Kannada Sahitya Sammelana: ಗೋಕಾಕ್ ಚಳುವಳಿ ಮೀರಿಸುವ ಮತ್ತೊಂದು ಚಳುವಳಿ ಅಗತ್ಯವಿದೆ: ಸಾಹಿತಿ ದೊಡ್ಡರಂಗೇಗೌಡ

By Sathish Kumar KH  |  First Published Jan 7, 2023, 9:09 PM IST

ಕನ್ನಡ ಭಾಷೆ ಉಳಿವಿಗಾಗಿ ಗೋಕಾಕ್ ಚಳುವಳಿ ನಂತರ ಕನ್ನಡದ ನೆಲದಲ್ಲಿ ಅಂತಹ ಮಾದರಿ ಚಳುವಳಿ ನಡೆದಿಲ್ಲ. ಈಗ ಮತ್ತೊಮ್ಮೆ ಕನ್ನಡ ನೆಲದಲ್ಲಿ ಗೋಕಾಕ್ ಚಳುವಳಿಯನ್ನು ಮೀರಿಸುವಂತೆ ದೊಡ್ಡ ಮಟ್ಟದ ಕನ್ನಡ ಚಳುವಳಿ ಆಗಬೇಕು‌.


ವರದಿ : ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಹಾವೇರಿ (ಜ.07): ಕನ್ನಡ ಭಾಷೆ ಉಳಿವಿಗಾಗಿ ಗೋಕಾಕ್ ಚಳುವಳಿ ನಂತರ ಕನ್ನಡದ ನೆಲದಲ್ಲಿ ಅಂತಹ ಮಾದರಿ ಚಳುವಳಿ ನಡೆದಿಲ್ಲ. ಈಗ ಮತ್ತೊಮ್ಮೆ ಕನ್ನಡ ನೆಲದಲ್ಲಿ ಗೋಕಾಕ್ ಚಳುವಳಿಯನ್ನು ಮೀರಿಸುವಂತೆ ದೊಡ್ಡ ಮಟ್ಟದ ಕನ್ನಡ ಚಳುವಳಿ ಆಗಬೇಕು‌ ಎಂದು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

Tap to resize

Latest Videos

undefined

ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರ ಜೊತೆ ನಡೆದ ಮಾತು ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ‌ ವೈಯಕ್ತಿಕ ಬದುಕು ಜೀವನ‌ ಸಾಹಿತ್ಯ ಪ್ರೀತಿ, ಸಿನಿಮಾ ಸಾಹಿತ್ಯ , ಅನುವಾದ ಪ್ರಸ್ತುತ ರಾಜಕಾರಣ, ಕನ್ನಡಿಗರ ಹೋರಾಟ‌ ಹೀಗೆ‌ ಹಲವು ಪ್ರಶ್ನೆಗಳಿಗೆ  ಬಿಚ್ಚು ಮನಸ್ಸಿನಿಂದ ಉತ್ತರಿಸಿದರು. ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡಿರುವ ದೊಡ್ಡರಂಗೇಗೌಡರಿಗೆ ಸಿನಿಮಾ ಗೀತೆ ಗಳಿಗು ಸಾಹಿತ್ಯದ ಕವಿತೆಗೆ ವ್ಯತ್ಯಾಸದ ಬಗ್ಗೆ ಮಾತನಾಡಿ ನಿರ್ದೇಶಕ ನಿರ್ಮಾಪಕ ಹೇಳಿದ ಸನ್ನಿವೇಶಗಳಿಗೆನುಗುಣವಾಗಿ ಬರೆದಿದ್ದು. ಸಂಗೀತ ನಿರ್ದೇಶಕರೊಂದಿಗೆ ಚರ್ಚಿಸಿ ಗೀತೆ ರಚನೆ ಯಾಗಿದ್ದು. ಸಿನಿಮಾ ಸಾಹಿತ್ಯ ಗೀತೆಗು ವ್ಯತ್ಯಾಸ ಇದೆ. ಭಾವನಾತ್ಮಕ ಅಲೆಗಳು ಸಮುದ್ರದಲ್ಲಿ ಬಂದು ಹೋಗಿ ಸ್ವಂತಿಕೆ ಪ್ರದರ್ಶನ ಮಾಡಿದ್ದೇನೆ ಎಂದರು.

ಪತ್ನಿಯೇ ಸಾಹಿತ್ಯದ ಶಕ್ತಿ: ತುಮಕೂರು ಜಿಲ್ಲೆಯ ಉಪಭಾಷೆ ದೇಶಿಯ ಭಾಷೆಯನ್ನು ನನ್ನ ಸಾಹಿತ್ಯದಲ್ಲಿ ಬಳಸಿದ್ದೇನೆ.ಹಳ್ಳಿ ಹುಡುಗ ಪಟ್ಟಣಕ್ಕೆ ಬಂದು ಪಟ್ಟಣದ ಭಾಷೆ ಕಲಿತರು ನನ್ನ ಮನಸ್ಸೆಲ್ಲಾ ಹಳ್ಳಿ ಸೊಗಡೆಲ್ಲಿದೆ. ಹಳ್ಳಿಯ ಅರಳಿ ಮರ, ಮಾವಿನ ಮರ, ತೇರು ರಂಗನಾಥನ ತೇರಿನ ಮುಂದೆ ರಾತ್ರಿಯೆಲ್ಲಾ ಹಾಡುತಾ ತಮಟೆ ನುಡಿಸಿದ ಭಾವನೆ‌ ನನ್ನ ಸಾಹಿತ್ಯದಲ್ಲಿದೆ. ದೊಡ್ಡರಂಗೇಗೌಡರ ಸಾಧನೆಯಲ್ಲಿ ಪತ್ನಿ ಎಷ್ಟರ ಮಟ್ಟಿಗೆ ಕಾರಣರಾಗಿದ್ದಾರೆ.ಪ್ರತಿಯೊಬ್ಬ ಯಶಸ್ಸಿನ ಹಿಂದೆ ಶ್ರೀಮತಿ ರಾಜೇಶ್ವರ ಗೌಡ ಒಬ್ಬ ಗೆಳತಿ ಮಾರ್ಗದರ್ಶಿ ನನ್ನ ಜೀವನ ಸಂಗಾತಿಗೆ ಋಣಿಯಾಗಿದ್ದೇನೆ ನನ್ನ ಮಕ್ಕಳ ಚೆನ್ನಾಗಿ ವಿಧ್ಯಾಭ್ಯಾಸ ಮಾಡಲು ನನ್ನ ಸಾಹಿತ್ಯದ ಶಕ್ತಿ ನನ್ನ ಪತ್ನಿ ಎಂದರು.

Kannada sahitya sammelana: ಊಟೋಪಚಾರಕ್ಕೆ ಸಾಹಿತ್ಯಾಭಿಮಾನಿಗಳು ಖುಷ್‌; Mobile Network ಇಲ್ಲದೆ ಪರದಾಟ!

ಬ್ರಿಟಿಷ್ ಅಮೇರಿಕಾದವರಿಗೆ ಕನ್ನಡದ ಕಡೆ ಗಮನ: ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಪಸರಿಸುತ್ತದೆ. ಅದರ‌ ರೂಪು ರೇಷ‌‌ ಬದಲಾಗುತ್ತದೆ ಎಂಬ ಪ್ರಶ್ನೆಗೆ ಸಾಹಿತ್ಯ ನಿಂತ ನೀರಾಗಬಾರದು ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಅಮೇರಿಕಾದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿಸಿದ್ದಾರೆ. ವಿದೇಶದಲ್ಲಿ ಅದು ನಡೆಯುತ್ತಿದೆ. ವಚನಾಕಾರರ ವಚನಗಳನ್ನು ಇಂಗ್ಲಿಷ್ ಗೆ ತರ್ಜುಮೆ ಆಗಿದೆ ಬ್ರಿಟಿಷ್ ಅಮೇರಿಕಾದವರು ನಮ್ಮ ಕನ್ನಡದ ಕಡೆ ನೋಡುತ್ತಿದ್ದಾರೆ. ಪಂಪನ ಒಂಭತ್ತನೆ ಶತಮಾನದ  ಕಾವ್ಯವನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿದ್ದಾರೆ. ನಾನು ವಿಶ್ವಮುಖಿ ಅನ್ನೋದನ್ನು ಅದೇ ಕಾರಣಕ್ಕೆ ಬಳಿಸಿದ ಔಚಿತ್ಯ ತಿಳಿಸಿದರು. 

ಟ್ಯೂನ್‌ ಕದಿಯಬಾರದು: ಗೀತೆಯನ್ನು ಬರೆಯುವಾಗ ಚಿತ್ರದ ದೃಶ್ಯವೋ ಅಥವಾ ಸಂಯೋಜನೆಯೋ ಆಧರಿಸಿ  ಸಾಹಿತ್ಯ ರಚನೆ ಮಾಡುತ್ತಿರೋ? ಎಂಬ ಪ್ರಶ್ನೆಗೆ ಯಾವುದೋ ಟ್ಯೂನ್ ಅನ್ನು ಕದ್ದು ಕನ್ನಡಕ್ಕೆ ಸಂಯೋಜಿಸಬಾರದು. ನಿಮ್ಮ ಸಂಯೋಜನೆ ಪ್ರಯತ್ನ ನನ್ನ ಬರವಣಿಗೆ ಎರಡು ಸೇರಿ ಸೃಜನಶೀಲತೆ ಬಂತು - ಅದಕ್ಕೆ ನಾನು ನಿಮ್ಮನ್ನು ಅಭಿನಂಧಿಸುತ್ತೇನೆ ಎಂದ ಪ್ರಶ್ನೆಕಾರರನ್ನು ಅಭಿನಂದಿಸಿದರು.

ಅನುವಾದ ಸಾಹಿತ್ಯ: ಗೀತೆ ವೈಭವದಲ್ಲಿ 47 ಕವಿತೆಗಳನ್ನು ಹಿಂದಿಗೆ ಅನುವಾದ ಮಾಡಲಾಗಿತ್ತು. ಮಲೆಯಾಳಿ ಭಾಷೆಗೆ ನನ್ನ ಕವಿತೆಗಳು ಅನುವಾದ ಆಗಿದೆ. ಈಜಿಪ್ಟ್‌ ಪ್ರವಾಸಹೋಗಿ 16 ಲೇಖನಗಳನ್ನು ಬರೆದೆ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಈಜಿಪ್ಟ್ ಕುರಿತ ಪುಸ್ತಕ 1 ಸಾವಿರ ಸೇಲ್ ಆಯಿತು.  ಅಬ್ದುಲ್ ಕಲಾಂ ಅವರಿಗೆ ನನ್ನ ಕೃತಿ ಅರ್ಪಣೆಯಾಗಿದೆ. ಜ್ವಾಲಾಮುಖಿ ಕೃತಿಯಲ್ಲಿ ಇಂಗ್ಲಿಷ್ ಗೆ ಅನುವಾದ ಆಯಿತು ಅದು ಇಂಗ್ಲೆಂಡ್ ನಲ್ಲಿ ಮೂರು ಸಾವಿರ ಜನರ  ಸಮ್ಮುಖದಲ್ಲಿ ಬಿಡುಗಡೆ ಆಯಿತು. 47 ಕತೆಗಳ  ಕೃತಿ ಇಂಗ್ಲಿಷ್ ಗೆ ಅನುವಾದ ಆಗಿದೆ. ನಾನು ಅನುವಾದ ಸಾಹಿತ್ಯಕ್ಕೆ ನನ್ನ ಸ್ವಲ್ಪ ಕೊಡುಗೆ ಇದೆ‌ ಎಂದರು.

Kannada Sahitya Sammelana: ಸರ್ಕಾರಗಳಿಂದ ಕನ್ನಡದ ಬಗ್ಗೆ ನಿರ್ಲಕ್ಷ್ಯ: ದೊಡ್ಡರಂಗೇಗೌಡ

ಸಂಸದಿಯ ವ್ಯವಸ್ಥೆ ಮೌಲ್ಯ ಕುಸಿಯುತ್ತಿದೆ: ಪ್ರಜಾಪ್ರಭುತ್ವ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿದೆ .ದುಡ್ಡಿರುವವರು ಗೆದ್ದು ಬರುತ್ತಾರೆ. ವಿಧಾನ ಪರಿಷತ್ ನಲ್ಲಿ ನಾನು ಗಮನಿಸಿದ ದೌರ್ಬಲ್ಯಗಳು ಹಣದಿಂದ‌ ಅಧಿಕಾರವನ್ನು ಕೊಂಡು ಕೊಂಡ ವ್ಯಕ್ತಿಗಳು ವಿಧಾನ ಸಭೆ ಪ್ರವೇಶ ಮಾಡುತ್ತಿದ್ದಾರೆ. ವಿಧಾನ ಮಂಡಲದ ಭಾಷೆ ಕೇಳಿದ್ರೆ ಮೈಯೆಲ್ಲಾ ಉರಿದುಹೋಗುತ್ತದೆ ಪಂಚೆಯನ್ನು ಮೇಲೆತ್ತಿ ತೊಡೆ ತಟ್ಟುವಾಗ ಪ್ರಜಾಪ್ರಭುತ್ವ ಮೌಲ್ಯ ಕುಸಿದಿರುವುದಕ್ಕೆ ಸಾಕ್ಷಿ.ಒಂದು ಅರ್ಜಿ ಹಾಕಿದ್ರೆ ಅದು ಕೆಲಸ ಆಗಿ ಬರೋದರೊಳಗೆ ಅವರು ಹಣ್ಣಾಗಿ ಹೋಗಿರುತ್ತಾರೆ ಎಂದರು.

ಮೇಷ್ಟ್ರು ಆಗಿದ್ದಕ್ಕೆ ಖುಷಿಯಿದೆ: ಭ್ರಷ್ಟತೆ ಪರಮಾಧಿಕಾರದಲ್ಲಿ ಪ್ರಮಾಣಿಕತೆ ಹುಡುಕಬೇಕಾಗಿದೆ. ಪ್ರಜೆಗಳ ಕಷ್ಟ , ಸ್ವಾರ್ಥದ ಲಾಲಸೆ ಹೆಚ್ಚಿ ಅವರ ಕೆಲಸ ಅವರೇ ಮಾಡಿಕೊಳ್ಳುತ್ತಿದ್ದಾರೆ. ಯಾರು ವ್ಯವಸ್ಥೆಯ‌ ಜೊತೆ‌ ಹೊಂದಾಣಿಕೆ ಮಾಡಿಕೊಳ್ಳುವವರು ಅವರು ಎಲ್ಲಾವನ್ನು ಪಡೆದುಕೊಳ್ಳುತ್ತಾರೆ.ಇದು‌ ವಿಶ್ವವನ್ನು ಆವರಿಸಿಕೊಂಡಿರುವ ಅರ್ಬುದಾ ರೋಗ. ಕ್ರಾಂತಿ ಆಗಬೇಕು ಅದು ಅಸಾಧ್ಯ ವ್ಯಕ್ತಿಗಳಲ್ಲಿ ಅರಿವು ಮಾಡಿದ್ರೆ ಬದಲಾವಣೆ ಆಗಬಹುದು. ಕವಿ ಬರಹಗಾರ ಏನನ್ನು ಒಳಗೆ ಇಟ್ಟುಕೊಳ್ಳಲ್ಲ ಅದನ್ನು ಯಾವುದಾದ್ರು ರೂಪದಲ್ಲಿ ಹೊರಗೆ ಹಾಕುತ್ತಾನೆ‌. ಅದರಿಂದ ಮನಸ್ಸು ಪ್ರಪುಲ್ಲವಾಗುತ್ತದೆ. ಆರೋಗ್ಯ ವೃದ್ಧಿಸುತ್ತದೆ. ನಾನು ಏನು ಆಗಬೇಕು ಅದನ್ನೇ ಆಗಿದ್ದೇನೆ ನನ್ನ ತಂದೆಗೆ ವಿಷಾಧ ಇರಬಹುದು, ಆದರೆ ಮೇಸ್ಟ್ರು ಆಗಿದ್ದಕ್ಕೆ ಖುಷಿ ಆಗಿದೆ ಎಂದು ಸಮ್ಮೇಳನಾಧ್ಯಕ್ಷ ದೊಡ್ಡ ರಂಗೇಗೌಡ ಹೇಳಿದರು.

click me!