ತುಮಕೂರು ಜಿಲ್ಲೆಯಲ್ಲಿ ಹಲಸಿನ ಹಣ್ಣನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯ ತೊಡಗಿದ್ದು ಹಲಸಿನ ಹಣ್ಣನ್ನು ಹಣ್ಣಾಗಿ ಮಾರಾಟ ಮಾಡದೆ ಹಲಸಿನ ಹಣ್ಣಿನಲ್ಲಿ ಅನೇಕ ರೀತಿಯ ಖಾದ್ಯಗಳನ್ನು ಮಾಡುವ ಮುಖೇನ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದಾಗ ಅತಿ ಹೆಚ್ಚು ಲಾಭವನ್ನು ರೈತರು ಪಡೆಯಬಹುದಾಗಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.
ತುಮಕೂರು : ತುಮಕೂರು ಜಿಲ್ಲೆಯಲ್ಲಿ ಹಲಸಿನ ಹಣ್ಣನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯ ತೊಡಗಿದ್ದು ಹಲಸಿನ ಹಣ್ಣನ್ನು ಹಣ್ಣಾಗಿ ಮಾರಾಟ ಮಾಡದೆ ಹಲಸಿನ ಹಣ್ಣಿನಲ್ಲಿ ಅನೇಕ ರೀತಿಯ ಖಾದ್ಯಗಳನ್ನು ಮಾಡುವ ಮುಖೇನ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದಾಗ ಅತಿ ಹೆಚ್ಚು ಲಾಭವನ್ನು ರೈತರು ಪಡೆಯಬಹುದಾಗಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.
ಬೆಳ್ಳಾವಿ ಗ್ರಾಮದಲ್ಲಿ ನಡೆದ ರೈತ ಉತ್ಪಾದಕರ ಕಂಪನಿಯ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಹಲಸಿನ ಹಣ್ಣಿನಲ್ಲಿ ಹಲಸಿನ ಹಪ್ಪಳ, ಚಿಫ್ಸ್, ಜಾಮ್, ಜ್ಯೂಸ್, ಫä›ಟ್ ಪಲ್ಪ್, ಹಲಸಿನ ಉಪ್ಪಿನಕಾಯಿ, ಹಲಸಿನ ಸಿಹಿ ಉತ್ಪನ್ನ, ಐಸ್‌ಕ್ರೀಮ್, ಮನೆಯಲ್ಲೇ ತಯಾರಿಸುವ ಹಲಸಿನ ವೈನ್ ಸೇರಿದಂತೆ ಕಸಿ ಸಸಿ ಮಾಡುವುದು ಸೇರಿದಂತೆ ಹಣ್ಣನ್ನು ಪ್ಯಾಕ್ ಮಾಡಿ ಮಾರಾಟ ಮಾಡಬಹುದು ಹೀಗೆ ವೈವಿಧ್ಯಮಯವಾಗಿ ಮಾಡಿದಾಗ ಹೆಚ್ಚು ಲಾಭ ಪಡೆಯಬಹುದು ಎಂದರು.
ಇದರಿಂದಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ರೈತರಿಗೆ ಅತಿ ಹೆಚ್ಚು ಲಾಭವನ್ನು ತಂದು ಕೊಡುವಂತ ಉದ್ಯಮ ಇದಾಗಲಿದೆ. ಬೆಳ್ಳಾವಿ ಗ್ರಾಮವು ಮೊದಲಿನಿಂದಲೂ ಕೂಡ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಈ ಕೇಂದ್ರಕ್ಕೆ ಬರುವ ರೈತರಿಗೆ ಬೆಳ್ಳಾವಿ ಬಗ್ಗೆ ಅತಿ ಹೆಚ್ಚು ಗೌರವ ಮೂಡುವಂತಾಗಬೇಕು. ಗೌರವ ಬರುವುದು ಯಾವಾಗ ಎಂದರೆ ನಮ್ಮ ವಿಶ್ವಾಸಾರ್ಹತೆ ಹೆಚ್ಚಾಗಬೇಕು ಮತ್ತು ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಬೇಕು ಆಗ ಮಾತ್ರ ನಮ್ಮ ಎಫ್‌ಪಿಓ ಬಗ್ಗೆ ಗೌರವ ಮೂಡಲಿದೆ ಎಂದು ಸುರೇಶ್ ಗೌಡ ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಅತಿ ಹೆಚ್ಚು ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದೆ. ಸೂರ್ಯ ಡಿಎಪಿ ಇನ್ನಿತರ ರಾಸಾಯನಿಕ ಗೊಬ್ಬರಗಳಿಗೆ ಸಹಾಯಧನ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ವಾರ್ಷಿಕ 6,000 ಗಳ ಸಹಾಯಧನ ನೀಡುವ ಮುಖೇನ ರೈತರ ಜೊತೆಯಲ್ಲಿ ನಾವಿದ್ದೇವೆಂಬುದನ್ನು ಸಾಬೀತುಪಡಿಸಿದ್ದಾರೆ. ಈ ಕಂಪನಿಯು ಅತಿ ಹೆಚ್ಚು ರೈತರನ್ನು ಷೇರುದಾರರನ್ನಾಗಿ ಮಾಡಬೇಕು ಕೇಂದ್ರ ಸರ್ಕಾರ ನಬಾರ್ಡ್‌ನಿಂದ ಪ್ರತಿ ಶಾಖೆಗೆ 10 ಲಕ್ಷ ಅನುದಾನ ನೀಡಲಿದೆ. ರೈತ ಉತ್ಪಾದಕರ ಕಂಪನಿಯ ಸ್ಥಾಪನೆಯಿಂದಾಗಿ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಆಗುವ ಜೊತೆಗೆ ರೈತರು ಬೆಳೆದ ಬೆಳೆಗೆ ಅವರೇ ಬೆಲೆ ನಿಗದಿಪಡಿಸಲಿದ್ದಾರೆ. ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ದವಸ ಧಾನ್ಯಗಳು ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು
ಕಾರ್ಯಕ್ರಮದಲ್ಲಿ ತುಮಕೂರು ಲೋಕಸಭಾ ಸದಸ್ಯ ಜಿಎಸ್ ಬಸವರಾಜು, ಬೆಳ್ಳಾವಿ ಕಾರದ ಮಠದ ಪೂಜ್ಯ ಶ್ರೀಗಳು , ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವೀರಣ್ಣ. ಕೃಷಿ ನಿರ್ದೇಶಕ ಅಶ್ವಥ್ ನಾರಾಯಣ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಯೋಗಾನಂದ್,ಶಾಲಿನಿ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿ: ಶಾಸಕ
ಉತ್ಪಾದಕ ಮತ್ತು ಗ್ರಾಹಕರ ನಡುವೆ ಬೆವರು ಸುರಿಸದೆ ವಂಚನೆ ಮಾಡುತ್ತಿರುವ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡಬೇಕು. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಪದಾರ್ಥ ಒದಗಿಸಲು ರೈತ ಉತ್ಪಾದಕರ ಕಂಪನಿಗಳು ಶ್ರಮಿಸುತ್ತಿವೆ. ಕಂಪನಿಯಿಂದ ಕಡಿಮೆ ಬಾಡಿಗೆ ದರದಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಇತರೇ ಯಂತ್ರಗಳನ್ನು ಬಾಡಿಗೆಗೆ ಪಡೆಯಬಹುದು ಎಂದು ಶಾಸಕ ಸುರೇಶಗೌಡ ಹೇಳಿದರು. ದೇಶದಲ್ಲಿ ಅನೇಕ ಕಡೆ ಇದೀಗ ರೈತ ಉತ್ಪಾದಕ ಕಂಪನಿಗಳು ಆರಂಭವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಸಹಾಯ ಮತ್ತು ನೆರವನ್ನು ನೀಡುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ಮದ್ಯವರ್ತಿಗಳಿಗೆ ನೀಡದೆ. ತಾವೇ ಅವುಗಳನ್ನು ಸಂಸ್ಕರಣೆ ಮಾಡಿ ನೇರವಾಗಿ ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಲು ಅವಕಾಶವಿದೆ. ರೈತರು ಕೃಷಿ ಉಪಕರಣವನ್ನು ರಿಯಾಯಿತಿ ದರದಲ್ಲಿ ಪಡೆಯುವ ಉದ್ದೇಶದಿಂದ ಬೆಳ್ಳಾವಿ ಗ್ರಾಮದಲ್ಲಿ ರೈತ ಉತ್ಪಾದಕ ಕಂಪನಿ ಆರಂಭವಾಗಿದೆ ಎಂದರು.