ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್
ವೆಬ್ಸೈಟ್ ನಲ್ಲಿಯೂ ಮತದಾರರ ಅಂತಿಮ ಪಟ್ಟಿ ಲಭ್ಯ
ಜಿಲ್ಲೆಯಲ್ಲಿ 1,222 ಮತಗಟ್ಟೆಗಳಿದ್ದು ಒಟ್ಟು 9,45,151 ಮತದಾರರಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.07): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಷ್ಕರಣೆ ಕಾರ್ಯ ಪೂರ್ಣಗೊಂಡು ಮತದಾರರ ಅಂತಿಮ ಪಟ್ಟಿ ಪ್ರಕಟಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಇಂದು ವಿವಿಧ ರಾಜಕೀಯ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಮತದಾರರ ಪಟ್ಟಿ ಪರಷ್ಕರಣೆ ಕಾರ್ಯ 2023 ರ ಸಂಬಂಧ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡುವಂತೆ ತಿಳಿಸಿದರು. ಜಿಲ್ಲೆಯ ಐದು ವಿದಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಅದರ ಒಂದು ಪ್ರತಿಯನ್ನು ನೋಂದಾಯಿತ ರಾಜಕೀಯ ಪಕ್ಷಗಳ ಮುಖಂಡರಿಗೆ ನೀಡಿ ಅಂತಿಮ ಮತದಾರರರ ಪಟ್ಟಿಯನ್ನು ಎ.ಸಿ, ತಹಸೀಲ್ದಾರ್ ಕಛೇರಿ ಹಾಗೂ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದ್ದು ಪರಿಶೀಲಿಸಬಹುದಾಗಿ ತಿಳಿಸಿದರು.
Chikkamagaluru: ಕಾಫಿನಾಡಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮುಕ್ತಾಯ
ವೆಬ್‌ಸೈಟ್‌ನಲ್ಲೂ ಪಟ್ಟಿ ಲಭ್ಯ: ತಹಸೀಲ್ದಾರ್ ಕಚೇರಿಗಳು ಮಾತ್ರವಲ್ಲದೇ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಚುನಾವಣೆ ಇಲಾಖೆಯ ವೆಬ್ಸೈಟ್ ನಲ್ಲಿಯೂ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆನ್‌ಲೈನ್‌ನಲ್ಲಿ ಪಟ್ಟಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಜೊತೆಗೆ, ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸುವ ಬಗ್ಗೆ ಖಚಿತ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಮುಖಂಡರಿಗೆ ತಿಳಿಸಿದರು.
ಮಹಿಳಾ ಮತದಾರರೇ ಹೆಚ್ಚು: ಅಂತಿಮ ಪಟ್ಟಿಯಂತೆ ಶೃಂಗೇರಿಯಲ್ಲಿ 256 ಮತಗಟ್ಟೆಗಳಿದ್ದು 81,842 ಪುರುಷರು, 84,725 ಮಹಿಳೆಯರು ಹಾಗೂ ಇತರೆ 4 ಮತದಾರರಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆಗಳಿದ್ದು 82,540 ಪುರುಷರು, 85,8114 ಮಹಿಳೆಯರು, ಇತರೆ 5 ಮತದಾರರು ಇದ್ದಾರೆ. ಚಿಕ್ಕಮಗಳೂರು 257 ಮತಗಟ್ಟೆಗಳಿದ್ದು 1,08,845 ಪುರುಷರು 1,10,716 ಮಹಿಳೆಯರು, ಇತರೆ 20 ಜನರಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 228 ಮತಗಟ್ಟ್ಟೆ 94,064 ಪುರುಷರು 94,724 ಮಹಿಳೆಯರು, ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 250 ಮತಗಟ್ಟೆಗಳಿದ್ದು 1,01,308 ಪುರುಷರು,1,00,437 ಮಹಿಳೆಯರು ಹಾಗೂ ಇತರೆ 8 ಮತದಾರರಿದ್ದಾರೆ.
ಜಿಲ್ಲೆಯಲ್ಲಿ 1,222 ಮತಗಟ್ಟೆ : ಒಟ್ಟಾರೆ ಜಿಲ್ಲೆಯಲ್ಲಿ 1,222 ಮತಗಟ್ಟೆಗಳಿದ್ದು ಒಟ್ಟು 9,45,151 ಮತದಾರರಿದ್ದಾರೆ. ಈ ಪೈಕಿ 18 ರಿಂದ 19 ರ ವಯೋಮಾನದ 10, 268 ಯುವ ಮತದಾರರು, ಅಂಗವಿಕಲ ಮತದಾರರು 8,328 ಹಾಗೂ ಜಿಲ್ಲೆಯ ಸೇವಾ ಮತದಾರರು 498 (ಸೈನಿಕರು, ಹೊರ ದೇಶ, ರಾಜ್ಯಗಳಲ್ಲಿ ಸರ್ಕಾರಿ ಸೇವೆಯಲ್ಲಿ ಇರುವ ಜಿಲ್ಲೆಯ ನಾಗರೀಕರು ) ಇದ್ದಾರೆ. 2023ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ 1,222ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಎಲ್ಲಾ ಬೂತ್ಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಅಂಗವಿಕಲರಿಗೆ ರ್ಯಾಂಪ್, ರಸ್ತೆ ಸಂಪರ್ಕ ಇರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಎಲ್ಲಾ ತಹಸೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ರಾಜಕೀಯ ಪಕ್ಷದ ಮುಖಂಡರಿಗೆ ತಿಳಿಸಿದರು.
Chikkamagaluru: ಕಣ್ಮನ ಸೆಳೆಯುವ ಅಯ್ಯಪ್ಪ ದೇವಾಲಯ, ವರ್ಷಪೂರ್ತಿ ಅಯ್ಯಪ್ಪನ ದರ್ಶನ
ಬಿಎಲ್‌ಒ ನೇಮಕ್ಕಾಗಿ ಮನವಿ: ಅಲ್ಲದೆ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಪ್ರತೀ ಮತಗಟ್ಟೆಗೆ ಒಬ್ಬರಂತೆ ಬಿ.ಎಲ್.ಓ ಗಳನ್ನು ನೇಮಕ ಮಾಡುವಂತೆ ಹೇಳಿದ ಅವರು ಹಿಂದಿನಿಂದಲೂ ನಡೆಸಿರುವ ರಾಜಕೀಯ ಪಕ್ಷಗಳ ಮುಖಂಡರ ಎಲ್ಲಾ ಸಭೆಗಳಲ್ಲಿ ಬಿ.ಎಲ್.ಓ ಗಳನ್ನು ನೇಮಿಸುವಂತೆ ತಿಳಿಸುತ್ತಾ ಬಂದಿದ್ದರು. ಈವರೆಗೂ 1,168 ಮತಗಳಿಗೆ ಭಾರತೀಯ ಜನತಾ ಪಕ್ಷದಿಂದ ಹಾಗೂ 248 ಮತಗಟ್ಟೆಗಳನ್ನು ಕಾಂಗ್ರೇಸ್ ಪಕ್ಷದಿಂದ ಬಿ.ಎಲ್.ಎ ಗಳನ್ನು ನೇಮಕ ಮಾಡಲಾಗಿದೆ. ಉಳಿದ ಮತಗಟ್ಟೆಗಳಿಗೂ ಈವರೆಗೂ ನೇಮಕ ಮಾಡಿರುವುದಿಲ್ಲ. ಎಲ್ಲಾ ರಾಜಕೀಯ ಪಕ್ಷದವರೂ ಸಹ ಎಲ್ಲಾ ಮತಗಟ್ಟೆಗಳಿಗೂ ಬಿ.ಎಲ್.ಓ ಗಳನ್ನು ನೇಮಿಸುವಂತೆ ತಿಳಿಸಿದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.