ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣ ಆಧರಿಸಿ, ಅತ್ಯಾಚಾರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕಥೆ ಹೊಂದಿರುವ ನಿರ್ಭಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ ಕಲಾವಿದರು, ತಂತ್ರಜ್ಞರೇ ಹೇಚ್ಚಾಗಿರುವ ತಂಡ ಈ ಸಿನಿಮಾ ರೂಪಿಸಿದೆ.
ತುಮಕೂರು : ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣ ಆಧರಿಸಿ, ಅತ್ಯಾಚಾರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕಥೆ ಹೊಂದಿರುವ ನಿರ್ಭಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ ಕಲಾವಿದರು, ತಂತ್ರಜ್ಞರೇ ಹೇಚ್ಚಾಗಿರುವ ತಂಡ ಈ ಸಿನಿಮಾ ರೂಪಿಸಿದೆ.
ರಾಜು ಕುಣಿಗಲ್ ಅವರು ಅತ್ಯಾಚಾರ ಪ್ರಕರಣ ಆಧರಿಸಿ ಕಥೆ ಹೆಣೆದು, ಚಿತ್ರಕಥೆ ರಚಿಸಿ ನಿರ್ಭಯ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನಗರದ ಕನ್ನಡ ಭವನದಲ್ಲಿ ನಿರ್ಭಯ ಸಿನಿಮಾದ ಪೋಸ್ಟರ್ ರನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡ ಮುರಳೀಧರ ಹಾಲಪ್ಪ, ನಗರಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್ ಹಾಗೂ ಚಿತ್ರ ತಂಡದವರು ಬಿಡುಗಡೆ ಮಾಡಿದರು.
ಶಾಸಕ ಜ್ಯೋತಿ ಗಣೇಶ್, ಸಮಾಜದ ವಿಕೃತ ಮನಸುಗಳನ್ನು ಹತ್ತಿಕ್ಕುವಂತಹ ನಿರ್ಭಯ ಚಿತ್ರ ಮಾಡಿ, ತಂಡದವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಸಿನಿಮಾಗಳು, ಸಿನಿಮಾ ಕಲಾವಿದರನ್ನು ಯುವಜನ ಅನುಕರಿಸುವುದರಿಂದ ಚಿತ್ರ ತಂಡದವರು ಸಾಮಾಜಿಕ ಜವಾಬ್ದಾರಿಯಿಂದ ಚಿತ್ರಗಳನ್ನು ಮಾಡಬೇಕು, ಕಲಾವಿದರು ಕೂಡಾ ಸಮಾಜಕ್ಕೆ ಮಾದರಿಯಾಗಿ ತಮ್ಮ ವೈಯಕ್ತಿಕ ಬದುಕು ಬಾಳಬೇಕಾಗಿದೆ ಎಂದರು.
ಅತ್ಯಾಚಾರದಂತಹ ದುಷ್ಟ ಕೃತ್ಯ ತಡೆಗೆ ನಿರ್ಭಯ ಚಿತ್ರ ಕಾರಣವಾಗಲಿ, ಹೆಚ್ಚು ಜನ ಸಿನಿಮಾ ನೋಡಿ ಜಾಗೃತರಾಗಲಿ ಎಂದು ಹಾರೈಸಿದರು.
ಕಾಂಗ್ರೆಸ್ ಮುಖಂಡ ಮುರಳಿಧರ ಹಾಲಪ್ಪ, ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾದ್ದು, ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣ ದೊಡ್ಡ ಕರಾಳ ಸುದ್ಧಿಯಾಗಿ ರಾಜಕೀಯ ತಲ್ಲಣವನ್ನೇ ಮೂಡಿಸಿ ಅಂದಿನ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜೀನಾಮೆ ನೀಡುವಂತಾಯಿತು. ಅಂತಹ ಪ್ರಕರಣಗಳು ಮರುಕಳಿಸದಂತೆ ಸಮಾಜ ಜಾಗೃತವಾಗಬೇಕು, ನಿರ್ಭಯ ಸಿನಿಮಾ ಅಂತಹ ಜಾಗೃತಿ ಮೂಡಿಸಲು ಕಾರಣವಾಗಲಿ ಎಂದು ಹೇಳಿದರು.
ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು, ಯುವಜನರು ನಿರ್ಭಯ ಚಿತ್ರ ನೋಡಲಿ, ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಚಿತ್ರ ವೀಕ್ಷಣೆಗೆ ತಂಡ ಅವಕಾಶ ಮಾಡಿಕೊಡಲಿ ಎಂದರು.
ಚಿತ್ರದ ನಿರ್ದೇಕ ರಾಜು ಕುಣಿಗಲ್ ಮಾತನಾಡಿ, ಅತ್ಯಾಚಾರಗಳು ನಡೆದ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ಮುಖ್ಯವಲ್ಲ, ನಡೆಯದಂತೆ ತಡೆಯುವುದು ಮುಖ್ಯ ಎಂದರು.
ಕಲಾವಿದ ಕೃಷ್ಣಮೂರ್ತಿ ಅವರ ಪುತ್ರ ಅರ್ಜುನ್ ಕೃಷ್ಣ ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಶ್ರಾವ್ಯ ರಾವ್ ಮುಖ್ಯ ಪಾತ್ರದಲ್ಲಿದ್ದು, ಹರೀಶ್, ಕುಸುಮಾ, ಶಿಲ್ಪ, ಸಿಂಚನಾ, ಮಾದೇಶ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಚಿತ್ರ ನಟರಾದ ದೀಕ್ಷಿತ್ ಶೆಟ್ಟಿ, ಟೈಗರ್ ನಾಗ್, ಮುಖಂಡರಾದ ಧನಿಯಾಕುಮಾರ್, ನೇತಾಜಿ ಶ್ರೀಧರ್,ಸ್ಯಾಂಡಲ್‌ವುಡ್ ಫಿಲಂ ಇನ್ಸಿ÷್ಟಟ್ಯೂಟ್‌ನ ಇನ್‌ಸ್ಟಿಟ್ಯೂಟ್ ನ ಆನಂದ್, ಉಪ್ಪಾರಹಳ್ಳಿ ಕುಮಾರ್, ಲಕ್ಷ್ಮೀನಾರಾಯಣ, ಎಂ.ವಿ.ನಾಗಣ್ಣ ಸೇರಿದಂತೆ ನಗರದ ವಿವಿಧ ಕಲಾವಿದರು ಭಾಗವಹಿಸಿದ್ದರು.