ಹುಣಸೂರು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಮಾಹಿತಿ ಕೊಡುವ ಬಗ್ಗೆ ಪ್ರಸ್ತಾಪಿಸಿದ ಅವರು ಕಾಂಗ್ರೆಸ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಮೈಸೂರು(ನ.30): ಹುಣಸೂರು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭ ಪ್ರಜ್ವಲ್ ಅವರು ಕಾಂಗ್ರೆಸ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಮೈಸೂರಿನ ಹುಣಸೂರು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಕಾಂಗ್ರೆಸ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನೆನ್ನೆ ಮೊನ್ನೆಯಿಂದ ಕಾಂಗ್ರೆಸ್‌ನವರು ಜನರಿಗೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಕೈ ನಾಯಕರುಗಳಿಗೆ ಈಗಾಗಲೇ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕೆ ಅವರು ಜೆಡಿಎಸ್ ಕಾಂಗ್ರೆಸ್ ಒಳಒಪ್ಪಂದ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಶೂಟೌಟ್: ಮೈಸೂರು ವಿದ್ಯಾರ್ಥಿ ಬಲಿ
ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಬೇಕೆಂದು 15 ದಿನದಿಂದ ಗೆಲ್ಲಬೇಕೆಂದು ಇಲ್ಲಿದ್ದು ಕೆಲಸ ಮಾಡ್ತಿದ್ದೇನೆ. ಸುಳ್ಳು ಸುದ್ದಿ, ಗಿಮಿಕ್ ರಾಜಕಾರಣ ಕಾಂಗ್ರೆಸ್ ಬಿಡಬೇಕು. ಫೀಲ್ಡ್‌ನಲ್ಲಿ ಬಂದು ಎದುರಿಸಿ. ಗೊಂದಲ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಜ್ವಲ್ ರೇವಣ್ಣ ಸವಾಲೆಸೆದಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಪ್ರಜ್ವಲ್ ರೇವಣ್ಣ ಸವಾಲು ಹಾಕಿದ್ದು, ಹುಣಸೂರಲ್ಲಿ ಜೆಡಿಎಸ್ ಯೂತ್ಐಕಾನ್ ಪ್ರಜ್ವಲ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಎಲ್ಲೂ ಕೂಡ ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಇಲ್ಲ. 15 ಸಾವಿರ ಮತಗಳ ಅಂತರದಲ್ಲಿ ಜೆಡಿಎಸ್ ಗೆಲ್ಲಲಿದೆ. ಜಿಟಿಡಿ ಅವರಿಗೆ ಹುಶಾರಿಲ್ಲ, ಅವರು ನಮ್ಮೊಂದಿಗಿದ್ದಾರೆ. ಜಿಡಿ ದೇವೇಗೌಡ ಫಾಲೋವರ್ಸ್ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.
ಬೈಎಲೆಕ್ಷನ್: ನಕಲಿ ಅಬಕಾರಿ ಅಧಿಕಾರಿ ಬಂಧನ
ರಾಜಕಾರಣ ಮಾಡಲು ಜಿಟಿಡಿ ಬೆಂಗಳೂರಿಗೆ ಹೋಗಿಲ್ಲ. ಜಿಟಿಡಿ ನಮ್ಮ ಜೊತೆ ಇದ್ದಾರೆ, ಅವರನ್ನು ಬಳಸಿಕೊಳ್ಳುತ್ತೇವೆ. ಹೋಗೋರು ಬರೋರು ಚುನಾವಣೆಯಲ್ಲಿ ಇರುತ್ತಾರೆ. ಮತದಾರರು ಎಲ್ಲೂ ಅಲ್ಲಾಡಿಲ್ಲ, ನಮ್ ಜೊತೆ ಇದಾರೆ, ಗೆಲ್ತೀವಿ. ಇಲ್ಲಿವರೆಗೂ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಂದೆ ಏನಾಗುತ್ತೆ ದೇವೇಗೌಡರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.
ಆಂತರಿಕ ಸರ್ವೆಯಿಂದ BJP ಫುಲ್ ಖುಷ್, ವಿಶ್ವನಾಥ್‌ಗೆಷ್ಟು ಮತ..?