ಶಿವಮೊಗ್ಗ: ನಿರೀಕ್ಷೆ ಮಿರಿ ವಿಮಾನ ನಿಲ್ದಾ​ಣ​ದತ್ತ ಬಂದ ಜನ​ಸಾ​ಗ​ರ

By Kannadaprabha News  |  First Published Feb 28, 2023, 6:18 AM IST

: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಭಾರೀ ಯಶಸ್ವಿಯಾಯಿತು. ನಿರೀಕ್ಷೆಗೂ ಮೀರಿ ಜನ ಸಾಗರ ವಿಮಾನ ನಿಲ್ದಾಣದತ್ತ ಹರಿದು ಬಂದಿತ್ತು. ಇದರಿಂದಾಗಿ ಆಯೋಜಕರು ಒಂದೆಡೆ ಭಾರೀ ಸಂಭ್ರಮ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಇವರನ್ನು ನಿಯಂತ್ರಿಸಲಾಗದೆ, ಊಟ, ನೀರು ನೀಡಲಾಗದೆ ಪರಿಪಾಟಲು ಅನುಭವಿಸಿದರು.


ಶಿವಮೊಗ್ಗ (ಫೆ.28) : ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಭಾರೀ ಯಶಸ್ವಿಯಾಯಿತು. ನಿರೀಕ್ಷೆಗೂ ಮೀರಿ ಜನ ಸಾಗರ ವಿಮಾನ ನಿಲ್ದಾಣದತ್ತ ಹರಿದು ಬಂದಿತ್ತು. ಇದರಿಂದಾಗಿ ಆಯೋಜಕರು ಒಂದೆಡೆ ಭಾರೀ ಸಂಭ್ರಮ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಇವರನ್ನು ನಿಯಂತ್ರಿಸಲಾಗದೆ, ಊಟ, ನೀರು ನೀಡಲಾಗದೆ ಪರಿಪಾಟಲು ಅನುಭವಿಸಿದರು.

ಬೆಳಗ್ಗೆ 11.30 ಕ್ಕೆ ಪ್ರಧಾನಿ(PM Narendra modi) ಆಗಮನ ಎಂದು ತಿಳಿಸಲಾಗಿದ್ದರೂ, 10 ಗಂಟೆಯ ಒಳಗೆ ವಿಮಾನ ನಿಲ್ದಾಣ ಆವರಣದಲ್ಲಿ ಇರಬೇಕೆಂಬ ಸೂಚನೆ ಜಿಲ್ಲಾಡಳಿತದಿಂದ ಇದ್ದುದರಿಂದ ಮುಂಜಾನೆಯಿಂದಲೇ ಎಲ್ಲ ಕಡೆಯಿಂದ ಜನರು ವಿಮಾನ ನಿಲ್ದಾಣದತ್ತ ಧಾವಿಸಿದರು. ಸುಮಾರು 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡುವುದಾಗಿ ಆಯೋಜಕರು ತಿಳಿಸಿದ್ದರು. ಈ ಸೀಟುಗಳೆಲ್ಲ ತುಂಬಿ ದೊಡ್ಡ ಸಂಖ್ಯೆಯಲ್ಲಿ ಜನ ನಿಂತು ಮೋದಿ ಭಾಷಣ ಆಲಿಸುವಂತಾಯಿತು. ವೇದಿಕೆಯ ಒಳ ಭಾಗದಲ್ಲಿ ಹಲವಾರು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿದ್ದು, ಇದರಿಂದ ಜನರು ಸುಲಭವಾಗಿ ಮೋದಿಯನ್ನು ಹತ್ತಿರದಿಂದ ವೀಕ್ಷಿಸಿದರು.

Tap to resize

Latest Videos

ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ: ನಾಳೆಯಿಂದ ಶುರು

ಭಾರೀ ಪೆಂಡಾಲು ವಿಶಾಲವಾಗಿದ್ದು, ಗಾಳಿ ಉತ್ತಮವಾಗಿ ಬರುತ್ತಿತ್ತು. ಜೊತೆಗೆ ಪ್ಯಾನುಗಳನ್ನು ಕೂಡ ಅಳವಡಿಸಲಾಗಿತ್ತು. ಹೀಗಾಗಿ ವೇದಿಕೆಯ ಒಳಗಿದ್ದ ಜನ ಸೆಖೆಯಿಂದ ಹೆಚ್ಚು ಬಳಲಿಲ್ಲ. ಆದರೆ ಹೊರಗಿದ್ದ ಜನರು ಬಿಸಿಲಿನಿಂದ ಹೈರಾಣಾದರು. ಭಾರೀ ಜನರ ಆಗಮನದಿಂದ ಬಿಜೆಪಿ ಸ್ವಯಂ ಸೇವಕರು, ಪೊಲೀಸರು, ಹೋಗಾರ್ಡ್ಸ್ ಇತರೆ ಸಿಬ್ಬಂದಿ ಕೂಡ ಸಾಕಷ್ಟುಸಮಸ್ಯೆ ಅನುಭವಿಸಿದರು.

ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. 12 ಗಂಟೆಯಿಂದಲೇ ಊಟ ವಿತರಣೆ ನಡೆಸಲಾಗುತ್ತಿದ್ದರೂ, ಹೆಚ್ಚಿದ ಜನರಿಂದಾಗಿ ಎಲ್ಲರಿಗೂ ಸಿಗಲಿಲ್ಲ. ಬೇರೆ ಬೇರೆ ಭಾಗದಿಂದ ಬಸ್ಸುಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಕೆಲವು ಬಸ್ಸುಗಳು ಕಾರ್ಯಕ್ರಮದ ಸ್ಥಳದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಇದ್ದು, ಅಲ್ಲಿಂದ ಜನ ನಡೆದುಕೊಂಡು ಬರುವಂತಾಯಿತು. ಖಾಸಗಿ ವಾಹನಗಳಲ್ಲಿ ಕೆಲವರಿಗೆ ಪಾಸ್‌ ನೀಡಿದ್ದು, ಅವರಿಗೆ ಒಳಗೆ ಅವಕಾಶ ನೀಡಲಾಗಿದ್ದರೆ, ಉಳಿದಂತೆ ಎಲ್ಲ ವಾಹನಗಳಿಗೆ ಬೇರೆ ಬೇರೆ ಭಾಗಗಳಲ್ಲಿ ಕಾಚಿನಕಟ್ಟೆರಸ್ತೆಯ ಎಡ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಸಾಕಷ್ಟುಅಚ್ಚುಕಟ್ಟಾಗಿ ಆಯೋಜಿಸಿದ್ದು, ಯಶಸ್ವಿಯಾದಂತಾಗಿದೆ.

ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಪ್ರಸ್ತಾಪಿಸದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ(Shivamggga airport)ದ ಕುರಿತು ಸಾಕಷ್ಟುಮಾತನಾಡಿದರು. ರಾಷ್ಟ್ರಕವಿ ಕುವೆಂಪು(Kuvempo)ಅವರ ಕುರಿತು ಕೂಡ ಮಾತನಾಡಿದರು. ಆದರೆ ಎಲ್ಲಿಯೂ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರನ್ನು ಇಡುತ್ತಿರುವ ಕುರಿತು ಪ್ರಸ್ತಾಪಿಸಲಿಲ್ಲ ಇದೇ ರೀತಿ ಸಾಕಷ್ಟುವಿವಾದಕ್ಕೆ ತುತ್ತಾಗಿರುವ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಯ ವಿಚಾರವನ್ನು ಕೂಡ ಪ್ರಸ್ತಾಪಿಸಲಿಲ್ಲ.

click me!