ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

By Suvarna News  |  First Published Aug 2, 2020, 3:52 PM IST

ಇಬ್ಬರು ಮಕ್ಕಳೊಂದಿಗೆ ತಾಯಿ ಅತ್ಮಹತ್ಯೆಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಕ್ಕಳೊಂದಿಗೆ ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ತಾಯಿ ಮೂರು ದಿನದ ಹಿಂದೆ ಮನೆಯಿಂದ  ನಾಪತ್ತೆಯಾಗಿದ್ದರು.


ಚಿಕ್ಕಮಗಳೂರು(ಆ.02): ಇಬ್ಬರು ಮಕ್ಕಳೊಂದಿಗೆ ತಾಯಿ ಅತ್ಮಹತ್ಯೆಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಕ್ಕಳೊಂದಿಗೆ ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ತಾಯಿ ಮೂರು ದಿನದ ಹಿಂದೆ ಮನೆಯಿಂದ  ನಾಪತ್ತೆಯಾಗಿದ್ದರು.

"

Tap to resize

Latest Videos

ಆ. 2ರಂದು ಕೆರೆಯಲ್ಲಿ‌ ಮೃತದೇಹ ಪತ್ತೆಯಾಗಿದೆ. ಎನ್.ಅರ್.ಪುರ ತಾಲೂಕಿನ ಹುಣಸೇಕೊಪ್ಪದಲ್ಲಿ ತಾಯಿ ಹಾಗೂ ಮಕ್ಕಳು ಸೇರಿ ಮೂವರ ಮೃತದೇಹ ಪತ್ತೆಯಾಗಿದೆ. ಲಕ್ಷ್ಮೀ (35), ಸೌಜನ್ಯ (5) ,ಆದ್ಯಾ (2) ಮೃತ ದುರ್ದೈವಿಗಳು.

ಬೆಳಗಾವಿ: ಕೆರೆಗೆ ಜಿಗಿದು ಪ್ರಾಣಬಿಟ್ಟ ಯುವತಿ

ಮೃತರು ಬಾಳೆಹೊನ್ನೂರು ಸಮೀಪ ಕರ್ಕೆಶ್ವರ ಮೂಲದವರಾಗಿದ್ದು, ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಅತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಳೆಹೊನ್ನೂರು‌ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಎನ್. ಅರ್. ಪುರದ ಹುಣಸೇಕೊಪ್ಪದಲ್ಲಿ ಘಟನೆ ನಡೆದಿದೆ.

click me!