
ಮೈಸೂರು(ಜ.04): ಮಾರ್ಚ್ ತಿಂಗಳಿನಿಂದ ಏರ್‌ಕೇರಳದಿಂದ ಮೈಸೂರಿಗೆ ವಿಮಾನಯಾನ ಸೇವೆ ಪ್ರಾರಂಭ ಆಗುತ್ತದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಏರ್‌ಕೇರಳ ಮತ್ತು ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಮೈಸೂರಿನ ಪ್ರವಾಸೋದ್ಯಮ, ವಾಯುಯಾನ ಮತ್ತು ವ್ಯಾಪಾರ ಅವಕಾಶ ಹೆಚ್ಚಿಸುವ ದೃಷ್ಟಿಯಿಂದ ಈ ಸಭೆ ಆಯೋಜಿಸಲಾಗಿದೆ ಎಂದರು.
ಮೈಸೂರು: ಪ್ರಿನ್ಸೆಸ್ ರಸ್ತೆ ಎಂಬುದಕ್ಕೆ ದಾಖಲೆ ಸಲ್ಲಿಸಿದ ಸಂಸದ ಯದುವೀರ್
ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಸಂಪರ್ಕಕ್ಕೆ ಮನವಿ ಮಾಡಲಾಗಿತ್ತು. ಮೈಸೂರಿನಿಂದ ವಿಮಾನಯಾನಕ್ಕೆ ಬೇಡಿಕೆ ಇದೆ. ಮೈಸೂರು ಪ್ರವಾಸೋದ್ಯಮದ ಕೇಂದ್ರ ಬಿಂದು. ಇದರ ಜೊತೆಗೆ ಅನೇಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ ಎಂದು ಅವರು ಹೇಳಿದರು.
ನಂಜನಗೂಡು ಸುತ್ತಮುತ್ತ ಸಾಕಷ್ಟು ಕೈಗಾರಿಕೆಗಳು ಇವೆ. ಇದಕ್ಕೂ ಕೂಡ ಉತ್ತೇಜನ ಸಿಗುತ್ತದೆ. ಈ ಹಿಂದೆ ಮೈಸೂರಿನಿಂದ ಹಲವು ರಾಜ್ಯಗಳಿಗೆ ಸಂಪರ್ಕ ಇತ್ತು. ಆದರೆ ಕಾರಣಂತರಗಳಿಂದ ವಿಮಾನಗಳು ರದ್ದಾಗಿವೆ. ಈಗ ಸದ್ಯಕ್ಕೆ 18 ರಿಂದ 20 ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಈ ಪೈಕಿ ಏರ್‌ಕೇರಳ ಕೂಡ ಒಂದು ಎಂದರು.
ಈ ಹಿನ್ನೆಲೆಯಲ್ಲಿ ಮೈಸೂರಿನ ಟ್ರಾವಲರ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘದ ಸದಸ್ಯರ ಜೊತೆ ಸಭೆ ನಡೆಸಿದ್ದೇವೆ. ಅವರು ಕೂಡ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳ ಹಾರಾಟ ಆಗಲಿದೆ. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕೂಡ ಬೇಗ ಮಾಡುತ್ತೇವೆ. ಈಗಾಗಲೇ ಕೆಪಿಟಿಸಿಎಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಎಂದರು.
ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಏರ್‌ಕೇರಳ ಅಧ್ಯಕ್ಷ ಅಫಿ ಅಹ್ಮದ್, ಉಪಾಧ್ಯಕ್ಷ ಅಯೂಬ್ ಕಲ್ಲಡ, ಸಿಇಒ ಹರೀಶ್ ಕುಟ್ಟಿ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಅನೂಪ್ ಮೊದಲಾದವರು ಇದ್ದರು.
ಭಾರತದ ಹೊಸ ಏರ್‌ಲೈನ್ 'Air Kerala' ಅನಾವರಣ, ಜೂನ್‌ನಿಂದ ಕಾರ್ಯಾಚರಣೆ
ನವದೆಹಲಿ: ಅಕ್ಸಾ ಏರ್ ಬಳಿಕ ಭಾರತಕ್ಕೆ ಮತ್ತೊಂದು ಹೊಸ ಏರ್‌ಲೈನ್ ಸೇರ್ಪಡೆಯಾಗಿದೆ. 2025ರ ದ್ವಿತೀಯಾರ್ಧದಲ್ಲಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಕೇರಳ ಕಾರ್ಯಾರಂಭ ಮಾಡಲಿದೆ ಎಂದು ಏರ್ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್‌ಪೋರ್ಟ್ ಎಂಡಿ ಸಿ ದಿನೇಶ್ ಕುಮಾರ್ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೋಮವಾರ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಒಪ್ಪಂದ ಪತ್ರಕ್ಕೆ ಏರ್ ಕೇರಳ ಸಿಇಒ ಹರೀಶ್ ಕುಟ್ಟಿ ಮತ್ತು ಕಣ್ಣೂರು ಏರ್‌ಪೋರ್ಟ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಶ್ವಿನಿ ಕುಮಾರ್ ಸಹಿ ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಏರ್ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್‌ಪೋರ್ಟ್ ಎಂಡಿ ಸಿ ದಿನೇಶ್ ಕುಮಾರ್ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.
ಮೈಸೂರು ಅರಮನೆಯ ಎರಡನೇ ಕುಡಿಗೆ ಹೇಗಿಡ್ತಾರೆ ಹೆಸರು ನಿಮಗೆ ಗೊತ್ತಾ?
ಪ್ರಾರಂಭಿಕ ಹಂತದಲ್ಲಿ ಕಣ್ಣೂರಿನಿಂದ ಹತ್ತಿರದ ವಿಮಾನ ನಿಲ್ದಾಣಗಳಿಗೆ ಏರ್ ಕೇರಳ ಸೇವೆ ಆರಂಭವಾಗಲಿದೆ. ನಂತರ ವಿಮಾನಗಳ ಲಭ್ಯತೆಗೆ ಅನುಗುಣವಾಗಿ ಹೆಚ್ಚಿನ ದೈನಂದಿನ ಸೇವೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ. ಮೊದಲ ಹಂತದಲ್ಲಿ ಎಟಿಆರ್ ವಿಮಾನಗಳನ್ನು ಬಳಸಿ ದೇಶೀಯ ಸೇವೆಗಳನ್ನು ಮತ್ತು ನಂತರ ಸಿಂಗಲ್-ಐಲ್ ಜೆಟ್ ವಿಮಾನಗಳನ್ನು ಬಳಸಿ ದೇಶೀಯ ಮತ್ತು ಅಂತರಾಷ್ಟ್ರೀಯ ಸೇವೆಗಳನ್ನು ಆರಂಭಿಸಲು ಯೋಜಿಸಲಾಗಿದೆ.
ಏರ್ ಕೇರಳದೊಂದಿಗಿನ ಸಹಯೋಗ ಉತ್ತರ ಮಲಬಾರ್ ಅಭಿವೃದ್ಧಿಗೆ ಸಹಕಾರಿ ಎಂದು ಕಣ್ಣೂರು ಏರ್‌ಪೋರ್ಟ್ ಎಂಡಿ ಸಿ ದಿನೇಶ್ ಕುಮಾರ್ ಹೇಳಿದರು. ಏರ್ ಕೇರಳದ ಯಶಸ್ಸು ಮತ್ತು ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಕಣ್ಣೂರು ಏರ್‌ಪೋರ್ಟ್ ಬದ್ಧವಾಗಿದೆ. ಈ ಸಹಭಾಗಿತ್ವ ಎರಡೂ ಕಡೆಗಳಿಗೂ ಲಾಭದಾಯಕವಾಗಲಿದೆ ಮತ್ತು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಡಿಮೆ ದರದಲ್ಲಿ ಹೆಚ್ಚಿನ ಸಂಪರ್ಕ ಪಡೆಯಬೇಕೆಂಬ ಪ್ರದೇಶದ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುತ್ತದೆ ಎಂದು ಅವರು ಹೇಳಿದರು.