ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ!

Published : Dec 01, 2019, 10:41 AM IST
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ!

ಸಾರಾಂಶ

ಮಹಿಳೆಯೊಬ್ಬರು ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆ ಶಿರಸಿಯಲ್ಲಿ ನಡೆದಿದೆ. 

ಶಿರಸಿ [ಡಿ.01]: ಮಹಿಳೆಯೊಬ್ಬರು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದಲ್ಲಿ ಅಪರೂಪದ ಘಟನೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. 

ಈ ನಾಲ್ಕರಲ್ಲಿ ಒಂದು ಮಗು ಜನಿಸುವಾಗಲೇ ಮೃತಪಟ್ಟರೆ, ಉಳಿದ ಮೂರು ಶಿಶುಗಳು ಆಸ್ಪತ್ರೆ ಸಿಬ್ಬಂದಿ ಆರೈಕೆಯಲ್ಲಿ ಕ್ಷೇಮವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. 

ಎಂಟು ತಿಂಗಳ ಗರ್ಭಿಣಿಯಾಗಿದ್ದ 28 ವರ್ಷ ವಯಸ್ಸಿನ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಸಿಸೇರಿಯನ್‌ ನಡೆಸಿ ಹೆರಿಗೆ ಮಾಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆರಿಗೆ ವೇಳೆ ಒಂದು ಮಗು ಮೃತಪಟ್ಟಿದ್ದರೆ, ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದೆ. ಒಂದೇ ಗರ್ಭದಲ್ಲಿ ನಾಲ್ಕು ಶಿಶುಗಳಿರುವುದು ಅತ್ಯಪರೂಪ. ತಾಯಿ-ಮಗು ಕ್ಷೇಮವಾಗಿದ್ದಾರೆ ಎಂದು ಶಸ್ತ್ರಚಿಕಿತ್ಸೆ ಹೆರಿಗೆ ನಡೆಸಿದ ಇಲ್ಲಿನ ಕೌಮುದಿ ನರ್ಸಿಂಗ್‌ ಹೋಂನ ಡಾ. ಜಿ.ಎಂ. ಹೆಗಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV
click me!

Recommended Stories

ಸೋನು ನಿಗಮ್‌ಗೆ ಇರುವ ವಿರೋಧ ಕನ್ನಡಿಗರನ್ನು ಟೆರರಿಸ್ಟ್‌ಗಳು ಎಂದ ಧ್ರುವ್‌ ರಾಠಿಗೆ ಯಾಕಿರಲಿಲ್ಲ? ಕರವೇ ನೀವು ಮಾಡ್ತಿರೋದು ತಪ್ಪಲ್ಲವೇ
ತುಂಗಭದ್ರಾ ನದಿ ತೀರಕ್ಕೆ ಹೋಗುವವರಿಗೆ ಎಚ್ಚರಿಕೆ: ಕುರಿಗಾಹಿ ಮೇಲೆ ಮೊಸಳೆ ದಾಳಿ, ಮುಂದೇನಾಯ್ತು?