ಡಿಕೆಶಿ ವಿಷಯದಲ್ಲಿ ರಾಜಕೀಯ ಮಾಡೊದೇನಿಲ್ಲ: ಬೊಮ್ಮಾಯಿ

Kannadaprabha News   | Asianet News
Published : Jun 11, 2020, 03:08 PM IST
ಡಿಕೆಶಿ ವಿಷಯದಲ್ಲಿ ರಾಜಕೀಯ ಮಾಡೊದೇನಿಲ್ಲ: ಬೊಮ್ಮಾಯಿ

ಸಾರಾಂಶ

ಪದಗ್ರಹಣ ಮಾಡೋ ವಿಷಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಟ್ಟಿದ್ದು, ಇದರಲ್ಲಿ ರಾಜಕೀಯ ಮಾಡುವಂತಹದ್ದು ಏನೂ ಇಲ್ಲ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸ್ಪಷ್ಟಪಡಿಸಿದರು.

ತುಮಕೂರು(ಜೂ.11): ಪದಗ್ರಹಣ ಮಾಡೋ ವಿಷಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಟ್ಟಿದ್ದು, ಇದರಲ್ಲಿ ರಾಜಕೀಯ ಮಾಡುವಂತಹದ್ದು ಏನೂ ಇಲ್ಲ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸ್ಪಷ್ಟಪಡಿಸಿದರು.

ತುಮಕೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಪದಗ್ರಹಣಕ್ಕೆ ಅವಕಾಶ ನೀಡುತ್ತಿಲ್ಲ ಎನ್ನುವ ಕಾಂಗ್ರೆಸ್‌ ಆರೋಪವಿದೆಯಲ್ಲಾ ಎಂಬ ಪ್ರಶ್ನೆಗೆ ವಿರೋಧ ಪಕ್ಷದವರಾಗಿ ಕೆಲವು ವಿಚಾರಗಳನ್ನು ವಿರೋಧಿಸಬೇಕು ವಿರೋಧಿಸ್ತಾರೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಹಿನ್ನೆಲೆ ಡಿಸಿಸಿ ಬ್ಯಾಂಕ್‌ನಿಂದ ಆಧಾರ ರಹಿತ ಸಾಲ

ಶಿವಕುಮಾರ್‌ಗೆ ಕಾನೂನಲ್ಲಿ ಏನು ಅವಕಾಶ ಇದೆಯೋ ಅದೇ ರೀತಿ ಮಾಡಬೇಕು. ವಿನಾ ಕಾರಣ ಎಲ್ಲಿಲ್ಲಿಗೋ ಹೋಲಿಸೋದು ಸರಿಯಲ್ಲ. ನಾನು ಅವರ ಹೇಳಿಕೆಗೆ ಉತ್ತರ ಕೊಡಬೇಕು ಅಂತ ಏನಿಲ್ಲ. ಅವರು ಯಾವಾಗ ಪದಗ್ರಹಣ ಮಾಡಬೇಕು, ಬಿಡಬೇಕು ಅವರಿಗೆ ಬಿಟ್ಟಿದ್ದು. ಇದರಲ್ಲಿ ರಾಜಕೀಯ ಮಾಡುವಂತಹದ್ದು ಏನೂ ಇಲ್ಲ ಎಂದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!