ಗವಾಯಿತು. ಇದೀಗ ನಾಲ್ಕು ಮಾರ್ಗವೂ ಆಗುತ್ತಿದೆ. ಮೈಸೂರು– ಚೆನ್ನೈ ಬುಲೆಟ್ರೈಲು ಕೂಡ ಬರುವ ಪ್ರಕ್ರಿಯೆಯ ಭಾಗವಿದು ಎಂದರು.

ಕೊಡಗಿನವರಿಗೆ ಎಂಪಿ ಟಿಕೆಟ್ ಕೊಡಿ ನಾನೂ ಆಕಾಂಕ್ಷಿ, ಪ್ರತಾಪ್ ಸಿಂಹ ಸೀಟಿಗೆ ಕಣ್ಣಿಟ್ಟ ಮಾಜಿ ಸಚಿವ ಅಪ್ಪಚ್ಚು ರಂಜನ್ಕೊ 

ತ್ಯಾವರೆಕೊಪ್ಪ ಸಫಾರಿಯ ಲಯನ್‌ ಸರ್ವೇಶ ಇನ್ನಿಲ್ಲ: ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 13 ವರ್ಷದ ಸಿಂಹ ಸರ್ವೇಶ ಗುರುವಾರ ಬೆಳಗ್ಗೆ ಸಾವು ಕಂಡಿದೆ.

ಬನ್ನೇರುಘಟ್ಟದಿಂದ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಸಿಂಹ ಸರ್ವೇಶ ಕಳೆದ 4 ವರ್ಷಗಳಿಂದ ಲಯನ್ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಕಾಣಿಸಿಕೊಂಡಿತ್ತು. ವಯಸ್ಸಾಗಿದ್ದರೂ ಆರಾಮವಾಗಿದ್ದ ಸಿಂಹ ಬುಧವಾರ ವಾಂತಿ ಮಾಡಿಕೊಂಡಿತ್ತು. ಕೂಡಲೇ ಪಶು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಿಂಹ ಸಾವನ್ನಪ್ಪಿದೆ.

ಕನ್ನಡದ ಸೂಪರ್ ಡೂಪರ್ ಹಿಟ್‌ ಚಿತ್ರದಲ್ಲಿ ಪಡ್ಡೆ ಹುಡುಗ್ರ ನಿದ್ದೆ ಕದ್ದ ನಟಿ, ಬಿಕಿನಿ ಧರಿಸಿ ವಿವಾದಕ್ಕೀಡಾದ್ರು! 

ಸಿಂಹಗಳ ವಾಡಿಕೆ ವಯಸ್ಸಿನ ಗಡಿಯಲ್ಲಿದ್ದ ಸಿಂಹ ಸರ್ವೇಶ ಹಿಮೋ ಫ್ರೋಟೋಜೋನ್ ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಈ ಸೋಂಕು ಕಾಣಿಸಿಕೊಳ್ಳುವ ಪ್ರಾಣಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನಲಾಗಿದೆ. ರಕ್ತಕಣಗಳನ್ನು ನಾಶ ಮಾಡುತ್ತಾ ಬರುವ ಸೋಂಕು ಅಂತಿಮವಾಗಿ ಪ್ರಾಣಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಅನಾರೋಗ್ಯದ ಲಕ್ಷಣ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಕಾಯಿಲೆ ಉಲ್ಬಣಗೊಂಡಿರುತ್ತದೆ. ಸರ್ವೇಶ ಸಿಂಹವೂ ಪ್ರವಾಸಿಗರ ಅಚ್ಚುಮೆಚ್ಚಿನ ಆಕರ್ಷಣೀಯ ಸಿಂಹವಾಗಿತ್ತು. ವಯಸ್ಸು ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ ಎಂದು ಸಿಂಹಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

click me!