ಚಾಮರಾಜನಗರ: KSRTCಯಲ್ಲಿ 30 ಸಾವಿರಕ್ಕೂ ಹೆಚ್ಚು ದಂಡ ವಸೂಲಿ

Published : Dec 04, 2019, 09:58 AM IST
ಚಾಮರಾಜನಗರ: KSRTCಯಲ್ಲಿ 30 ಸಾವಿರಕ್ಕೂ ಹೆಚ್ಚು ದಂಡ ವಸೂಲಿ

ಸಾರಾಂಶ

ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನವೆಂಬರ್‌ 2019ರ ಮಾಹೆಯಲ್ಲಿ 2034 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 1585 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಚಾಮರಾಜನಗರ(ಡಿ.04): ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ವಿಧಿಸುವ ನಿಯಮವಿದೆ ಎಂದು ಗೊತ್ತಿದ್ದರೂ ಇದನ್ನು ಉಲ್ಲಂಘನೆ ಮಾಡುವವರಿಗೇನೂ ಕಡಿಮೆ ಇಲ್ಲ. ಟಿಕೆಟ್ ಇಲ್ಲದೆ ಸಿಕ್ಕಿ ಬೀಳುವುದು, ದಂಡ ಹಾಕುವುದು ನಡೆಯುತ್ತಲೇ ಇರುತ್ತದೆ.

ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನವೆಂಬರ್‌ 2019ರ ಮಾಹೆಯಲ್ಲಿ 2034 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 1585 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಅಧಿಕೃತ ಟಿಕೆಟ್‌ ಪಡೆಯದೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 2545 ಪ್ರಯಾಣಿಕರಿಂದ 30915 ರು. ದಂಡ ವಸೂಲಿ ಮಾಡಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!