ಕೊಬ್ಬರಿ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ತೆಂಗು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕಿದ್ದು, ಕೂಡಲೆ ನಫೆಡ್ ಕೇಂದ್ರ ತೆರೆದು ಬೆಂಬಲ ಬೆಲೆ 11750 ರು. ಹಾಗೂ ಪ್ರೋತ್ಸಾಹ ಧನ 1250 ರು.ನೀಡಿ ಕೊಬ್ಬರಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ತಿಪಟೂರು: ಕೊಬ್ಬರಿ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ತೆಂಗು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕಿದ್ದು, ಕೂಡಲೆ ನಫೆಡ್ ಕೇಂದ್ರ ತೆರೆದು ಬೆಂಬಲ ಬೆಲೆ 11750 ರು. ಹಾಗೂ ಪ್ರೋತ್ಸಾಹ ಧನ 1250 ರು.ನೀಡಿ ಕೊಬ್ಬರಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿ, ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕೊಬ್ಬರಿ ಬೆಲೆ ಕುಸಿತದಿಂದ ಕಲ್ಪತರು ನಾಡಿನ ರೈತರು ಆತಂಕದಲ್ಲಿ ಜೀವನ ನಡೆಸುವಂತಾಗಿದ್ದು ರೈತರ ಸಮ್ಮುಖದಲ್ಲಿ ಹಲವಾರು ಹೋರಾಟ ಮಾಡಿದರೂ ಪ್ರಯೋಜವಾಗುತ್ತಿಲ್ಲ. ಸರ್ಕಾರ ಕೊಬ್ಬರಿಗೆ ಘೋಷಿಸಿದ1250 ರು. ಪ್ರೋತ್ಸಾಹ ಧನ ಸಿಕ್ಕಿಲ್ಲ. ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ 15 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಇದರ ನಡುವೆ ಸರ್ಕಾರ ಕೊಬ್ಬರಿ ನಫೆಡ್ ಕೇಂದ್ರವನ್ನು ಏಕಾಏಕಿ ಸ್ಥಗಿತಗೊಳಿಸಿದೆ. ಕೊಬ್ಬರಿಗೆ ಬೆಳೆಗಾರರು ಮತ್ತಷ್ಟು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುವಂತಾಗಿದೆ. ಸರ್ಕಾರ ಕೂಡಲೇ ನಫೆಡ್ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಗೆ ಕೊಬ್ಬರಿ ಕೊಂಡುಕೊಳ್ಳಬೇಕು. ಕೊಬ್ಬರಿ ಸರ್ವ ಋತು ಬೆಳೆಯಾಗಿರುವುದರಿಂದ ನಫೆಡ್ ಕೇಂದ್ರವನ್ನು ಸದಾ ತೆರೆಯಬೇಕು. ಮನವಿ ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವಾರಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಕೊಟ್ಟ ಮಾತನ್ನು ಈಡೇರಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.
undefined
ಸಂಕಷ್ಟದಲ್ಲಿ ತೆಂಗು ಬೆಳೆಗಾರ
ತಿಪಟೂರು : ಕಲ್ಪತರು ನಾಡಿಗೆ ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಗಳು ಉತ್ತಮವಾಗಿ ಬಂದ ಪರಿಣಾಮ ಅಂರ್ತಜಲಕ್ಕೆ ಜೀವಕಳೆ ಬಂದಿದ್ದರಿಂದ ಕಳೆದ ಬೇಸಿಗೆಯಲ್ಲಿ ತೆಂಗಿಗೆ ಹೆಚ್ಚಿನ ತೊಂದರೆ ಆಗಲಿಲ್ಲ. ಆದರೆ ಈ ವರ್ಷ ಮುಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟಿರುವುದರಿಂದ ತೆಂಗು ಬೆಳೆಗಾರರು ನಿತ್ಯ ಮೋಡ ಮುಸುಕಿದ ವಾತಾವರಣದತ್ತ ಹತಾಶಾ ಭಾವನೆಯಿಂದ ನೋಡುತ್ತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ವಿನಾಶದತ್ತ ತೆಂಗು: ಕಳೆದ ಹಲವಾರು ವರ್ಷಗಳಿಂದ ಮಳೆ ಇಲ್ಲದೆ ನಾಡು ಭೀಕರ ಬರದ ಸುಳಿಗೆ ಸಿಲುಕಿದ್ದರಿಂದÜ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ವಿನಾಶದಂಚಿಗೆ ತಲುಪಿತ್ತು. ಆದರೆ ಕಳೆದ ವರ್ಷ ಉತ್ತಮ ಮಳೆ ಬಂದ ಪರಿಣಾಮ ಈವರೆಗೂ ತುಸು ಹಸಿರಾಗಿದ್ದ ತೆಂಗು, ಮಳೆ ಇಲ್ಲದ್ದರಿಂದ ಮತ್ತೆ ಸೊರಗುತ್ತಿದೆ. ಇತ್ತೀಚೆಗೆ ತೆಂಗಿಗೆ ನುಸಿಪೀಡೆ, ಗರಿರೋಗ, ರಸ ಸೋರುವ ರೋಗ, ಬೆಂಕಿ , ಬೇರು ಸೊರಗು ರೋಗ, ಹರಳು ಉದುರುವುದು, ಹೊಂಬಾಳೆ ಸೊರಗುವುದು ಸೇರಿದಂತೆ ಸುಳಿ ಕೊರಕ ರೋಗಬಾಧೆಗಳು ಹತ್ತು ಹಲವಾರು ವರ್ಷಗಳ ಕಾಲದಿಂದ ಕಷ್ಟಪಟ್ಟು ಬೆಳೆಸಿರುವ ತೆಂಗಿನ ಮರಗಳಿಗೆ ಕಂಟಕಗವಾಗಿ ಪರಿಣಮಿಸಿರುವುದರಿಂದ ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ.
ಬೆಳೆಯೂ ಇಲ್ಲ, ಬೆಲೆಯೂ ಇಲ್ಲ: ಕಳೆದ ವರ್ಷ ಹೆಚ್ಚು ಮಳೆ ಸುರಿದ ಪರಿಣಾಮ ತೋಟಗಳಲ್ಲಿ ಹಲವಾರು ತಿಂಗಳುಗಳ ಕಾಲ ನೀರು ನಿಂತಿದ್ದರಿಂದ ಬೇರು ಸೊರಗು ರೋಗ ವಿಪರೀತವಾದ ಕಾರಣ ಸಾಕಷ್ಟುಮರಗಳು ಒಣಗಿ ಹೋಗುತ್ತಿದ್ದರೆ, ಉಳಿದ ಮರಗಳಲ್ಲಿ ತೆಂಗಿನ ಹರಳುಗಳು ಉದುರಿ ಇಳುವರಿ ಮೇಲೆ ತೀವ್ರ ಹೊಡೆತ ಬೀಳುತ್ತಿದೆ.
ನಿರಂತರ ಕುಸಿತ ಕಾಣುತ್ತಿರುವ ಕೊಬ್ಬರಿ ಬೆಲೆ: ನಾನಾ ರೋಗಬಾಧೆಗಳ ಕಾರಣಗಳಿಂದ ತೆಂಗಿನ ಕಾಯಿಗಳ ಇಳುವರಿ ಒಂದು ಕಡೆ ಕುಸಿತ ಕಂಡರೆ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ವರ್ಷದಿಂದಲೂ ನಿರಂತರವಾಗಿ ಕುಸಿಯುತ್ತಿರುವುದರಿಂದ ಕಲ್ಪತರು ನಾಡಿನ ತೆಂಗು ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಹೀಗೆ ಇಳುವರಿ ಹಾಗೂ ಬೆಲೆಯಲ್ಲಿ ತೀವ್ರ ನಷ್ಟಕಾಣುತ್ತಿದ್ದರೂ ಬೆಳೆಗಾರರು ಭವಿಷ್ಯದಲ್ಲಾದರೂ ತೆಂಗು ಲಾಭ ನೀಡಬಹುದೆಂಬ ಆಸೆಯಿಂದ ತೆಂಗು ಉಳಿಸಿಕೊಳ್ಳಲು ನಿತ್ಯ ಹರಸಾಹಸಕ್ಕಿಳಿಯುವಂತಾಗಿದೆ. ಮಳೆ ಇಲ್ಲದ್ದರಿಂದ ಸಾವಿರಾರು ಅಡಿ ಆಳದ ಕೊಳವೆ ಬಾವಿಗಳಿಂದ ನೀರುಣಿಸಲು ಲಕ್ಷಾಂತರ ರುಪಾಯಿ ಸಾಲ ಮಾಡಿ ಪಂಪು-ಮೋಟಾರ್ ಅಳವಡಿಸುತ್ತಿದ್ದಾರೆ. ಸಾಕಷ್ಟುಬೆಳೆಗಾರರು ಡ್ರಿಪ್ ಮೂಲಕ ನೀರು ನೀಡಲು ಬಂಡವಾಳ ಹಾಕುವಂತಾಗಿದೆ. ಆದರೆ ತೆಂಗು ಬೆಳೆಗಾರರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೆಂಗು ಉಳಿಸಿಕೊಳ್ಳಲು ಯಾವುದೇ ನೆರವಿಗೂ ಬಾರದಿರುವುದು ಇಲ್ಲಿನ ತೆಂಗು ಬೆಳೆಗಾರರ ದುರಂತಕ್ಕೆ ಸಾಕ್ಷಿಯಾಗಿದೆ.
ಪಶುಸಂಗೋಪನೆಗೂ ಕಂಟಕ: ಕೊಬ್ಬರಿ ಬೆಲೆ ಹಾಗೂ ಇಳುವರಿಯ ಕುಸಿತದಿಂದ ನಷ್ಟಅನುಭವಿಸುತ್ತಿರುವ ರೈತರು ಇತ್ತೀಚೆಗೆ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪಶುಸಂಗೋಪನೆಯನ್ನೇ ಪೂರ್ಣಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ಆದರೆ ಮಳೆರಾಯ ಸಂಪೂರ್ಣ ಮುನಿಸಿಕೊಂಡಿರುವುದರಿಂದ ಬರಗಾಲದ ತೀವ್ರತೆ ಹೆಚ್ಚುತ್ತಿದ್ದು ರಾಗಿ ಬೆಳೆಯೂ ಕೈಕೊಟ್ಟಿರುವುದರಿಂದ ರಾಸುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದ್ದು ಕೂಡಲೆ ಸರ್ಕಾರ ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.