ದಂಪತಿ ಜಗಳ: 6 ತಿಂಗಳ ಮಗುವನ್ನು ಮೋರಿಗೆಸೆದ ತಾಯಿ

Suvarna News   | Asianet News
Published : Feb 18, 2020, 03:16 PM IST
ದಂಪತಿ ಜಗಳ: 6 ತಿಂಗಳ ಮಗುವನ್ನು ಮೋರಿಗೆಸೆದ ತಾಯಿ

ಸಾರಾಂಶ

ದಂಪತಿ ಜಗಳದಿಂದಾಗಿ ತಾಯಿ ಮಗುವನ್ನು ತಂದು ಮೋರಿಗೆಸೆದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ ಮಗು ಪತ್ತೆಯಾಗಿದೆ.  

ಮೈಸೂರು(ಫೆ.18): ದಂಪತಿ ಜಗಳದಿಂದಾಗಿ ತಾಯಿ ಮಗುವನ್ನು ತಂದು ಮೋರಿಗೆಸೆದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ ಮಗು ಪತ್ತೆಯಾಗಿದೆ.

ಮೋರಿಯಲ್ಲಿನ ಮಗುವನ್ನ ಕಂಡು ಆತಂಕಗೊಂಡಿದ್ದ ಜನರು ಮಗುವಿನ ಚಿರಾಟ ಕೇಳಿ ಮಗುವನ್ನು ರಕ್ಷಿಸಿದ್ದರು. ಕಸದ ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಆರೈಕೆ ಮಾಡಿ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಆರೋಗ್ಯವಾಗಿರುವುದಾಗಿ ಚೆಲುವಾಂಬ ಆಸ್ಪತ್ರೆ ವೈದ್ಯರು ದೃಢ ಪಡಿಸಿದ್ದಾರೆ.

ಚಿತ್ರದುರ್ಗ ಡಿಸಿ ಪ್ರಿಯಾ ಕಾರಿಗೆ KSRTC ಬಸ್ ಡಿಕ್ಕಿ

ಶಿಶು ತೊಟ್ಟಿಯಲ್ಲಿ ಸಿಕ್ಕ ವಿಚಾರವಾಗಿ ಸ್ಥಳಕ್ಕೆ ವಿಧ್ಯಾಹರಣ್ಯಪುರಂ ಪೋಲಿಸರು ಭೇಟಿ, ಪರಿಶೀಲನೆ ನಡೆಸಿದ್ದು, ತಂದೆ ತಾಯಿ‌ ಜಗಳದಿಂದ‌ ಮಗುವನ್ನು ತಾಯಿ ತೊಟ್ಟಿಗೆ ಎಸೆದಿರುವುದು ತಿಳಿದುಬಂದಿದೆ.

'ಸಾಹೇಬ್ರಿಗೆ ಧನ್ಯವಾದ': ಸಿದ್ದು ಹೊಗಳಿದ ಸಿಂಹ

ವಿದ್ಯಾರಣ್ಯಪುರಂ ಪೊಲೀಸರು ಪೋಷಕರಿಗೆ ಬುದ್ಧಿವಾದ ಹೇಳಿದ್ದು, ತಾಯಿ ಬುದ್ದಿಮಾಂದ್ಯಳಂತೆ ತೋರುತ್ತಿದ್ದಾರೆ ಎನ್ನಲಾಗಿದೆ. ಪೋಷಕರಿಗೆ ಮಗುವನ್ನು ವಾಪಸ್ ನೀಡಲಾಗಿದೆ.

PREV
click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!