ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪರವಾಗಿ ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ. ರಾಜಕೀಯವ್ನು ಖಾಸಗಿ ವಿಷಯದಂತೆ ಮಾಡಬಾರದು ಎಂದು ಅವರು ಹೇಳಿದರು.
ಚಿಕ್ಕಮಗಳೂರು (ಜ.17) : ಬಿ.ಎಸ್.ವೈ. ವಯಸ್ಸು, ಹೋರಾಟ, ಹುದ್ದೆಗೆ ಬೆಲೆ ಕೊಡಬೇಕು ಎಂದು ಮೂಡಿಗೆರೆ ಆಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ಪಕ್ಷದಲ್ಲಿ ಸಾಮಾಜಿಕ ನ್ಯಾಯ ಕಡಿಮೆಯಾಗಿದೆ ಸರಿಪಡಿಸುವ ವಿಶ್ವಾಸವಿದೆ. ಮಂತ್ರಿ ಆಗಿಲ್ಲ, ಅವಕಾಶ ಸಿಕ್ಕಿಲ್ಲ ಎನ್ನುವ ವಿಚಾರದ ಬಗ್ಗೆ ಎಲ್ಲರಿಗೂ ನೋವಿದೆ.
ಖಾಸಗಿ ವಿಷಯದ ರೀತಿ ರಾಜಕೀಯ ಮಾಡಬಾರದು ಎಂದು ಎಂ ಪಿ ಕುಮಾರಸ್ವಾಮಿ ಹೇಳಿದರು.
ಇಂದು ಬೆಳಗಾವಿಗೆ ಅಮಿತ್ ಶಾ, ಲೋಕಸಭಾ ಟಿಕೆಟ್ ಫೈಟ್‌ಗೆ ಸಿಗುತ್ತಾ ಟ್ವಿಸ್ಟ್..? .
ಸಿಎಂ ಬಿಎಸ್ ವೈ ಪರವಾಗಿ ಶಾಸಕ ಕುಮಾರಸ್ವಾಮಿ ಮಾತನಾಡಿದ್ದು, ನಮ್ಮ ಹಿರಿಯ ನಾಯಕರ ಬಗ್ಗೆ ಮಾತನಾಡಿದರೆ ಪಕ್ಷದ ಬಗ್ಗೆ ಮಾತನಾಡಿದಂತೆ ಎಂದು ಹೇಳಿದರು.
ಇನ್ನು ರಾಜ್ಯ ರಾಜಕೀಯದಲ್ಲಿ ಸಿ ಡಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು ಕೂಡಲೇ ಸಿಡಿ ವಿಚಾರ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.