ವಿಜಯಪುರ: ಕಾಲು ಜಾರಿ ಬಾವಿಗೆ ಬಿದ್ದು ತಾಯಿ-ಮಗು ದುರ್ಮರಣ

Kannadaprabha News   | Asianet News
Published : Apr 25, 2020, 12:01 PM IST
ವಿಜಯಪುರ: ಕಾಲು ಜಾರಿ ಬಾವಿಗೆ ಬಿದ್ದು ತಾಯಿ-ಮಗು ದುರ್ಮರಣ

ಸಾರಾಂಶ

ಬಾವಿಗೆ ಬಿದ್ದ ಮಗು​ವನ್ನು ಕಾಪಾ​ಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಸಾವು| ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದಲ್ಲಿ ನಡೆದ ದುರ್ಘಟನೆ| ಈ ಸಂಬಂಧ ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕ​ರಣ ದಾಖಲು| 

ವಿಜಯಪುರ(ಏ.25): ಬಾವಿಗೆ ಬಿದ್ದ ಮಗು​ವನ್ನು ಕಾಪಾ​ಡಲು ಹೋಗಿ ತಾಯಿಯೂ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರೂ ಮೃತ​ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದ ಹೊರವಲಯದ ತೊಟದ ವಸ್ತಿಯಲ್ಲಿ ಶುಕ್ರ​ವಾರ ಸಂಭ​ವಿ​ಸಿದೆ.

ಮೃತರನ್ನ ಆಸಂಗಿ​ಹಾಳ ಗ್ರಾಮದ ಕವಿತಾ ವಿಠ್ಠಲ ಘತ್ತರಗಿ ಉರ್ಫ್‌ ಜಮಾದಾರ (30), ಅಮೃಶ ಘತ್ತರಗಿ (5) ಎಂದು ಗುರುತಿಸಲಾಗಿದೆ.'

ವಿಜಯಪುರ: ಏಷ್ಯಾದ ಅತ್ಯಂತ ಉದ್ದದ ಜಲ ಸೇತುವೆಗೆ ವಿಧ್ಯುಕ್ತ ಚಾಲನೆ

ಕಾಲು ಜಾರಿ ಮಗು ಬಾವಿಗೆ ಬಿದ್ದಿದೆ. ಅಲ್ಲಿಯೇ ಬಟ್ಟೆ ತೊಳೆ​ಯು​ತ್ತಿ​ರುವ ತಾಯಿ ಆ ಮಗು​ವನ್ನು ಕಾಪಾಡಲು ಮುಂದಾಗಿದ್ದಾಳೆ, ಆಗ ಕಾಲು ಜಾರಿ ಆಕೆಯೂ ಬಾವಿಗೆ ಬಿದ್ದಿದ್ದಾರೆ. ಮಹಿಳೆಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC