ಮಠಾಧೀಶರು ರಾಜಕೀಯ, ಹಾಗೆಯೇ ಧರ್ಮದಲ್ಲಿ ರಾಜಕಾರಣ ಪ್ರವೇಶ ಮಾಡಬಾರದು. ಆದರೆ, ಇಂದು ಎಲ್ಲವೂ ಸಮತೋಲನ ತಪ್ಪಿದೆ ಎಂದು ಬೈಲೂರು ನಿಷ್ಕಲ ಮಂಟಪದ ಪೀಠಾಧಿಪತಿ ನಿಜಗುಣಪ್ರಭು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಧಾರವಾಡ (ಡಿ.11) : ಮಠಾಧೀಶರು ರಾಜಕೀಯ, ಹಾಗೆಯೇ ಧರ್ಮದಲ್ಲಿ ರಾಜಕಾರಣ ಪ್ರವೇಶ ಮಾಡಬಾರದು. ಆದರೆ, ಇಂದು ಎಲ್ಲವೂ ಸಮತೋಲನ ತಪ್ಪಿದೆ ಎಂದು ಬೈಲೂರು ನಿಷ್ಕಲ ಮಂಟಪದ ಪೀಠಾಧಿಪತಿ ನಿಜಗುಣಪ್ರಭು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂಬ ನೋಣವಿನಕೇರಿ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಲಿಂಗಾಯತ ಸ್ವಾಮೀಜಿ ಅಷ್ಟೇ ಅಲ್ಲ, ಮೌಲ್ವಿ, ಪಾದ್ರಿಗಳು ರಾಜಕಾರಣದಲ್ಲಿ ಪ್ರವೇಶಿಸಬಾರದು ಎಂದು ಸಲಹೆ ನೀಡಿದರು.
ಯಾವುದೇ ಧರ್ಮದ ನೇತಾರರು ಹಾಗೂ ಸ್ವಾಮೀಜಿ ರಾಜಕಾರಣಿಗಳಿಗೆ ಬುದ್ಧಿ ಹೇಳಬಹುದು. ಇಲ್ಲವೇ, ಮಾರ್ಗದರ್ಶನ ಮಾಡಬಹುದು. ಅದನ್ನು ಬಿಟ್ಟು ರಾಜಕಾರಣಿಗಳ ಓಲೈಕೆ ಮಾಡುವುದು ಧರ್ಮಗುರುವಿನ ಸರಿಯಾದ ನಡೆಯಲ್ಲ ಎಂದರು.
ಶಿವಯೋಗ ಮಾಡುವವ ಮಹಾ ಮಾನವ: ನಿಜಗುಣಾನಂದ ಸ್ವಾಮೀಜಿ
ಓರ್ವ ಸ್ವಾಮೀಜಿ ಬಳಸಿಕೊಳ್ಳುವಾಗಲೂ ರಾಜಕಾರಣಿಗಳು ಅತ್ಯಂತ ಎಚ್ಚರ ವಹಿಸಬೇಕು. ಸ್ವಾಮೀಜಿ ಕೂಡ ರಾಜಕಾರಣಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಕೇವಲ ಧಾರ್ಮಿಕ ಕಾರ್ಯಕ್ಕೆ ಸ್ವಾಮೀಜಿ ಬಳಸಿಕೊಳ್ಳುವಂತೆ ತಿಳಿಸಿದರು.
ಸರ್ವ ಪಕ್ಷಗಳ ರಾಜಕಾರಣಿಗಳು ಮಠಮಾನ್ಯಗಳಿಗೆ ಬರುತ್ತಾರೆ. ಮಠಾಧೀಶರನ್ನು ರಾಜಕೀಯಕ್ಕೆ ದುರ್ಬಳಕೆಯ ಅರಿವಿನ ಪ್ರಜ್ಞೆ ರಾಜಕಾರಣಿ, ಮಠಾಧೀಶರಿಗೆ ಇರಬೇಕು. ರಾಜಕೀಯದಲ್ಲಿ ಧರ್ಮ, ಧರ್ಮದಲ್ಲಿ ರಾಜಕೀಯ ಪ್ರವೇಶ ಸಲ್ಲ ಎಂದರು.
ಇಂದು ಮಾಧ್ಯಮಗಳು ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಒಂದೊಂದು ಸುದ್ದಿ ವಾಹಿನಿಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸುತ್ತವೆ. ಕೆಲವು ವಾಹಿನಿಗಳು ಕೆಲವು ರಾಜಕಾರಣಿಗಳ ವೈಭವೀಕರಣ ನಿರಾಕರಿಸುವ ಬಗ್ಗೆ ಟೀಕೆ ಮಾಡಿದರು.
ಪ್ರಸ್ತುತ ಕವಲು ದಾರಿಯಲ್ಲಿ ನಡೆಯುವ ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ. ಹೀಗಾಗಿ, ಸಮಾಜದ ಅಭ್ಯುದಯ ಬಯಸುತ್ತಿರುವ ಮಾಧ್ಯಮಗಳು ಹಾಗೂ ಸ್ವಾಮೀಜಿಗಳ ಪಾತ್ರವೂ ಸೋಲುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂತ್ರಸಿದ್ಧಿಯ ನಾಲಿಗೆಯೇ ಬೇರೆ-ನಿಜಗುಣಪ್ರಭು ಸ್ವಾಮೀಜಿ
ಅನುದಾನ ಸಮರ್ಥನೆ!
ಪ್ರಜಾಪ್ರಭುತ್ವ ಪೂರ್ವದಲ್ಲಿ ಪ್ರಭು ಪರಂಪರೆ ಇತ್ತು. ಮಹಾರಾಜರೇ ಎಲ್ಲರನ್ನೂ ಸಲಹುತ್ತಿದ್ದರು. ಮಠಗಳಲ್ಲಿ ಶಿಕ್ಷಣ, ಪ್ರಸಾದ ನಿಲಯವಿತ್ತು. ಸಾವಿರಾರು ಪುಸ್ತಕ ಪ್ರಕಟಣೆ, ಅನಾಥ ಮಕ್ಕಳ ಪೋಷಣೆ ಜವಾಬ್ದಾರಿ ಇತ್ತು. ಹೀಗಾಗಿ, ಸರ್ಕಾರ ಮಠಗಳಿಗೆ ಅನುದಾನ ನೀಡುತ್ತಿದೆ. ಅದು ಪ್ರಜಾಪ್ರಭುತ್ವದ ತೆರಿಗೆ ಹಣ ಅಲ್ಲವೇ?.
ನಿಜಗುಣಪ್ರಭು ಸ್ವಾಮೀಜಿ, ಪೀಠಾಧಿಪತಿ ಬೈಲೂರ ನಿಷ್ಕಲ ಮಂಟಪ