ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ವೈಜ್ಞಾನಿಕವಲ್ಲ; ಅನುದಾನದ ರಹಸ್ಯ ಬಿಚ್ಚಿಟ್ಟ ಸಂಸದ ಡಾ.ಸಿ.ಎನ್. ಮಂಜುನಾಥ್

Published : Nov 25, 2026, 06:57 PM IST
North Karnataka State Dr CN Manjunath Balachandra Jarkiholi

ಸಾರಾಂಶ

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ವೈಜ್ಞಾನಿಕವಲ್ಲ ಮತ್ತು ಅನುದಾನಕ್ಕಿಂತ ಅನುಷ್ಠಾನ ಮುಖ್ಯ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಇದರ ಜೊತೆಗೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದ್ದಾರೆ.

ರಾಮನಗರ (ನ.25): ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ವೈಜ್ಞಾನಿಕವಲ್ಲ; ಉತ್ತರ ಕರ್ನಾಟಕಕ್ಕೆ ಈಗಾಗಲೇ ಹೆಚ್ಚು ಅನುದಾನ ಹೋಗುತ್ತಿದ್ದು, ಅನುದಾನಕ್ಕಿಂತ ಅನುಷ್ಠಾನ ಮುಖ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಪ್ರತ್ಯೇಕ ರಾಜ್ಯದ ಚರ್ಚೆಗೆ ಸಂಸದರ ಪ್ರತಿಕ್ರಿಯೆ:

ರಾಮನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಮಂಜುನಾಥ್, ಪ್ರತ್ಯೇಕ ರಾಜ್ಯ ಹಾಗೂ ಅನುದಾನದ ಕೊರತೆ ಕುರಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರು. "ಉತ್ತರ ಕರ್ನಾಟಕಕ್ಕೂ ಹೆಚ್ಚಾಗಿ ಅನುದಾನ ಹೋಗುತ್ತಿದೆ. ಇಲ್ಲಿ ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಕೆಲವರು ಅಧಿಕಾರದಲ್ಲಿ ಇದ್ದಾಗ ಒಂದು ಮಾತನಾಡುತ್ತಾರೆ, ಇಲ್ಲದಿದ್ದಾಗ ಒಂದು ತರಹ ಮಾತನಾಡುತ್ತಾರೆ. ಭಾರತ 'ಯೂನಿಟಿ ಇನ್ ಡೈವರ್ಸಿಟಿ' ಮೇಲೆ ನಿಂತಿದೆ; ಒಗ್ಗಟ್ಟೇ ನಮ್ಮ ಬಲ ಮತ್ತು ಶಕ್ತಿ" ಎಂದು ಹೇಳಿದರು.

ಪ್ರತ್ಯೇಕ ರಾಜ್ಯ ವೈಜ್ಞಾನಿಕ ತೀರ್ಮಾನವಲ್ಲ

"ಪ್ರತ್ಯೇಕ ರಾಜ್ಯ ಮಾಡಿದರೆ ಏನು ಅನುಕೂಲ ಆಗುತ್ತದೆ? ಇನ್ನೂ ಸಂಪನ್ಮೂಲ ಕಡಿಮೆ ಆಗುತ್ತದೆ ಅಷ್ಟೇ. ಬೆಂಗಳೂರಿನಿಂದ ರಾಜ್ಯದ ಶೇ.40ರಷ್ಟು ಆದಾಯ ಬರುತ್ತಿದೆ. ಬೆಂಗಳೂರು ಬೇರ್ಪಡಿಸಿ ಬೇರೆ ರಾಜ್ಯ ಮಾಡಿದರೆ ಇನ್ನೂ ಅನುದಾನ ಕಡಿಮೆ ಆಗುತ್ತದೆ. ಈಗ ನೀವು ಬೇಡಿಕೆ ಇಡುತ್ತಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎನ್ನುವುದು ವೈಜ್ಞಾನಿಕವಾದ ತೀರ್ಮಾನ ಅಲ್ಲ" ಎಂದು ಸ್ಪಷ್ಟಪಡಿಸಿದರು.

ಕಾಡಾನೆ ಉಪಟಳಕ್ಕೆ ಶಾಶ್ವತ ಪರಿಹಾರದ ಅಗತ್ಯ:

ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ಬಗ್ಗೆಯೂ ಮಾತನಾಡಿದ ಅವರು, "ನಮ್ಮ ಜಿಲ್ಲೆಯೂ ಸೇರಿ ರಾಜ್ಯದ ಹಲವೆಡೆ ಕಾಡಾನೆ ಉಪಟಳ ಜಾಸ್ತಿಯಾಗಿದೆ. ಇದಕ್ಕೆ ಲಾಂಗ್ ಟರ್ಮ್ ಸೊಲ್ಯೂಷನ್ ಬೇಕು. ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಇದು ಗಂಭೀರವಾದ ಸಮಸ್ಯೆಯಾಗಿದ್ದು, ಸಿಎಂ ಅಧ್ಯಕ್ಷತೆಯಲ್ಲಿ ಒಂದು ಆ್ಯಕ್ಷನ್ ಪ್ಲಾನ್ ಬೇಕು" ಎಂದು ಒತ್ತಾಯಿಸಿದರು. ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಹಾಗೂ ಸಿಬ್ಬಂದಿ ಕೊರತೆ ನೀಗಿಸಬೇಕು, ಕೇಂದ್ರದಲ್ಲಿ ಕ್ಯಾಂಪಾ (CAMPA) ಫಂಡ್ ಇದೆ; ಈ ಹಿಂದೆ ಸಂಸತ್ತಿನಲ್ಲಿ ಮೂರು ಬಾರಿ ಈ ವಿಷಯ ಪ್ರಸ್ತಾಪಿಸಿದ್ದೇನೆ, ಈ ಸಾರಿಯೂ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ವಿಜಯನಗರ ಸಾಮ್ರಾಜ್ಯದ 19ನೇ ತಲೆಮಾರಿನ ರಾಜವಂಶಸ್ಥರು ಇಂದಿಗೂ ಜೀವಂತ! ವೈಭವದ ಪರಂಪರೆ ಉಳಿಸುತ್ತಿರುವ ಕುಟುಂಬ ಎಲ್ಲಿದೆ?
ಮಂಡ್ಯದ ಬೃಹತ್ ವಾಣಿಜ್ಯ ನಗರ,ಕೈಗೆಟುಕುವ ದರದಲ್ಲಿಅಪಾರ್ಟ್‌ಮೆಂಟ್, ಶಾಸಕ ರವಿ ಗಣಿಗ ಯೋಜನೆ