ದಾವಣಗೆರೆ: ಮೆಟ್ರೋ ಪಿಲ್ಲರ್ ದುರಂತ, ಸಾವಿನಲ್ಲಿ ಒಂದಾದ ತಾಯಿ-ಮಗು ಬೇರೆ ಬೇರೆಯಾಗಿ ಅಂತ್ಯಕ್ರಿಯೆ

By Girish Goudar  |  First Published Jan 11, 2023, 2:34 PM IST

ಒಂದು ಕಡೆ ಪುಟ್ಟ ಮಗುವಿನ ಅಂತ್ಯಸಂಸ್ಕಾರ ಮತ್ತೊಂದೆಡೆ ತಾಯಿ ಚಿತೆಗೆ ಅಗ್ನಿಸ್ಪರ್ಶ, ತಾಯಿ ಮಗು ಬಲಿ ಪಡೆದ ಮೆಟ್ರೋ ಕಾಮಗಾರಿ ಪಿಲ್ಲರ್ ದುರಂತದ ಕಥೆ ಇದು. 


ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ದಾವಣಗೆರೆ

ದಾವಣಗೆರೆ(ಜ.11):  ನಾವಿಬ್ಬರು ನಮಗಿಬ್ಬರು ಎಂಬಂತೆ ಅವಳಿ ಮಕ್ಕಳಿನೊಂದಿಗೆ ಆ ದಂಪತಿಯ ಸುಂದರ ಸಂಸಾರ. ಬೆಂಗಳೂರಿನಲ್ಲಿ ಕೆಲಸ‌ ಮಾಡ್ತಾ ಇಬ್ಬರು ಪುಟ್ಟ ಮಕ್ಕಳೊಂದಿಗೆ ಸುಂದರ ಜೀವನ ಕನಸು ಕಂಡಿದ್ದ ಆ ದಂಪತಿ ಗುರಿ ಮುಟ್ಟುವ ಮುನ್ನವೇ ಮೆಟ್ರೋ ಪಿಲ್ಲರ್ ಕುಸಿತದಿಂದಾಗಿ ತಾಯಿ ಮಗ ಇಬ್ಬರು ದಾರುಣ ಅಂತ್ಯ ಕಂಡಿದ್ರೇ, ತಂದೆ ಮಗಳು ಪವಾಡದಂತೆ ಬದುಕುಳಿದಿದ್ದಾರೆ. ತಾಯಿ ಮಗನನ್ನು ಬಲಿ ಪಡೆದ ರಕ್ಕಸ ಮೆಟ್ರೋ ಪಿಲ್ಲರ್ ಕಾಮಗಾರಿಯಲ್ಲೂ ಕಮಿಷನ್ ಕಳಪೆ ಕಾಮಗಾರಿ ಎಂದು ಮೃತ ಕುಟುಂಬದ ಸಂಬಂಧಿಕರು ಆರೋಪಿಸಿದ್ದಾರೆ.

Latest Videos

undefined

ದಾವಣಗೆರೆಯ ಬಸವೇಶ್ವರ ನಗರದ ತೇಜಸ್ವಿನಿ ಗದಗದ ನಿವಾಸಿ ಲೋಹಿತ್ ದಂಪತಿ ಬೆಂಗಳೂರಿನಲ್ಲಿ ಸುಂದರ ಜೀವನ ಕಟ್ಟಿಕೊಂಡಿದ್ದರು. ಮೃತ ತೇಜಸ್ವಿನಿ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೇ, ಇನ್ನು ಬದುಕುಳಿದ ಪತಿ ಲೋಹಿತ್ ಸಿವಿಲ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತ ಇದ್ದರು. ಇಬ್ಬರು ಅವಳಿ‌ ಜವಳಿ ಮಕ್ಕಳೊಂದಿಗೆ ಸುಂದರ ಜೀವನ ಸಾಗಿಸುತ್ತಿದ್ದರು. ದುರಂತ ಅಂದ್ರೇ ಅವಳಿ ಮಕ್ಕಳಾದ ವಿಹಾನ್ ಹಾಗು ವಿಸ್ಮೀತಾರನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಬಿಟ್ಟು ತೇಜಸ್ವಿನಿ ಹಾಗೂ ಲೋಹಿತ್ ತಮ್ಮ ಕಚೇರಿ ಸೇರುವ ಮುನ್ನವೇ ದುರಂತ ನಡೆದು ಹೋಗಿದೆ. 

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ಗೆ ತಾಯಿ-ಮಗು ಬಲಿ: ಕಾಮಗಾರಿ ಸ್ಥಳದಲ್ಲಿ ಮೃತ್ಯು ರಣಕೇಕೆ

ಬೆಂಗಳೂರಿನ ನಾಗವಾರ ರಿಂಗ್ ರಸ್ತೆಯ ಹೆಚ್​ಬಿಆರ್​ ಲೇಔಟ್​​ನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದಿದೆ.  ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಇಬ್ಬರು ಅವಳಿ ಮಕ್ಕಳ ಜತೆ ಮನೆಯಿಂದ ಹೊರಟು, ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್ನಲ್ಲಿ ಬಿಡಲು ಮಾನ್ಯತಾ ಟೆಕ್​ಪಾರ್ಕ್​ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿದೆ. ಘಟನೆಯಲ್ಲಿ ತೇಜಸ್ವಿನಿ (35), ಎರಡೂವರೆ ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿರುವ ಸುದ್ದಿಯಿಂದ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಇನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದರೆ. 

ದಾವಣಗೆರೆ ಆಗಮಿಸಿದ ಮೃತದೇಹ, ಮುಗಿಲು ಮುಟ್ಟಿದ ಆಕ್ರಂದನ

ಮೃತ ತೇಜಸ್ವಿನಿ ಹಾಗು ಮಗ ವಿಹಾನ್ ಮೃತ ದೇಹ ದಾವಣಗೆರೆ ನಗರದ ಕುಂದವಾಡ ರಸ್ತೆ ಬಳಿ ಇರುವ ಬಸವೇಶ್ವರ ನಗರದಲ್ಲಿರುವ ನಿವಾಸಿಕ್ಕೆ ಮೃತದೇಹಗಳು ಆಗಮಿಸಿದ್ದು, ಕುಟುಂಬಸ್ಥರ ಆಕ್ರಂಧನಕ್ಕೆ ಮುಗಿಲುಮುಟ್ಟಿತು. ತಾಯಿ ಮಗ ಇಬ್ಬರು ಮಲಗಿದ್ದಾರೋ ಎಂಬಂತೆ ಭಾಸವಾಗುತ್ತಿದೆ ಎಂದು ಮಗಳು ತೇಜಸ್ವೀನಿ ಹಾಗೂ ಮೊಮ್ಮಗನನ್ನು ಕಳೆದುಕೊಂಡ ಅಜ್ಜಿ ಹೃದಯ ಚಡಪಡಿಸುತ್ತ ಎದೆ ಬಡಿದುಕೊಂಡು ಕಣ್ಣೀರು ಹಾಕ್ತಾ ಮೆಟ್ರೋ ಪಿಲ್ಲರ್ ಕಾಮಗಾರಿ ಗುತ್ತಿಗೆದಾರನಿಗೆ ಹಾಗೂ ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು. ಇನ್ನು ಇಪ್ಪತು ಲಕ್ಷ ರೂಪಾಯಿ ಪರಿಹಾರ ಘೋಷಣೆ ನಮಗೆ ಬೇಡವೇಬೇಡಾ ನಾವೇ ಐವತ್ತು ಲಕ್ಷ ಕೊಡ್ತೇವೆ ಗುತ್ತಿಗೆದಾರರನ್ನು ಸಸ್ಪೆಂಡ್ ಮಾಡುವ ಮೂಲಕ ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು, ಒಂದು ಕೋಟಿ ಕೋಡ್ತಿನಿ ನನ್ನ ಮಗಳ ಜೀವ ಕೊಡಿಸ್ತಿರ ಸಿಎಂ ಬೊಮ್ಮಾಯಿಯವರೇ ನಿಮ್ಮ ಪರಿಹಾರ ನಮಗೆ ಬೇಕಾಗಿಲ್ಲ ಎಂದು ಮೃತ ತೇಜಸ್ವಿನಿ ತಂದೆ ಮದನ್ ಆಕ್ರೋಶ ವ್ಯಕ್ತಪಡಿಸಿದರು. 

ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ -ಮಗು ಸಾವು: ಇಂಜಿನಿಯರ್‌ಗಳ ಅಮಾನತಿಗೆ ಸಿಎಂ ಆದೇಶ

ತಾಯಿ ಒಂದು ಕಡೆ, ಪುಟ್ಟ ಮಗುವಿನ ಅಂತ್ಯಸಂಸ್ಕಾರ ಮತ್ತೊಂದು ಕಡೆ..

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ದುರಂತದಲ್ಲಿ ಸಾವನಪ್ಪಿದ ತಾಯಿ ತೇಜಸ್ವಿನಿ ಹಾಗು ಮಗ ವಿಹಾನ್ ಅಂತ್ಯಸಂಸ್ಕಾರ ಪ್ರತ್ಯೇಕ ಅಂತ್ಯಕ್ರಿಯೆಗೆ ಕುಟುಂಬಸ್ಥರ ನಿರ್ಧಾರ ಮಾಡಿದ್ದು, ತಾಯಿ ತೇಜಸ್ವಿನಿಯನ್ನು ದಾವಣಗೆರೆ ನಗರದ ವೈಕುಂಠ ಏಕಧಾಮದಲ್ಲಿ ಅಂತ್ಯಕ್ರಿಯೆ ನಡೆಸಿದ್ರೇ, ಮಗು ವಿಹಾನ್ ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿನ ಬಾಟಲ್ ಬಿಲ್ಡಿಂಗ್ ಹಿಂಭಾಗದ ರುದ್ರಭೂಮಿಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಇನ್ನು ಕುಟುಂಬ ಸದಸ್ಯರನ್ನು ಕಳೆದುಕೊಂಡ ಪತಿ ಲೋಹಿತ್ ಗೆ ದಿಕ್ಕು ತೋಚದಂತಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ತಾಯಿ ಮಗು ಸಾವಿನಲ್ಲಿ ಒಂದಾದ್ರು ಅಂತ್ಯಕ್ರಿಯೆಯಲ್ಲಿ ಬೇರೆ ಬೇರೆಯಾಗಿದ್ದು ಇಡೀ ಕುಟುಂಬ ಮಮ್ಮಲ ಮರುಗಿದೆ.

ಕಮಿಷನ್ ಕಾಮಗಾರಿಗೆ ಮಗಳನ್ನು ಕಳೆದುಕೊಂಡಿದ್ದೇವೆ

ಮೆಟ್ರೋ ಕಾಮಗಾರಿ ಹಾಗು ಈ ಸ್ಮಾರ್ಟ್ ಸಿಟಿ ಕಾಮಗಾರಿ ಮಗಳು ಕಮಿಷನ್ ಕಾಮಗಾರಿ ಎಂದು ಮೃತ ತೇಜಸ್ವಿನಿ ದೊಡ್ಡಪ್ಪ ರಾಘವೇಂದ್ರ ರಾವ್ ಸರ್ಕಾರ ಹಾಗು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮದವರಿಗೆ ಮೃತ ಬಗ್ಗೆ ಕಾಳಜಿ ಇದ್ದಷ್ಟು ಈ ರಾಜ್ಯದ ಸಿಎಂಗಿದೇಯಾ, ಇಲ್ಲ ಗುತ್ತಿಗೆದಾರರಿಗೆ ಎಂಡಿಗೆ ಇದೀಯಾ ಇಂಜಿನಿಯರ್ ಗಳ ಆಟಕ್ಕೆ ಹೊಣೆಯಾರು, ನಾವು ರೊಕ್ಕ ಕೊಟ್ಟು ಟ್ಯಾಕ್ಸ್ ಕಡ್ತಿವಿ ಸ್ವಾಮೀ ಇತಂಹ ಕಮಿಷನ್ ಕಾಮಗಾರಿಗಳಿಂದ ನಮ್ಮ ಮಗಳು ಮೊಮ್ಮಗ ಸಾವನಪ್ಪಿದ್ದಾರೆ. ರಾಜಕೀಯ ನಾಯಕರು ರಾಜಕೀಯ ನಾಟಕವಾಡ್ತಾ ಕಮಿಷನ್ ತಿನ್ನುತ್ತ ನಮ್ಮಂತವರು ಜೀವ ಬಲಿಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!