ಪಟ್ಟಣದಲ್ಲಿ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿಗೆ ಕತ್ತೆ ಹಾಲು ಕುಡಿಸಿದರೆ ಹೊಟ್ಟೆ ನೋವು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದಾಗಿ ಚಿಕ್ಕಮಕ್ಕಳಿಗೆ ಕತ್ತೆ ಹಾಲು ಕುಡಿಸುತ್ತಿರುವುದರಿಂದ ಇದೀಗ ಕತ್ತೆ ಹಾಲಿನ ಬೇಡಿಕೆ ಹೆಚ್ಚಾಗಿದೆ.
ಚಿಂಚೋಳಿ (ಡಿ.11) : ಪಟ್ಟಣದಲ್ಲಿ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿಗೆ ಕತ್ತೆ ಹಾಲು ಕುಡಿಸಿದರೆ ಹೊಟ್ಟೆ ನೋವು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದಾಗಿ ಚಿಕ್ಕಮಕ್ಕಳಿಗೆ ಕತ್ತೆ ಹಾಲು ಕುಡಿಸುತ್ತಿರುವುದರಿಂದ ಇದೀಗ ಕತ್ತೆ ಹಾಲಿನ ಬೇಡಿಕೆ ಹೆಚ್ಚಾಗಿದೆ.
ತೆಲಂಗಾಣ ರಾಜ್ಯದ ತಾಂಡೂರ, ಜಹೀರಾಬಾದ, ವಿಕಾರಾಬಾದ ಮತ್ತು ಬೀದರ್ ಜಿಲ್ಲೆ ಔರಾದ ತಾಲೂಕಿನಿಂದ ಕತ್ತೆ ಹಾಲಿನ ವ್ಯಾಪಾರಿಗಳು ಚಂದಾಪೂರ-ಚಿಂಚೋಳಿ ಪಟ್ಟಣದ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಂಚರಿಸಿ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಕುಡಿಸುವುದಕ್ಕಾಗಿ ೧೦೦-೧೫೦ ರು. ಪಡೆದುಕೊಂಡು ಒಂದು ಲೋಟ ಹಾಲು ಕೊಡುತ್ತಾರೆ.
undefined
ಕತ್ತೆ ಹಾಲು ದುಬಾರಿ ಅಂತ ಗೊತ್ತು, ಆದರೆ ಇಲಿ ಹಾಲಿನ ಬೆಲೆ ಕೇಳಿದ್ರಾ?
ಕತ್ತೆ ಹಾಲು ಕುಡಿಸಿದರೆ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು, ಕೆಮ್ಮು, ದಮ್ಮು ಮತ್ತು ಕೀಲು ನೋವು ಬರುವುದಿಲ್ಲ ಎಂಬ ಹಳೆಯ ಕಾಲದಿಂದಲೂ ಇದರ ನಂಬಿಕೆ ಜನರಲ್ಲಿ ಇಂದಿಗೂ ಕಾಣಬಹುದಾಗಿದೆ ಎಂದು ಕತ್ತೆ ವ್ಯಾಪಾರಿ ಸುಂದರಮ್ಮ ಹೇಳಿದರು.
ಮುಂಜಾನೆ ನಸುಕಿನ ೬ರಿಂದ ಮಧ್ಯಾಹ್ನ ೧೨ರ ಒಳಗಾಗಿ ಮಕ್ಕಳಿಗೆ ಕತ್ತೆ ಹಾಲು ಕುಡಿಸುತ್ತಾರೆ. ಓಣಿ, ಗಲ್ಲಿ ತಿರುಗಾಡಿ ಹೈರಾಣಾಗುತ್ತೇವೆ. ನಮ್ಮ ಕುಟುಂಬದ ಪರಂಪರೆ ಉದ್ಯೋಗ ಆಗಿರುವುದರಿಂದ ಕತ್ತೆ ಹಾಲು ಮಾರಾಟ ಮಾಡಿ ಬದುಕುತ್ತೇವೆ. ಪ್ರತಿನಿತ್ಯ ಕತ್ತೆಗೆ ಹುಲ್ಲು ಮೇವು ಇನ್ನಿತರ ಪೌಷ್ಟಿಕ ಆಹಾರ ಖರೀದಿಸಿ ತಿನ್ನಲು ಕೊಡುತ್ತೇವೆ. ನಮಗೆ ಪ್ರತಿನಿತ್ಯ ೫೦೦ ರು. ಗಳಿಕೆ ಆಗಲಿದೆ. ಇದರಿಂದಲೇ ನಮ್ಮ ಕುಟುಂಬ ನಿರ್ವಹಣೆ ಆಗಲಿದೆ ಎಂದು ಕತ್ತೆ ಹಾಲಿನ ವ್ಯಾಪಾರಿ ಮಹಿಳೆ ಹೇಳಿದರು.
ಕತ್ತೆ ಹಿಂದೆ ಹೋದವ ಇಂದು ಕೋಟ್ಯಾಧಿಪತಿ! ಇವನಿಂದ ಕತ್ತೆ ಹಾಲು ಕೊಳ್ಳೋರ್ಯಾರು ಗೊತ್ತಾ?
ಒಂದು ಲೀ ಕತ್ತೆ ಹಾಲು ಎಷ್ಟು?
ಒಂದು ಲೀಟರ್ ಹಾಲಿಗೆ ₹5000 ಆಗಬಹುದು. ಕತ್ತೆ ಹಾಲಿನಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ಹಾಗಾಗಿ ಈ ಹಾಲಿಗೆ ಬೇಡಿಕೆ ಬರಲು ಪ್ರಮುಖ ಕಾರಣವಾಗಿದೆ. ಬಾಣಂತಿಯರು ತಮ್ಮ ಕಂದಮ್ಮಗಳಿಗೆ ಕತ್ತೆ ಹಾಲು ಕುಡಿಸಿ ಬುದ್ಧಿವಂತರಾಗಲಿ, ಶಕ್ತಿವಂತರಾಗಲಿ, ರೋಗ ನಿರೋಧಕ ಶಕ್ತಿ ಹೆಚ್ಚಾಗಲಿ ಅಂತಿದರೆ, ರಸ್ತೆಯಲ್ಲಿ ಕತ್ತೆ ಕಂಡು ದೊಡ್ಡವರು ಕೂಡ ಚೌಕಾಸಿ ಮಾಡಿ ಹಾಲು ಕುಡಿಯುತ್ತಿದ್ದಾರೆ. ಕತ್ತೆಗಳು ಅಂದರೆ ಕೇರ್ ಮಾಡದ ಜನ, ಇದೀಗ ಕೈಗೆಟುಕದ ಅದರ ಹಾಲಿಗೆ ಮುಗಿ ಬೀಳುತ್ತಿರುವುದಂತು ಸತ್ಯ.