Mandya: ಚಿರತೆ ದಾಳಿಗೆ ಬಲಿಯಾದ ಕರು ಪತ್ತೆ ಹಚ್ಚಿದ ತಾಯಿ ಹಸು!

By Govindaraj SFirst Published Jul 7, 2022, 3:40 PM IST
Highlights

ಚಿರತೆ ದಾಳಿಗೆ ಸಾವನ್ನಪ್ಪಿದ ತನ್ನ ಕರುವನ್ನು ತಾಯಿ ಹಸು ಪತ್ತೆ ಹಚ್ಚಿದ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಕರು ಚಿರತೆ ದಾಳಿಗೆ ಬಲಿಯಾಗಿದೆ.

ಮಂಡ್ಯ (ಜು.07): ಚಿರತೆ ದಾಳಿಗೆ ಸಾವನ್ನಪ್ಪಿದ ತನ್ನ ಕರುವನ್ನು ತಾಯಿ ಹಸು ಪತ್ತೆ ಹಚ್ಚಿದ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ ಕರು ಚಿರತೆ ದಾಳಿಗೆ ಬಲಿಯಾಗಿದೆ. ತಡರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ವೇಳೆ ಚಿರತೆಯೊಂದು 6 ತಿಂಗಳ ಕರು ಹೊತ್ತೊಯ್ದು ತಿಂದು ಬಿಸಾಕಿದೆ. 

ಎಂದಿನಂತೆ ಬೆಳಿಗ್ಗೆ ಎದ್ದು ಹಾಲು ಕರೆಯಲು ತೆರಳಿದ ಚಂದ್ರಶೇಖರ್ ಕೊಟ್ಟಿಗೆಯಲ್ಲಿ ಕರು ಇಲ್ಲದನ್ನು ಗಮನಿಸಿದ್ದಾರೆ. ನಾಪತ್ತೆಯಾದ 6 ತಿಂಗಳ ಕರುವಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಕರು ಎಲ್ಲೂ ಸಿಗದಿದ್ದಾಗ ಚಂದ್ರಶೇಖರ್ ತಾಯಿ ಹಸುವಿನ ಮೊರೆಹೋಗಿದ್ರು. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಹಗ್ಗ ಬಿಚ್ಚಿದ್ದ ರೈತ ಕರುವನ್ನ ಹುಡುಕಲು ಬಿಟ್ಟು ಬಿಟ್ಟಿದ್ದರು. ಅಂಬಾ ಎಂದು ಕಿರುಚುತ್ತಾ ಕೊಟ್ಟಿಗೆ ಸುತ್ತಲೂ ಓಡಾಡಿದ ಹಸು ಕೊನೆಗೆ ಅರ್ಧ ಕಿಲೋಮೀಟರ್ ದೂರದಲ್ಲಿ ಹೋಗಿ ನಿಂತಿದೆ. ಅಲ್ಲಿ ಸತ್ತು ಬಿದ್ದಿದ್ದ ತನ್ನ ಕರುವನ್ನ ಪತ್ತೆ ಮಾಡಿದೆ. 

ಈ ಭಾವನಾತ್ಮಕ ಘಟನೆ ಸ್ಥಳದಲ್ಲಿದ್ದವರನ್ನು ಅಚ್ಚರಿ ಒಳಗಾಗಿಸಿದೆ. 20ಸಾವಿರ ಬೆಲೆ ಬಾಳುತ್ತಿದ್ದ ಕರು ಕಳೆದುಕೊಂಡ ರೈತ ಕಂಗಾಲಾದರೆ, ಹಸುವಿನ ತಾಯಿ ಪ್ರೀತಿ ಕಂಡ ಜನ ಮರುಗಿದ್ರು. ಬಳಿಕ ಘಟನೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗದ್ದು ಗ್ರಾಮದಲ್ಲಿ ಹೆಚ್ಚಿರುವ ಚಿರತೆ ಹಾವಳಿ ತಪ್ಪಿಸಿ ಜನರ ಆತಂಕ ದೂರ ಮಾಡುವಂತೆ ಮನವಿ ಮಾಡಿದ್ದಾರೆ.

Mandya: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆಗೈದ ಪಾಪಿ ಪತಿ!

ಚಿರತೆ ಹಾವಳಿ ತಪ್ಪಿಸುವಂತೆ ಒತ್ತಾಯ: ಚಿರತೆ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಗ್ಗಿಕುಪ್ಪೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲವು ದಿನಗಳಿಂದ ಚಿರತೆಗಳು ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಅರಣ್ಯ ಇಲಾಖೆ ಕೂಡಲೇ ಚಿರತೆ ಹಿಡಿಯಲು ಅಗತ್ಯ ಸ್ಥಳಗಳಲ್ಲಿ ಬೋನು ಇರಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಜೆಯಾಗುತ್ತಿದ್ದಂತೆ ಮನುಷ್ಯ ಮನೆಯಿಂದ ಹೊರ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. 

ಕುರಿ ಮೇಯಿಸಲು ಹೋಗಿದ್ದ ತಗ್ಗಿಕುಪ್ಪೆ ಗ್ರಾಮದ ಜಯಮ್ಮ ತಮ್ಮ 2 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಇದರಿಂದ 40 ಸಾವಿರಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ. ಸಾಕುಪ್ರಾಣಿಗಳನ್ನು ಮೇಯಿಸಲು ಬೆಟ್ಟದ ತಪ್ಪಲಿಗೆ ಗ್ರಾಮಸ್ಥರು ಹೋಗುತ್ತಿದ್ದಾರೆ. ಚಿರತೆ 1 ವೇಳೆ ಮನುಷ್ಯರ ಮೇಲೆ ದಾಳಿ ಮಾಡಿದರೆ ಸಾಕಷ್ಟು ಜೀವಹಾನಿ ಉಂಟಾಗಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆ ಹಿಡಿಯುವ ಕೆಲಸ ಮಾಡಬೇಕು.

Raichur: ನೀರಮಾನ್ವಿ ಗ್ರಾಮದ ಬಳಿ ಕಾಣಿಸಿಕೊಂಡ ‌ಚಿರತೆ: ಗ್ರಾಮಸ್ಥರು ಆತಂಕ

 ಇಲ್ಲವಾದರೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕಳೆದ 2 ವರ್ಷಗಳಿಂದ ಮಾಗಡಿ ತಾಲೂಕಿನಲ್ಲಿ ಸಾಕಷ್ಟು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಅಧಿಕಾರಿಗಳು ಅರಣ್ಯಕ್ಕೆ ಚಿರತೆಗಳನ್ನು ಮತ್ತೆ ಬಿಡುತ್ತಿರುವುದರಿಂದ ಚಿರತೆಗಳು ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿವೆ. ಕೂಡಲೇ ಅರಣ್ಯ ಇಲಾಖೆ ಶಾಶ್ವತವಾಗಿ ಚಿರತೆ ಹಾವಳಿ ತಪ್ಪಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

click me!