ಕಾಂಗ್ರೆಸ್‌ ಆಡಳಿತದಲ್ಲಿ ಹೆಚ್ಚು ಅಭಿವೃದ್ಧಿ; ವಿಜಯಾನಂದ ಕಾಶೆಪ್ಪನವರ

Published : Nov 12, 2022, 03:50 AM IST
ಕಾಂಗ್ರೆಸ್‌ ಆಡಳಿತದಲ್ಲಿ ಹೆಚ್ಚು ಅಭಿವೃದ್ಧಿ; ವಿಜಯಾನಂದ ಕಾಶೆಪ್ಪನವರ

ಸಾರಾಂಶ

ಕಾಂಗ್ರೆಸ್‌ ಆಡಳಿತದಲ್ಲಿ ಹೆಚ್ಚು ಅಭಿವೃದ್ಧಿ ತಾಲೂಕಿನ ಅಭಿವೃದ್ಧಿ ಕುರಿತು ಶಾಸಕ ದೊಡ್ಡನಗೌಡರನ್ನು ಬಹಿರಂಗ ಚರ್ಚೆ ಆಹ್ವಾನಿಸಿದ ಕಾಶಪ್ಪನವರ

ಹುನಗುಂದ (ನ.12) : ಕಾಂಗ್ರೆಸ್‌ ಸರ್ಕಾರದ ಅಧಿಕಾರದ ಅವಧಿಯಲ್ಲಾದಷ್ಟುಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರ ಅವಧಿಯಲ್ಲಿ ಆಗಿಲ್ಲ. ಮತಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಶಾಸಕ ದೊಡ್ಡನಗೌಡ ಪಾಟೀಲರಿಗೆ ಬಹಿರಂಗ ಚರ್ಚೆಗೆ ಆಹ್ವಾನಿಸುತ್ತೇನೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.

 

ನದಿಯ ನೀರು ಹೆಚ್ಚಾಗಲಿದ್ದು ಸುರಕ್ಷಿತ ಸ್ಥಳಗಳಿಗೆ ತೆರಳಿ; ವಿಜಯಾನಂದ ಕಾಶಪ್ಪನವರ

ಪಟ್ಟಣದ ವಿ.ಮ.ವೃತ್ತದಲ್ಲಿ ಹುನಗುಂದ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹುನಗುಂದ ಮತಕ್ಷೇತ್ರದ ಹುನಗುಂದ ಮತ್ತು ಇಳಕಲ್ಲ ಬ್ಲಾಕ್‌ ಕಾಂಗ್ರೆಸ್‌ನ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ಸೇರ್ಪಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹುನಗುಂದ ಪಟ್ಟಣದ ಗುಡ್ಡದಲ್ಲಿನ 24 ಎಕರೆ ಜಮೀನನಲ್ಲಿ ವಸತಿ ರಹಿತ ಬಡವ, ದೀನ,ದಲಿತರಿಗೆ, ಅಲ್ಪಸಂಖ್ಯಾತರಿಗೆ ರಾಜೀವಗಾಂಧಿ ಹೌಸಿಂಗ್‌ ಬೋರ್ಡ್‌ನಿಂದ 950 ಜನರ ಹಕ್ಕು ಪತ್ರವನ್ನು ಸಿದ್ಧಪಡಿಸಲಾಗಿತ್ತು. ಆದರೆ ಶಾಸಕ ದೊಡ್ಡನಗೌಡ ಪಾಟೀಲರು 950 ಹಕ್ಕು ಪತ್ರಗಳು ಅನರ್ಹ ಫಲಾನುಭವಿಗಳಿಗೆ ನೀಡಿದ್ದಾರೆ. ಅವುಗಳನ್ನು ರದ್ದು ಪಡಿಸುವಂತೆ ಹೌಸಿಂಗ್‌ ಬೋರ್ಡ್‌ಗೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ .270 ಕೋಟಿ ಅನುದಾನದಲ್ಲಿ ಕೃಷ್ಣಾ ಮತ್ತು ಮಲಪ್ರಭೆಯ ದಡದಲ್ಲಿ 10 ಗ್ರಾಮಗಳನ್ನು ಯುಕೆಪಿಯಡಿಯಲ್ಲಿ ಮುಳುಗಡೆ ಮಾಡಲಾಗಿದೆ. ಹೂವನೂರ,ಬೆಳಗಲ್ಲ, ಚೌಡಕಮಲದಿನ್ನಿ, ಗಂಜೀಹಾಳ, ಮೇದಿನಾಪೂರ, ನಂದನೂರ, ಕೈರವಾಡಗಿ, ಪಾಪಥನಾಳ, ಚಿಕ್ಕಮಾಗಿ ಸೇರಿದಂತೆ ತಾಲೂಕಿನ 26 ಗ್ರಾಮಗಳು ಮುಳುಗಡೆಗೆ ಒಳಪಡಿಸುವ ಮತ್ತು ಶಾಶ್ವತ ವ್ಯವಸ್ಥೆ ಮಾಡಲಾಗುವುದು. ಮಾಜಿ ಸಿಎಂ ಸಿದ್ದರಾಮಯ್ಯನವರು ಈ ರಾಜ್ಯದ ರೈತರ ಸಾಲ ಮನ್ನಾ ಮಾಡಿದಾಗ ಹುನಗುಂದ ಮತಕ್ಷೇತ್ರಕ್ಕೆ 116 ಕೋಟಿ ಹಣದಲ್ಲಿ 26,175 ಜನ ರೈತರ 50 ಸಾವಿರ ಸಾಲವನ್ನು ಮನ್ನಾ ಮಾಡಲಾಗಿದೆ ಎಂದರು.

ಇಳಕಲ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲರಜಾಕ ತಟಗಾರ, ಹುನಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಹುನಗುಂದ ಇಳಕಲ್ಲ ತಾಲೂಕಿನ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷ ಗಂಗಾಧರ ದೊಡಮನಿ ಮತ್ತು ಅಬ್ದುಲ್‌ ರಜಾಕ ತಟಗಾರ ಅವರಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪಕ್ಷದ ಧ್ವಜ ನೀಡುವ ಮೂಲಕ ಜವಾಬ್ದಾರಿ ಕೊಡಲಾಯಿತು. ನಂತರ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಗಳಿಗೆ ಪಕ್ಷದ ಶಾಲು ಹಾಕಿ ಅಭಿನಂದನಾ ಪತ್ರ ನೀಡಿ ಪಕ್ಷದ ಜವಾಬ್ದಾರಿಯನ್ನು ವಹಿಸಲಾಯಿತು. ಮಾಜಿ ಜಿಪಂ ಅಧ್ಯಕ್ಷ ಸುಭಾಸ ತಾಳಿಕೋಟಿ, ಮಹಾಂತೇಶ ಅವಾರಿ, ಸಿದ್ದಪ್ಪ ಹೊಸೂರ, ಅಬ್ದುಲಜಬ್ಬಾರ ಕಲಬುರ್ಗಿ, ಅಮರೇಶ ನಾಗೂರ, ವಿಜಯ ಗದ್ದನಕೇರಿ, ದೀಪಾ ಸುಂಕದ ಮಾತನಾಡಿದರು.

 

ಬಣಜಿಗರ ಅವಹೇಳನ: ಕಾಶಪ್ಪನವರ & ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಪರವೇಜ ಖಾಜಿ, ಉಪಾಧ್ಯಕ್ಷೆ ಶಾಂತಮ್ಮ ಮೇಲಿನಮನಿ, ಸದಸ್ಯರಾದ ಶರಣು ಬೆಲ್ಲದ, ಯಲ್ಲಪ್ಪ ನಡುವಿನಮನಿ, ಮೈನು ಧನ್ನೂರ, ಮಹಮ್ಮದ ದೋಟಿಹಾಳ, ಮುಖಂಡರಾದ, ಶಿವಾನಂದ ಕಂಠಿ, ಬಸವರಾಜ ಅಂಗಡಿ, ಗುರಬಸಪ್ಪ ದಂಡೀನ, ಬಿ.ವಿ.ಪಾಟೀಲ, ರಜಾಕ ರೇಷ್ಮಿ, ಶಂಕ್ರಪ್ಪ ನೇಗಲಿ, ಮಲ್ಲಿಕಾರ್ಜುನ ಹೊಸಮನಿ, ರಾಜು ಬಡಿಗೇರ, ರಫೀಕ್‌ ವಾಲೀಕಾರ, ವಿಶ್ವನಾಥ ಬ್ಯಾಳಿ, ಸೈಯದ್‌ ಪೀರಜಾಧೆ, ರವಿ ಮಸ್ಕಿ, ಬಸವರಾಜ ಹೊಸಮನಿ, ಚಂದಪ್ಪ ಮಾದರ, ನೀಲಪ್ಪ ತಪೇಲಿ, ಮಾದವ ದೇಶಪಾಂಡೆ, ಮುತ್ತಣ್ಣ ಕಲಗೋಡಿ, ಸಂಗಪ್ಪ ಹೂಲಗೇರಿ, ರವಿ ಹುಚನೂರ, ಸುರೇಶ ಜಂಗ್ಲಿ, ಮುತ್ತು ಲೋಕಾಪೂರ ಸೇರಿದಂತೆ ಅನೇಕರು ಇದ್ದರು.

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ