* ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಆಸ್ಪತ್ರೆ ಬಳಿ ನಡೆದ ಘಟನೆ
* ಅಂಬ್ಯುಲೆನ್ಸ್‌ಗಾಗಿ ಗರ್ಭಿಣಿಯ ಪರದಾಟ
* ವೈದ್ಯರು ಹಾಗೂ ಸಿಬ್ಬಂದಿ ನಡೆಗೆ ಸಾರ್ವಜನಿಕರ ಆಕ್ರೋಶ
ತುಮಕೂರು(ಮಾ.12): ವೈದ್ಯರ(Doctors) ನಿರ್ಲಕ್ಷ್ಯಕ್ಕೆ ಆಸ್ಪತ್ರೆಗೆ ಬಂದ ವಾಹನದಲ್ಲೇ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಅಮಾನವೀಯ ಘಟನೆ ತುಮಕೂರು(Tumakuru) ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಆಸ್ಪತ್ರೆ ಬಳಿ ಇಂದು(ಶನಿವಾರ) ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಬರಲು ಅಂಬ್ಯುಲೆನ್ಸ್‌ಗಾಗಿ(Ambulance) ಗರ್ಭಿಣಿಯ(Pregnent) ಕುಟುಂಬಸ್ಥರು ಪರದಾಟ ನಡೆಸಿದ್ದರು. ಸಕಾಲಕ್ಕೆ ಅಂಬ್ಯುಲೆನ್ಸ್ ಸಿಗದೇ ಇದ್ದರಿಂದ ಕಾರಿನಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿಯನ್ನ ಕರೆತಂದಿದ್ದರು. ಈ ವೇಳೆ ಆಸ್ಪತ್ರೆ(Hospital) ಬಳಿ ಮಹಿಳೆಯನ್ನ ಕರೆತಂದು ಗಂಟೆಗಳೇ ಕಳೆದ್ರೂ ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ಇವರತ್ತ ತಿರುಗಿ ನೋಡಿರಲಿಲ್ಲ. ಹೀಗಾಗಿ ಆಸ್ಪತ್ರೆ ಮುಂಭಾಗವೇ ಕಾರಿನಲ್ಲೇ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ.
ಆ್ಯಂಬುಲೆನ್ಸ್‌ನಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮಡಕಶಿರಾ ಹೋಬಳಿಯ ಪಿಲ್ಲಕುಂಟೆ ಗ್ರಾಮದ ಲಕ್ಷ್ಮೀ ದೇವಿ ಎಂಬಾಕೆಯೇ ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದಾಳೆ. ವೈದ್ಯರು ಹಾಗೂ ಸಿಬ್ಬಂದಿ ನಡೆಗೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆಕ್ರೋಶದ ಬಳಿಕ ಸಿಬ್ಬಂದಿ ತಾಯಿ-ಮಗುವನ್ನ ಆಸ್ಪತ್ರೆ ಒಳಗೆ ಕರೆದೊಯ್ದಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಇದೇ ರೀತಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಮಗು ಸಾವನ್ನಪ್ಪಿದ್ದ ಘಟನೆ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿಯ ಬ್ರಹ್ಮಸಮುದ್ರ ಗ್ರಾಮದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಜಿಲ್ಲಯ ವೈದ್ಯರು ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.
ಹಾವೇರಿ: 108 ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಹಾವೇರಿ: ತಾಲೂಕಿನ ಮರೋಳ ಗ್ರಾಮದ ಮಹಿಳೆಯೊಬ್ಬರು 108 ಅಂಬ್ಯುಲೆನ್ಸ್ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಕಳೆದ ವರ್ಷದ ಆ.05 ರಂದು ನಡೆದಿತ್ತು. ಮಮತಾ ಹರಿಜನ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣಕ್ಕೆ 108 ಅಂಬ್ಯುಲೆನಸ್‌ಗೆ ಕರೆ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿದ 108 ಅಂಬುಲೆನ್ಸ್ ಸಿಬ್ಬಂದಿಗಳಾದ EMT ನಾಮದೇವ, ಪೈಲೆಟ್ ಬಸುರಾಜ್ ಗೊರವರ್ ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯತ್ತಿದ್ದರು.
ಅವಧಿಗೂ ಪೂರ್ವ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ಈ ವೇಳೆ ಮಾರ್ಗ ಮಧ್ಯೆಯೇ ತಾಯಿಯು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂಬ್ಯುಲೆನ್ಸ್ ಸಿಬ್ಬಂದಿಗಳು ಸಮಯ ಪ್ರಜ್ಞೆ ಮೆರೆದು ಸುರಕ್ಷಿತ ಹೆರಿಗೆ ಮಾಡಿಸಿದ್ದು, ಇದೀಗ ತಾಯಿ-ಮಗು ಆರೋಗ್ಯವಾಗಿದ್ದರು. ಸದ್ಯ ಇಬ್ಬರನ್ನೂ ಗುತ್ತಲ ಆರೋಗ್ಯ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಕೊಪ್ಪಳ: ಆಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ..!
ಕೊಪ್ಪಳ: 108 ಆಂಬುಲೆನ್ಸ್‌ನಲ್ಲೇ ಮಹಿಳೆಯೊಬ್ಬಳು ಅವಳಿ ಹೆಣ್ಣು ಮಕ್ಕಳಿಗೆ ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಕಳೆದ ವರ್ಷ ಮೇ.29 ರಂದು ನಡೆದಿತ್ತು. ಹುಲಿಗಿ ಗ್ರಾಮದ ನಿವಾಸಿ ಮಾರಿಯಮ್ಮ ಸುನಿಲ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮಹಿಳೆಯನ್ನ ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಆಗಮಿಸಿತ್ತು. ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಪರಿಣಾಮ ರಾತ್ರಿ 10.15 ಸುಮಾರಿಗೆ ಶುಶ್ರೂಷಕ ಬಸವರಾಜ್ ಅವರು ಮಾರ್ಗ ಮಧ್ಯೆ ಆಂಬುಲೆನ್ಸ್‌ನಲ್ಲೇ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿದ್ದರು.
ಈ ವೇಳೆ ಮಾರಿಯಮ್ಮ ಸುನಿಲ್ ಮುದ್ದಾದ ಅವಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ತಾಯಿ ಮಗುವನ್ನು ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದರು.