* ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಘಟನೆ
* ಮಗನ ಮರಣವನ್ನು ಕಣ್ಣಾರೆ ಕಂಡ ತಾಯಿ ಗೌರಮ್ಮ
* ಮಗನ ಸಾವಿನ ನಂತರ ಅವನ ಜೊತೆಗೆ ತಾನೂ ಪ್ರಾಣತ್ಯಾಗ ಮಾಡಿದ ತಾಯಿ
ಗುಳೇದಗುಡ್ಡ(ಸೆ.17): ಮಗನ ಸಾವು ಕಂಡ ತಾಯಿ ದಿಂದ ಕೇವಲ ಎರಡು ಗಂಟೆಗಳಲ್ಲಿ ತಾಯಿ ಕೂಡ ಅಸುನೀಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಇಲ್ಲಿನ ಬಸವೇಶ್ವರ ನಗರದ ನೇಕಾರ ಕುಟುಂಬದ ನಿವಾಸಿ ಮಲ್ಲೇಶಪ್ಪ ಕುಬ್ಬಣ್ಣ ಕೌಜಗನೂರ (44) ಬುಧವಾರ ರಾತ್ರಿ 9 ಗಂಟೆಗೆ ಅನಾರೋಗ್ಯದಿಂದ ಮನೆಯಲ್ಲಿ ನಿಧನರಾದರು. ಮಗನ ಮರಣವನ್ನು ಕಣ್ಣಾರೆ ಕಂಡ ತಾಯಿ ಗೌರಮ್ಮ(78) ದುಃಖತಪ್ತಳಾಗಿ ಮಗನ ಶವದ ಎದುರಿಗೆ ಅಳುತ್ತಲೇ ಎರಡು ಗಂಟೆಗಳಲ್ಲಿ ಅಂದರೆ ರಾತ್ರಿ 11 ಗಂಟೆಗೆ ಮಗನ ಸಾವಿನ ನಂತರ ಅವನ ಜೊತೆಗೆ ತಾನೂ ಪ್ರಾಣತ್ಯಾಗ ಮಾಡಿದ್ದಾಳೆ.
ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!
ತಾಯಿ ಮಗನ ಏಕಕಾಲದ ಸಾವು ಅವರ ಕುಟುಂಬಸ್ಥರಲ್ಲಿ ಹಾಗೂ ಪಟ್ಟಣದಲ್ಲಿ ಜನರ ಮನಕಲುಕಿಸಿದೆ. ಮಗನ ಮೇಲಿನ ಅತಿಯಾದ ಪ್ರೀತಿಯನ್ನು ಸಹಿಸಿಕೊಳ್ಳದ ದೇವರು ತಾಯಿಯನ್ನೂ ಮಗನ ಜೊತೆಗೆ ಕರೆದುಕೊಂಡನೆಂದು ಹೇಳುತ್ತಿರುವುದು ಕಣ್ಣುಗಳಲ್ಲಿ ನೀರು ತರಿಸುವಂತಿತ್ತು. ಮಲ್ಲೇಶಪ್ಪ ಕುಬ್ಬಣ್ಣ ಕೌಜಗನೂರ ಪತ್ನಿಯನ್ನು ಅಗಲಿದ್ದಾರೆ. ಗೌರಮ್ಮ ಓರ್ವ ಮಗ ಹಾಗೂ ಓರ್ವ ಮಗಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿ ಮಗನ ಗುರುವಾರ ಮಧ್ಯಾಹ್ನ ಜರುಗಿತು.