ಪಕ್ಷ ಬಿಟ್ಟವರನ್ನು ಮರಳಿ ಕರೆತರುವ ಪ್ರಯತ್ನ ಬಿಜೆಪಿಯಲ್ಲಿ ಜೋರು

By Kannadaprabha News  |  First Published Feb 5, 2024, 12:40 PM IST

ಬಿಜೆಪಿ ಕಟ್ಟಾಳು ಆಗಿರುವ ಜಗದೀಶ್‌ ಶೆಟ್ಟರ್‌ ಅವರು ಅವರ ತಂದೆಯವರ ಕಾಲದಿಂದಲೂ ಜನಸಂಘದಲ್ಲಿದ್ದವರು. ಪ್ರಭಾವಿ ನಾಯಕರು ಮೋದಿಯವರನ್ನು ಮತ್ತೆ ದೇಶದ ಪ್ರಧಾನಿ ಮಾಡಲು ಈಗ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದು, ಎಲ್ಲರ ನಿರೀಕ್ಷೆಯಂತೆ ಬಿಜೆಪಿ ಸೇರಿದ್ದು ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಸ್ಥಾಪಕ ಸದಸ್ಯ ಕೆ.ಎಸ್. ಸದಾಶಿವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತಿಪಟೂರು: ಬಿಜೆಪಿ ಕಟ್ಟಾಳು ಆಗಿರುವ ಜಗದೀಶ್‌ ಶೆಟ್ಟರ್‌ ಅವರು ಅವರ ತಂದೆಯವರ ಕಾಲದಿಂದಲೂ ಜನಸಂಘದಲ್ಲಿದ್ದವರು. ಪ್ರಭಾವಿ ನಾಯಕರು ಮೋದಿಯವರನ್ನು ಮತ್ತೆ ದೇಶದ ಪ್ರಧಾನಿ ಮಾಡಲು ಈಗ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದು, ಎಲ್ಲರ ನಿರೀಕ್ಷೆಯಂತೆ ಬಿಜೆಪಿ ಸೇರಿದ್ದು ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಸ್ಥಾಪಕ ಸದಸ್ಯ ಕೆ.ಎಸ್. ಸದಾಶಿವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲೂ ಬಿಜೆಪಿ ಪ್ರಾರಂಭವಾದಗಿನಿಂದಲೂ ಅಜಾತ ಶತ್ರು ಜನಸಂಘದ ರಾಜ್ಯಾಧ್ಯಕ್ಷರು ಆಗಿದ್ದ ಎಸ್. ಮಲ್ಲಿಕಾರ್ಜುನಯ್ಯನವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಅನೇಕ ನಾಯಕರು ನಾನಾ ಕಾರಣದಿಂದ ಹೊರ ಹೋಗಿದ್ದಾರೆ.

Tap to resize

Latest Videos

undefined

ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್‌, ಸ್ಥಳೀಯರಾದ ತಿಪಟೂರು ನಗರಸಭೆ ಅಧ್ಯಕ್ಷ ಎಂ.ಆರ್‌. ದಿನೇಶ್‌ಕುಮಾರ್‌, ಕೆ.ಎಂ.ಎಫ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್, ಎಪಿಎಂಸಿ ಮಾಜಿ ನಿರ್ದೇಶಕ ಬಿ.ಬಿ. ಸಿದ್ದಲಿಂಗಮೂರ್ತಿ ಮುಂತಾದ ನಾಯಕರು. ಯಾರೆಲ್ಲಾ ಹೊರಹೋಗಿದ್ದಾರೋ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಸದಾಶಿವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೆಟ್ಟರ್‌ಗೆ ಯಾವುದೇ  ಅನ್ಯಾಯ ಆಗಿಲ್ಲ

ಮಡಿಕೇರಿ (ಜ.26): ಜಗದೀಶ್‌ ಶೆಟ್ಟರ್ ಅವರಿಗೆ ಕಾಂಗ್ರೆಸ್‌ನಿಂದ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಅಂಬಟ್ಟಿಯ ಗಾಲ್ಫ್ ಮೈದಾನದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ ಎಂದು ಹೇಳಿ ಅವರು ಕಾಂಗ್ರೆಸ್‌ಗೆ ಬಂದರು. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿತು. ಆದರೆ ಸ್ವ ಕ್ಷೇತ್ರದಲ್ಲೇ ಅವರು ಸೋತರು. ಆದರೂ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಯಿತು. ಕಾಂಗ್ರೆಸ್ ಪಕ್ಷದಿಂದ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಆದರೆ ಅವರು ಪಕ್ಷಕ್ಕೆ ರಾಜಿನಾಮೆ ನೀಡಿರುವ ವಿಚಾರ ಗೊತ್ತಾಗಿಲ್ಲ. 

ಈಚೆಗೆ ನನ್ನ ಬಳಿ ಮಾತನಾಡಿದ್ದಾಗಲೂ ಅವರು ಬಿಜೆಪಿ ನನಗೆ ಅನ್ಯಾಯ ಮಾಡಿದೆ. ವಾಪಸ್ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದಿದ್ದರು ಎಂದು ವಿಷಾದ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರಿಗೆ ನಮ್ಮಲ್ಲಿ ಓಳ್ಳೆಯ ಸ್ಥಾನ ಮಾನ ನೀಡಿ, ಗೌರವದಿಂದ ನೋಡಿಕೊಂಡಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದ ಸಿಎಂ ಲಕ್ಷ್ಮಣ ಸವದಿ ನಮ್ಮಲೆ ಇದ್ದಾರೆ ಅವರು ನಮ್ಮ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ ಹೀಗಾಗಿ ಎಲ್ಲೂ ಹೋಗಲ್ಲ ಎಂದರು. ಹಿಂದೆ ಮೊಟ್ಟೆ ಎಸೆದವರು ಬಿಜೆಪಿಯ ದುಷ್ಟರು, ಕೊಡಗಿನ ಜನರು ಯಾರು ದುಷ್ಟರಲ್ಲ ಅವರು ಸಜ್ಜನರು ಇಂದು ನನ್ನ ಮೇಲೆ ಹೂವಿನ ಮಳೆಯನ್ನೇ ಸುರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಸದ ಡಾ.ಉಮೇಶ್‌ ಜಾಧವ್‌ಗೆ ಪ್ರೋಟೋಕಾಲ್‌ ಗೊತ್ತಿದೆಯಾ: ಸಚಿವ ಪ್ರಿಯಾಂಕ್‌ ಖರ್ಗೆ

ಅಂತರ್ಜಲಮಟ್ಟ ಹೆಚ್ಚಿಸಲು ಇಡೀ ರಾಜ್ಯದಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳ ಆಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದಲ್ಲಿ ಮುತ್ತಿನ ಮುಳುಸೋಗೆ ಬಳಿಯಿಂದ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

click me!