ಕನಕಪುರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

By Kannadaprabha News  |  First Published Oct 22, 2024, 12:08 PM IST

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿ ಮೂಲದ ಮುಸ್ಲಿಂ ಮಹಿಳೆ ರಜಿಯಾ ಭಾನು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಂದು ಗಂಡು, ಒಂದು ಹೆಣ್ಣು ಅವಳಿ ಮಕ್ಕಳಿಗೆ ಬಸ್ಸಿ ನಲ್ಲೇ ಜನ್ಮ ನೀಡಿದ್ದಾಳೆ. ಅವಧಿಗೆ ಮುನ್ನ ಜನಸಿದ ಎರಡು ಮಕ್ಕಳು ತೂಕ ಕಡಿಮೆ ಇರುವುದರಿಂದ ತಾಯಿ ಮತ್ತು ಮಕ್ಕಳನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿ ಶಿಶುಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 


ಕನಕಪುರ(ಅ.22): ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗಾಗಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಏಳು ತಿಂಗಳ ಗರ್ಭಿಣಿ ಮಹಿಳೆಗೆ ಬಸ್ಸಿನಲ್ಲೇ ಹೆರಿಗೆ ಆಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಸೋಮವಾರ ನಡೆದಿದೆ. 

ತಾಲೂಕಿನ ಹುಣಸನಹಳ್ಳಿ ಮೂಲದ ಮುಸ್ಲಿಂ ಮಹಿಳೆ ರಜಿಯಾ ಭಾನು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಂದು ಗಂಡು, ಒಂದು ಹೆಣ್ಣು ಅವಳಿ ಮಕ್ಕಳಿಗೆ ಬಸ್ಸಿ ನಲ್ಲೇ ಜನ್ಮ ನೀಡಿದ್ದಾಳೆ. ಅವಧಿಗೆ ಮುನ್ನ ಜನಸಿದ ಎರಡು ಮಕ್ಕಳು ತೂಕ ಕಡಿಮೆ ಇರುವುದರಿಂದ ತಾಯಿ ಮತ್ತು ಮಕ್ಕಳನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿ ಶಿಶುಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Tap to resize

Latest Videos

ಚನ್ನಪಟ್ಟಣದಲ್ಲಿ ಬಂಡಾಯ ಸ್ಪರ್ಧೆ ಖಚಿತವೆಂದ ಸೈನಿಕ; ಅಫಿಡವಿಟ್ ಸಿದ್ಧಪಡಿಸಿಕೊಳ್ಳುತ್ತಿರುವ ಯೋಗೇಶ್ವರ್!

ತಾಲೂಕಿನ ಹುಣಸನಹಳ್ಳಿ ಮೂಲದ ರಜಿಯಾ ಬಾನು ಮಹಿಳೆಗೆ 6 ಮತ್ತು 3 ವರ್ಷದ ಎರಡು ಹೆಣ್ಣು ಮಕ್ಕಳಿದ್ದು, ಈ ಎರಡೂ ಮಕ್ಕಳು ಸಹ ಏಳು ತಿಂಗಳಿಗೆ ಜನಿಸಿವೆ, ಒಂದು ಮಗು ಮನೆಯಲ್ಲಿ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಏಳು ತಿಂಗಳಿಗೆ ಜನನವಾಗಿತ್ತು, ಮೂರನೇ ಬಾರಿಗೆ ಗರ್ಭಿಣಿಯಾಗಿದ್ದ ಮಹಿಳೆ ಆರು ತಿಂಗಳು ತುಂಬಿ ಏಳನೇ ತಿಂಗಳಿಗೆ ಮೂರು ದಿನ ಕಡಿಮೆ ಇರುವಾಗಲೇ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತನ್ನ ಪತಿಯ ತಾಯಿಯೊಂದಿಗೆ ಬಸ್ಸಿನಲ್ಲಿ ತಾಲೂಕು ಹೆರಿಗೆ ಆಸ್ಪತ್ರೆಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. 

ದೋಸ್ತಿಗೆ 'ಯೋಗಿ' ಟೆನ್ಷನ್.. ಸೈನಿಕನ ಜೊತೆ ಸಂಧಾನ..!

ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಮಾರ್ಗ ಮಧ್ಯೆ ದೊಡ್ಡ ಕಬ್ಬಳ್ಳಿ ಗ್ರಾಮದ ಬಳಿ ಬರುವಾಗ ಹೊಟ್ಟೆ ನೋವು ಹೆಚ್ಚಾಗಿ ಬಸ್ಸಿನಲ್ಲೇ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ, ಮಹಿಳೆಯನ್ನು ಸಾರಿಗೆ ಬಸ್‌ನಲ್ಲಿ ಆಸ್ಪತ್ರೆಗೆ ಕರೆತಂದ ನಂತರ ಆಸ್ಪತ್ರೆ ಸಿಬ್ಬಂದಿ ಮಕ್ಕಳಿಗೆ ಆರೈಕೆ ಮಾಡಿದ್ದಾರೆ. 

ಮಕ್ಕಳು ಮತ್ತು ತಾಯಿಯನ್ನು ಪರೀಕ್ಷಿಸಿದ ವೈದ್ಯರು ಅವಧಿಗೆ ಮುಂಚೆ ಮಕ್ಕಳು ಜನಿಸಿವೆ. ಹಾಗಾಗಿ ಮಕ್ಕಳ ತೂಕ ಕಡಿಮೆ ಇದೆ, ಮಕ್ಕಳನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಬೇಕು, ಹೀಗಾಗಿ ಬೆಂಗಳೂರಿನವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದು, ತಕ್ಷಣ ಆ್ಯಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ ಮಕ್ಕಳಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ತಾಯಿ ಆರೋಗ್ಯ ವಾಗಿದ್ದಾರೆ ಎಂದು ವೈದ್ಯರು ಮತ್ತು ಪೋಷಕರು ಮಾಹಿತಿ ನೀಡಿದ್ದಾರೆ.

click me!