ಮಗಳ ಆನ್‌​ಲೈನ್‌ ಕ್ಲಾಸ್‌ಗೆ ಕಿವಿಯೋಲೆ ಮಾರಿದ್ದ ತಾಯಿ!

By Kannadaprabha NewsFirst Published Aug 6, 2020, 10:58 AM IST
Highlights

ಮಗಳ ಆನ್‌​ಲೈನ್‌ ಕ್ಲಾಸ್‌ಗೆ ಕಿವಿಯೋಲೆ ಮಾರಿದ್ದ ತಾಯಿ| ಬೆಳ​ಗಾ​ವಿ​ಯಲ್ಲಿ ಘಟನೆ| ಸ್ಥಳೀಯ ಮುಖಂಡದಿಂದ ನೆರ​ವು

ಬೆಳಗಾವಿ(ಆ.06): ಮಗಳ ಆನ್‌ಲೈನ್‌ ಕ್ಲಾಸ್‌ಗಾಗಿ ಮೊಬೈಲ್‌ ಖರೀದಿಸಲು ಬಡತಾಯಿಯೊಬ್ಬಳು ತನ್ನ ಕಿವಿಯೋಲೆ ಮಾರಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಸರೋಜಿನಿ ಬೇವಿನಕಟ್ಟಿಮೊಬೈಲ್‌ ಖರೀದಿಸಲು ತನ್ನ ಕಿವಿಯೋಲೆ ಮಾರಾಟ ಮಾಡಿದ ತಾಯಿಯಾಗಿದ್ದಾಳೆ.

ಬೆಳಗಾವಿ ನಗರದ ಸರ್ಕಾರಿ ಸರದಾರ್ಸ್‌ ಶಾಲೆಯಲ್ಲಿ ಈಕೆಯ ಮಗಳು ರೇಣುಕಾ 10ನೇ ತರಗತಿ ಓದುತ್ತಿದ್ದಾಳೆ. ಆದರೆ, ಈಕೆಯ ಬಳಿ ಆನ್‌ಲೈನ್‌ ಕ್ಲಾಸ್‌ಗೆ ಬೇಕಾದಂತಹ ಮೊಬೈಲ್‌ ಇರಲಿಲ್ಲ. ತುಂಬಾ ಬಡ ಕುಟುಂಬದವರಾದ ಇವರಿಗೆ ಸ್ಮಾರ್ಟ್‌ ಫೋನ್‌ ಖರೀದಿಸುವ ಸಾಮರ್ಥ್ಯ ಇರಲಿಲ್ಲ. ಹೀಗಾಗಿ ತಾಯಿ ತನ್ನ ಕಿವಿಯೋಲೆಯನ್ನೇ ಮಾರಾಟ ಮಾಡಿ ಮೊಬೈಲ್‌ ಖರೀದಿಸಿದ್ದರು.

ಮಾನವೀಯತೆ ತೋರಿ​ದ ಸಮಾಜ ಸೇವಕ: ಬಡತಾಯಿ ಸರೋಜಿನಿ ಬೇವಿನಕಟ್ಟಿಸಂಕಷ್ಟಕ್ಕೆ ಸ್ಪಂದಿಸಿರುವ ಸಮಾಜ ಸೇವಕ ವೀರೇಶ್‌ ಕಿವಡಸಣ್ಣವರ, ಆ ಮಹಿ​ಳೆಗೆ ಹೊಸ ಚಿನ್ನದ ಕಿವಿಯೋಲೆ ಕೊಡಿಸಿ ಮಾನ​ವೀ​ಯತೆ ತೋರಿ​ದ್ದಾರೆ. ರೇಣುಕಾ ಶಿಕ್ಷಣ ವೆಚ್ಚವನ್ನು ತಾನೇ ಬರಿಸುತ್ತೇನೆ. ತಗ​ಡಿನ ಶೆಡ್‌​ದಲ್ಲಿ ವಾಸಿ​ಸುವ ಈ ಕುಟುಂಬಕ್ಕೆ ಯೋಗ್ಯವಾದ ವಸತಿ ವ್ಯವಸ್ಥೆಯನ್ನು ತಕ್ಷಣ ಮಾಡಲಾಗುವುದು. ಎರಡೂ ಕಾಲು ಸ್ವಾಧೀನ ಕಳೆ​ದು​ಕೊಂಡಿ​ರುವ ಸರೋಜಮ್ಮನ ಮಗನಿಗೆ ತಮ್ಮ ಕಚೇರಿಯಲ್ಲಿ ರಿಶಪ್ಶನ್‌ ಕೆಲಸ ನೀಡಲಾಗುವುದು. ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ವೀರೇಶ್‌ ಕಿವಡಸನ್ನವರ ಹೇಳಿದರು.

click me!