ಬೆಂಗಳೂರು : ಡಬಲ್ ಮರ್ಡರ್ ಆರೋಪಿಗೆ ಬಿತ್ತು ಪೊಲೀಸ್ ಗುಂಡು

Published : Sep 05, 2019, 02:11 PM IST
ಬೆಂಗಳೂರು :  ಡಬಲ್ ಮರ್ಡರ್ ಆರೋಪಿಗೆ ಬಿತ್ತು ಪೊಲೀಸ್ ಗುಂಡು

ಸಾರಾಂಶ

ಬೆಂಗಳೂರಿನ ಜೆಪಿ ನಗರದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು [ಸೆ.05]: ಬಂಧಿಸಲು ತೆರಳಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಡಬಲ್ ಮರ್ಡರ್ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಆತ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ತಲಘಟ್ಟಪುರದ ನಾಗನಗೌಡ ಪಾಳ್ಯದ ಬಳಿ ವಿನೋದ್ ಅಲಿಯಾಸ್ ಕೋತಿ ಎಂಬ ಡಬಲ್ ಮರ್ಡರ್ ಆರೋಪಿಯನ್ನು ಪೊಲೀಸರು ಬಂಧಿಸಲು ಹೋದಾಗ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದರಿಂದ ಆತ್ಮ ರಕ್ಷಣೆಗೆಗಾಗಿ ಫೈರಿಂಗ್ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಕ್ಲಿಕ್ಕಿಸಿ

ತಲಘಟ್ಟಪುರ ಠಾಣೆಯ ಎಸ್ ಐ ನಾಗೇಶ್ ಗುಂಡು ಹಾರಿಸಿದ್ದು ಈ ವೇಳೆ ವಿನೋದ್ ಕಾಲಿಗೆ ಗಾಯವಾಗಿದೆ. ಇದರಿಂದ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆರೋಪಿ ಜೆ ಪಿ ನಗರದಲ್ಲಿ ಆಗಸ್ಟ್ 25 ರಂದು ಮಂಜ ಹಾಗೂ ವರುಣ್ ಎಂಬುವರನ್ನು ಕೊಲೆಗೈದು ಬಳಿಕ ತಲೆಮರೆಸಿಕೊಂಡಿದ್ದ. ಎರಡು ಕೊಲೆ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ವಿನೋದ್ ಇದೀಗ ಪೊಲೀಸರ ಬೆಲೆಗೆ ಬಿದ್ದಿದ್ದಾನೆ. 

PREV
click me!

Recommended Stories

ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್
ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ