ಕೊಪ್ಪಳ ಶಾಸಕ ದಢೇಸೂಗೂರು ಕಾರು ಡಿಕ್ಕಿ: ವೃದ್ಧೆ ಸಾವು

Published : Jan 11, 2023, 01:47 PM IST
ಕೊಪ್ಪಳ ಶಾಸಕ ದಢೇಸೂಗೂರು ಕಾರು ಡಿಕ್ಕಿ: ವೃದ್ಧೆ ಸಾವು

ಸಾರಾಂಶ

ಮೈಲಾಪುರ ಗ್ರಾಮದ ಮಗಳ ಮನೆಯಲ್ಲಿ ವಾಸ ಮಾಡುತ್ತಿದ್ದ ಮರಿಯಮ್ಮ ಅವರು ವೃದ್ಧಾಪ್ಯವೇತನ ಪಡೆಯುಲು ಚಳ್ಳೂರು ಗ್ರಾಮಕ್ಕೆ ತೆರಳಿದ್ದರು. ವಾಪಸ್‌ ಮಗಳ ಮನೆಗೆ ಆಗಮಿಸುವಾಗ ನಡೆದ ಘಟನೆ. 

ಕಾರಟಗಿ(ಧಾರವಾಡ)(ಜ.11): ತಾಲೂಕಿನ ಮೈಲಾಪುರ ಕ್ರಾಸ್‌ ಬಳಿ ಶಾಸಕ ಬಸವರಾಜ ದಢೇಸೂಗೂರು ಅವರಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಮರಿಯಮ್ಮ ನಾಯಕ(70) ಮೃತರು. ಮೈಲಾಪುರ ಕ್ರಾಸ್‌ ಬಳಿಯ ಬಸ್‌ ನಿಲ್ದಾಣದಿಂದ ರಸ್ತೆ ದಾಟುತ್ತಿದ್ದಾಗ ಶಾಸಕರಿದ್ದ ಕಾರು ದಿಢೀರ್‌ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ವೃದ್ಧೆಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Gadag Bike Accident: ಕೊಪ್ಪಳ ಜಾತ್ರೆ ಮುಗಿಸಿ ಮನೆಗೆ ಹೊರಟವರು ಮಸಣ ಸೇರಿದರು

ಶಾಸಕರು ತಕ್ಷಣ ಮರಿಯಮ್ಮರನ್ನು ತಮ್ಮದೇ ಕಾರಿನಲ್ಲಿ ಚಿಕಿತ್ಸೆಗಾಗಿ ಕಾರಟಗಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮರಿಯಮ್ಮ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಬಳ್ಳಾರಿ ವಿಮ್ಸ್‌ಗೆ ಕರೆದೊಯ್ಯುತ್ತಿದ್ದಾಗಲೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಲಾಪುರ ಗ್ರಾಮದ ಮಗಳ ಮನೆಯಲ್ಲಿ ವಾಸ ಮಾಡುತ್ತಿದ್ದ ಮರಿಯಮ್ಮ ಅವರು ವೃದ್ಧಾಪ್ಯವೇತನ ಪಡೆಯುಲು ಚಳ್ಳೂರು ಗ್ರಾಮಕ್ಕೆ ತೆರಳಿದ್ದರು. ವಾಪಸ್‌ ಮಗಳ ಮನೆಗೆ ಆಗಮಿಸುವಾಗ ಈ ಘಟನೆ ನಡೆದಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ