
ಮುದಗಲ್(ಜು.06): ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆ 108 ಆಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಸಮಯದಲ್ಲಿ ಹೆರಿಗೆಯಾಗಿದ್ದು ತಾಯಿ-ಮಗು ಕ್ಷೇಮವಾಗಿದ್ದಾರೆ.
ಪಟ್ಟಣ ಸಮೀಪದ ನಂದವಾಡಗಿ ಗ್ರಾಮದ ನಿವಾಸಿ ದುರ್ಗಮ್ಮಗಳಿಗೆ ಸೋಮವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದು ಗ್ರಾಮಕ್ಕೆ ಆಗಮಿಸಿದ ವಾಹನ ಗರ್ಭಿಣಿಯನ್ನು ಮುದಗಲ್ ಪಟ್ಟಣದ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಹೆರಿಗೆ ನೋವು ಜಾಸ್ತಿಯಾಗಿ ಮಾರ್ಗಮಧ್ಯದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿಕ್ಕಮಗಳೂರು: ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯ, ಸ್ಥಳೀಯರಿಂದ ಮೆಚ್ಚುಗೆ
ಈ ಸಮಯದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿ ಅಗತ್ಯ ಚಿಕಿತ್ಸೆಯನ್ನು ನೀಡಿದ್ದರಿಂದ ಸಾಮಾನ್ಯ ಹೆರಿಯಾಗಿದ್ದು ತಾಯಿ-ಮಗು ಸುರಕ್ಷಿತವಾಗಿದ್ದಾರೆ. ಈ ಸಂದರ್ಭದಲ್ಲಿ ಬವಸಲಿಂಗಪ್ಪ, ಗದ್ದೆಪ್ಪ ಸೇರಿ ಕುಟುಂಬಸ್ಥರು, ಆಶಾ ಕಾರ್ಯಕರ್ತೆಯರು ಇದ್ದರು.