ಕರಾವಳಿ, ಮಲೆನಾಡು, ಕೊಡಗಿನಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು ಈಗ ಉತ್ತರ ಕನ್ನಡದಲ್ಲಿಯೂ ಪ್ರವಾಹ ಭೀತಿ ಉಂಟಾಗಿದೆ. ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಉತ್ತರ ಕನ್ನಡಲ್ಲಿ ಮತ್ತೊಮ್ಮೆ ಶರಾವತಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಉತ್ತರ ಕನ್ನಡ(ಸೆ.05): ಕರಾವಳಿ, ಮಲೆನಾಡು, ಕೊಡಗಿನಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು ಈಗ ಉತ್ತರ ಕನ್ನಡದಲ್ಲಿಯೂ ಪ್ರವಾಹ ಭೀತಿ ಉಂಟಾಗಿದೆ. ಈಗಾಗಲೇ ಪ್ರವಾಹದಿಂದ ತತ್ತರಿಸಿರುವ ಉತ್ತರ ಕನ್ನಡಲ್ಲಿ ಮತ್ತೊಮ್ಮೆ ಶರಾವತಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೊನ್ನಾವರದಲ್ಲಿ ಶರಾವತಿ ನದಿ ಪ್ರವಾಹದಿಂದಾಗಿ 30ಮನೆಗಳಿಗೆ ನೀರು ನುಗ್ಗಿದ್ದು ಕುಟುಂಬಗಳನ್ನು ದೋಣಿಯ ಸಹಾಯದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ಮನೆಗಳು ಮುಳುಗಡೆಯಾಗಿದ್ದು ಜನ ಕಂಗಾಲಾಗಿದ್ದಾರೆ.
ತಿಥಿಗೆ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು !
ಒಟ್ಟು ನಾಲ್ಕು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು 130 ಜನರು ಆಶ್ರಯ ಪಡೆದಿದ್ದಾರೆ. ಕೊಡಗು ಭಾಗದಲ್ಲಿಯೂ ನೇತ್ರಾವತಿ ನದಿ ನೀರಿನ ಪ್ರವಾಹ ಹೆಚ್ಚಿದ್ದು ಅಲ್ಲಿಯೂ ಪ್ರವಾಹ ಭೀತಿ ಉಂಟಾಗಿದೆ.